Ad Widget .

ಅಕೌಂಟೆಂಟ್, ಕ್ಲರ್ಕ್ ಹುದ್ದೆಗಳಲ್ಲಿ ಉದ್ಯೋಗವಕಾಶ! PU, ಡಿಗ್ರಿ ಪಾಸ್ ಆಗಿದ್ರೆ ಸಾಕು

ಸಮಗ್ರ ಉದ್ಯೋಗ: ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ನೌಕರರ ಸಹಕಾರ ಸಂಘವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 ಅಕೌಂಟೆಂಟ್, ಕ್ಲರ್ಕ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 31, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್/ ಪೋಸ್ಟ್ ಮೂಲಕ ಅಪ್ಲೈ ಮಾಡಬೇಕು. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Ad Widget . Ad Widget .

ಹುದ್ದೆಯ ಮಾಹಿತಿ:
ಅಕೌಂಟೆಂಟ್/ ಕಂಪ್ಯೂಟರ್ ಆಪರೇಟರ್-1
ಕ್ಲರ್ಕ್​/ ಕಂಪ್ಯೂಟರ್ ಆಪರೇಟರ್-1
ಅಟೆಂಡರ್/ ಸೆಪಾಯ್-1

Ad Widget . Ad Widget .

ವಿದ್ಯಾರ್ಹತೆ:
ಅಕೌಂಟೆಂಟ್/ ಕಂಪ್ಯೂಟರ್ ಆಪರೇಟರ್-ಪದವಿ
ಕ್ಲರ್ಕ್​/ ಕಂಪ್ಯೂಟರ್ ಆಪರೇಟರ್- ಪಿಯುಸಿ
ಅಟೆಂಡರ್/ ಸೆಪಾಯ್- 10ನೇ ತರಗತಿ

ವಯೋಮಿತಿ:
ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ನೌಕರರ ಸಹಕಾರ ಸಂಘ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 31, 2024ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಪ್ರವರ್ಗ- 2ಎ/2ಬಿ/3ಬಿ ಅಭ್ಯರ್ಥಿಗಳು- 3 ವರ್ಷ
SC/ST/ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ

ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು 200 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಪರೀಕ್ಷಾ ಶುಲ್ಕ:
SC/ST ಅಭ್ಯರ್ಥಿಗಳು- 500 ರೂ.
ಸಾಮಾನ್ಯ ಅಭ್ಯರ್ಥಿಗಳು- 1000 ರೂ.
ಪಾವತಿಸುವ ವಿಧಾನ: ಕ್ಯಾಶ್/ ಡಿಮ್ಯಾಂಡ್ ಡ್ರಾಫ್ಟ್

ಉದ್ಯೋಗದ ಸ್ಥಳ:
ವಿಜಯಪುರ

ವೇತನ:
ಅಕೌಂಟೆಂಟ್/ ಕಂಪ್ಯೂಟರ್ ಆಪರೇಟರ್- ಮಾಸಿಕ ₹ 25,800-51,400
ಕ್ಲರ್ಕ್​/ ಕಂಪ್ಯೂಟರ್ ಆಪರೇಟರ್- ಮಾಸಿಕ ₹ 23,500-47,650
ಅಟೆಂಡರ್/ ಸೆಪಾಯ್- ಮಾಸಿಕ ₹ 18,600-32,600

ಆಯ್ಕೆ ಪ್ರಕ್ರಿಯೆ:
ಕ್ವಾಲಿಫಿಕೇಶನ್
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಅಧ್ಯಕ್ಷರು
ಸಿಬ್ಬಂದಿ ನೇಮಕಾತಿ ಉಪಸಮಿತಿ
ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ನೌಕರರ ಸಹಕಾರ ಸಂಘ
ವಿಜಯಪುರ

Leave a Comment

Your email address will not be published. Required fields are marked *