ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಮುಳುಗಿ ಬಾಲಕ ಸಾವು

ಸಮಗ್ರ ನ್ಯೂಸ್: ಶಾಲಾ ಬಾಲಕನೋರ್ವ ನೇತ್ರಾವತಿ ನದಿಯಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಾವೂರ ಎಂಬಲ್ಲಿ ನಡೆದಿದೆ. ಇಲ್ಲಿನ ಅಲ್ಲಿಪಾದೆ ನಾವೂರ ಗ್ರಾಮದ ಕೋಡಿಬೈಲು ನಿವಾಸಿ ಪ್ರಜ್ವಲ್ ನಾಯಕ್ (13) ಮೃತಪಟ್ಟ ಬಾಲಕ.

Ad Widget ... ..

ನಾವೂರ ಗ್ರಾಮದ ನೆಕ್ಕಿಲಾರು ಎಂಬಲ್ಲಿ ಸ್ನೇಹಿತರ ಜೊತೆ ನದಿಯ ಬದಿಗೆ ತೆರಳಿದ ವೇಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ . ಕೂಡಲೇ ಸ್ಥಳೀಯ ಮುಳುಗು ತಜ್ಞರು ನೀರಿಗೆ ಹಾರಿ ಬಾಲಕನನ್ನು ಮೇಲಕ್ಕೆ ಎತ್ತಿ ತಂದರೂ ಅದಾಗಲೇ ಬಾಲಕ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget

Leave a Comment

Your email address will not be published. Required fields are marked *