Ad Widget .

ಕನ್ನಡ ಬೋರ್ಡ್ ಅಳವಡಿಕೆಗೆ ಫೆ.28 ಡೆಡ್ ಲೈನ್ |ಬಿಬಿಎಂಪಿಯಿಂದ ಅಂಗಡಿಗಳ ಮಾಲೀಕರಿಗೆ ನೋಟಿಸ್

ಸಮಗ್ರ ನ್ಯೂಸ್:ಸಿಲಿಕಾನ್ ಸಿಟಿಯಲ್ಲಿ ಕನ್ನಡ ಮಾಯವಾಗ್ತಿರೋ ಹೊತ್ತಲ್ಲೇ, ಫೆಬ್ರವರಿ 28ರ ಒಳಗೆ ಶೇಕಡಾ 60ರಷ್ಟು ಕನ್ನಡ ಬೋರ್ಡ್ ಬಳಸುವಂತೆ ಬಿಬಿಎಂಪಿ ಅಂಗಡಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡುತ್ತಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಫೆಬ್ರವರಿ 28ಕ್ಕೆ ಕನ್ನಡ ಬೋರ್ಡ್ ಅಳವಡಿಕೆಗೆ ಡೆಡ್ ಲೈನ್ ಹಿನ್ನಲೆ ಎಚ್ಚೆತ್ತುಕೊಂಡ ಪಾಲಿಕೆಯಿಂದ 28 ರೊಳಗಾಗಿ ಕನ್ನಡ ಬೋರ್ಡ್ ಅಳವಡಿಕೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಂಗಡಿಗಳು, ವ್ಯಾಪಾರಸ್ಥರಿಗೆ ನೋಟಿಸ್ ನೀಡುತ್ತಿದೆ. ಈ ವರೆಗೆ ಒಟ್ಟು 34262 ಸಾವಿರಕ್ಕೂ ಅಧಿಕ ನೋಟಿಸ್ ನೀಡಲಾಗಿದೆ. ಬೊಮ್ಮನಹಳ್ಳಿ – 6762 ಯಲಹಂಕ – 4518, ಬೆಂಗಳೂರು ದಕ್ಷಿಣ – 3747, ಮಹದೇವಪುರ – 4838, ದಾಸರಹಳ್ಳಿ – 1458, ಬೆಂಗಳೂರು ಪಶ್ಚಿಮ – 5650, ಪೂರ್ವ ವಲಯ – 5579 ರಾಜ ರಾಜೇಶ್ವರಿ ವಲಯದಲ್ಲಿ 2010 ನೋಟಿಸ್ ನೀಡಲಾಗಿದೆ.

Ad Widget . Ad Widget . Ad Widget .

ಈ ಹಿಂದೆ ನಾಮಫಲಕದಲ್ಲಿ ಮೇಲೆ ಕನ್ನಡ ಕೆಳಗಡೆ ಯಾವುದೇ ಭಾಷೆ ಬೇಕಾದರು ಇರಬೇಕು ಎಂದು ಹೇಳಿದ್ದರೂ ಈಗ ಬೋರ್ಡ್ ನಲ್ಲಿ ಕನ್ನಡ 60% ಇರಬೇಕು ಅಂತ ಹೇಳುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋರ್ಡ್ ಅಳವಡಿಸಿದ್ದೇವೆ ಈಗ ಮತ್ತೆ ಬೋರ್ಡ್ ಅಳವಡಿಸೋದು ಕಷ್ಟ ಎಂದು ಕೆಲ ಅಂಗಡಿ ಮಾಲೀಕರು ಹೇಳಿದ್ದಾರೆ.
ಇನ್ನೇನಾಗುತ್ತೋ ಫೆಬ್ರವರಿ 28 ರ ಬಳಿಕ ನೋಡಬೇಕಿದೆ.

Leave a Comment

Your email address will not be published. Required fields are marked *