Ad Widget .

ಜ.21ರಂದು ಕೊಲ್ಲಮೊಗ್ರು ಹರಿಹರ ಗ್ರಾಮವಾಸ್ತವ್ಯ ಕುರಿತು ಪೂರ್ವಭಾವಿ ಸಭೆ

ಸಮಗ್ರ ಸಮಾಚಾರ; ದ.ಕ. ಜಿಲ್ಲೆ ಮತ್ತು ಕೊಡಗು ಜಿಲ್ಲೆ ಗಡಿಭಾಗ ಪುಷ್ಪಗಿರಿ ವನ್ಯಧಾಮದ ತಟದ ಗ್ರಾಮಗಳಾದ ಕೊಲ್ಲಮೊಗ್ರು ಹರಿಹರ ಅವಳಿ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಪತ್ರಕರ್ತರ ಸಂಘ ಮತ್ತು ಸುಬ್ರಹ್ಮಣ್ಯ ಪ್ರಸ್ ಕ್ಲಬ್ ಆಶ್ರಯದಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಜಿಲ್ಲಾಡಳಿತ, ತಾಲೂಕು ಆಡಳಿತ ಊರವರ ಸಹಕಾರದಲ್ಲಿ ಫೆಬ್ರವರಿ ತಿಂಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಕೊಲ್ಲಮೊಗ್ರು ಹರಿಹರ ಗ್ರಾಮ ಪಂಚಾಯತು ವ್ಯಾಪ್ತಿಯ ಪ್ರಮುಖ ನಾಗರಿಕರ ಪೂರ್ವಭಾವಿ ಸಭೆ ಜ.21 ರಂದು ಕೊಲ್ಲಮೊಗ್ರು ಮಯೂರ ಕಲಾ ಮಂದಿರದಲ್ಲಿ ಬೆಳಗ್ಗೆ 11ಕ್ಕೆ ನಡೆಯಲಿದೆ ಎಂದು ದ.ಕ ಜಿಲ್ಲೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಇಂದ್ರಾಜೆ ತಿಳಿಸಿದ್ದಾರೆ.

Ad Widget . Ad Widget .


ಪಶ್ಚಿಮ ಘಟ್ಟ ತಪ್ಪಲಿನ ಈ ಪ್ರದೇಶ ಜಿಲ್ಲಾ ಕೇಂದ್ರದಿಂದ ತುತ್ತ ತುದಿಯಲ್ಲಿರುವ ಜನವಸತಿ ಗ್ರಾಮಗಳಾಗಿದ್ದು ಮೂಲಸೌಕರ್ಯಕ್ಕೆ ಸಂಬಂದಿಸಿ ಗುಡ್ಡಗಾಡು ಈ ಭಾಗವಾದ ಈ ಪರಿಸರದ ಜನರ ನಾನಾ ಸಮಸ್ಯೆಗಳನ್ನು ಸರಕಾರದ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನವಾಗಿ ಪತ್ರಕರ್ತರ ಗ್ರಾಮವಾಸ್ತವ್ಯ ನಡೆಯಲಿದೆ.

Ad Widget . Ad Widget .


ಹಳ್ಳಿಯ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಆಡಳಿತದ ಗಮನ ಸೆಳೆಯುವುದರ ಜೊತೆಗೆ. ಸರಕಾರದ ವಿವಿಧ ಯೋಜನೆ ಸೌಲಭ್ಯಗಳನ್ನು ಹಳ್ಳಿ ಜನರಿಗೆ ಪರಿಚಯಿಸಿ ಮಾಹಿತಿ ನೀಡುವ ಸಲುವಾಗಿಯೂ ಗ್ರಾಮ ವಾಸ್ತವ್ಯ ವಿಶೇಷತೆ ಪಡೆದಿದೆ. ಪತ್ರಕರ್ತರ ಗ್ರಾಮವಾಸ್ತವ್ಯ ಕಲ್ಪನೆ ವಿಶೇಷವಾಗಿದ್ದು ಗ್ರಾಮದ ನಾಗರಿಕರ ಸಹಕಾರದಲ್ಲಿ ಯಶಸ್ವಿಯಾಗಿ ನಡೆಸಲು ಉಭಯ ಗ್ರಾಮ ಪಂಚಾಯತು ವ್ಯಾಪ್ತಿಯ ನಾಗರಿಕರು ಅಂದು ಗರಿಷ್ಠ ಪ್ರಮಾಣದಲ್ಲಿ ಉಪಸ್ಥಿತರಿದ್ದು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ. ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಸಚಿವರು, ಶಾಸಕರು ಸಹಿತ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತಿದೆ. ರವಿವಾರದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ರೂಪುರೇಷೆ ಸಿದ್ದಪಡಿಸಲಾಗುವುದು ಎಂದವರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *