Ad Widget .

ಸುಮಲತಾ ಅಂಬರೀಶ್ ಅವರಿಗೆ ಗೌರವ ಡಾಕ್ಟರೇಟ್

ಸಮಗ್ರ ನ್ಯೂಸ್: ಕನ್ನಡ ಚಿತ್ರರಂಗದ ಹಿರಿಯ ನಟಿ ಮತ್ತು ಸಂಸದೆಯಾಗಿರುವ ಸುಮಲತಾ ಅಂಬರೀಶ್ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. ಸಮಾಜ ಸೇವೆ, ರಾಜಕೀಯ ಮತ್ತು ಚಲನಚಿತ್ರಗಳಲ್ಲಿನ ಸೇವೆಗಾಗಿ ಯುಎಸ್​ಎ ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಿಂದ ಅನುಮೋದಿಸಲಾದ ಮತ್ತು ಮಾನ್ಯತೆ ಪಡೆದಿರುವ ಹೈದರಾಬಾದ್​ನ ಯುನೈಟೆಡ್ ಥಿಯೋಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್​ನಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ. ಗೌರವ ಡಾಕ್ಟರೇಟ್ ಪಡೆದುಕೊಂಡಿರುವುದಕ್ಕೆ ಸುಮಲತಾ ಅವರು ಗೌರವ ಪೂರ್ವಕವಾಗಿ ಧನ್ಯವಾದವನ್ನು ಅರ್ಪಿಸಿದ್ದಾರೆ.

Ad Widget . Ad Widget .

ಈ ಕುರಿತಾಗಿ ಫೇಸ್​ಬುಕ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದೆ ಸುಮಲತಾ, ಈ ಗೌರವ ನನ್ನ ಮುಂದಿನ ಹಾದಿಯಲ್ಲಿ ನನ್ನನ್ನು ಪ್ರೇರೇಪಿಸಲು ಇದು ಸ್ಫೂರ್ತಿಯಾಗಲಿದೆ. ನಾನು ಈ ಗೌರವವನ್ನು ನನ್ನ ಪತಿ ಅಂಬರೀಶ್, ನನ್ನ ಹೆತ್ತವರು, ನನ್ನ ಹಿತೈಷಿಗಳು, ಚಲನಚಿತ್ರ ಮತ್ತು ರಾಜಕೀಯ ಉದ್ಯಮದ ಬೆಂಬಲಿಗರಿಗೆ ಅರ್ಪಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *