Ad Widget .

ಅಯೋಧ್ಯೆ ಶ್ರಿರಾಮ ಪ್ರಾಣಪ್ರತಿಷ್ಠೆಗೆ ತುಳುನಾಡಿನ ಪುರೋಹಿತ|ಅಪೂರ್ವ ಅವಕಾಶ ಪಡೆದ ಸುಳ್ಯದ ಡಾ.ಕೆ.ಗಣಪತಿ ಭಟ್

ಸಮಗ್ರ ನ್ಯೂಸ್: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆಗೆ ತುಳುನಾಡಿನ ಸುಳ್ಯ ತಾಲೂಕಿನ ಸಂಸ್ಕೃತ ವಿದ್ವಾಂಸರೊಬ್ಬರು ಆಯ್ಕೆಯಾಗಿದ್ದಾರೆ.

Ad Widget . Ad Widget .

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಕೆಮನಬಳ್ಳಿಯ ಶಾರದಾ ಮತ್ತು ಗೋಪಾಲಕೃಷ್ಣ ಭಟ್ ಅವರ ಪುತ್ರ ಪ್ರಸ್ತುತ ತಿರುಪತಿಯ ರಾಷ್ಟ್ರೀಯ ಸಂಸ್ಕ್ರತ ವಿ.ವಿಯ ಪರಮಚಾರ್ಯ ಗುರುಕುಲದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಕೆ. ಗಣಪತಿ ಭಟ್ ಅವಕಾಶ ಪಡೆದುಕೊಂಡವರು.

Ad Widget . Ad Widget .

ಜ. 22ರಂದು ಅಯೋಧ್ಯೆಯಲ್ಲಿ ಪ್ರತಿಷ್ಠೆಗೊಳ್ಳಲಿರುವ ರಾಮಲಲ್ಲಾ ವಿಗ್ರಹದ ಧಾರ್ಮಿಕ ವಿಧಿ ವಿಧಾನಗಳು ಜ. ೧೬ರಿಂದ ಆರಂಭಗೊಂಡಿದ್ದು, ಕಾಶಿಯ ಖ್ಯಾತ ವಿದ್ವಾಂಸ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಮತ್ತು ಪೂಜ್ಯ ಲಕ್ಷ್ಮೀಕಾಂತ್ ದೀಕ್ಷಿತ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿವೆ.

೧೦೧ ಪ್ರಧಾನ ಅರ್ಚಕರಲ್ಲಿ ಒರ್ವ ಕನ್ನಡಿಗ;
ರಾಮಲಲ್ಲಾನ ವಿಗ್ರಹ ಪ್ರತಿಷ್ಠೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ನೇಮಕವಾಗಿರುವ ೧೦೧ ಮಂದಿ ಪ್ರಧಾನ ಪುರೋಹಿತರಲ್ಲಿ ಡಾ.ಕೆ.ಗಣಪತಿ ಭಟ್ ಒಬ್ಬರು. ಇವರ ನಾಯಕತ್ವದಲ್ಲಿ ೪೦ ಮಂದಿ ಆರ್ಚಕರಿರಲಿದ್ದಾರೆ. ಕಾಶಿಯ ವಿದ್ವಾಂಸರಾದ ಗಣೇಶ್ವರ ಶಾಸ್ತ್ರಿ ಮತ್ತು ಲಕ್ಷ್ಮಿಕಾಂತ್ ದೀಕ್ಷಿತ್ ಅವರು ಡಾ. ಕೆ. ಗಣಪತಿ ಭಟ್ ಅವರ ಹೆಸರನ್ನು ಸೂಚಿಸಿದ್ದಾರೆ. ಡಾ. ಕೆ. ಗಣಪತಿ ಅವರು ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ಪುರೋಹಿತರಾಗಿದ್ದಾರೆ.

೧೯೬೨ರಲ್ಲಿ ಜನಿಸಿದ ಡಾ.ಕೆ.ಗಣಪತಿ ಭಟ್ ಜಾಲ್ಸೂರು ಗ್ರಾಮದ ಕೆಮನಬಳ್ಳಿಯ ಸ.ಕಿ.ಪ್ರಾ. ಶಾಲೆಯಲ್ಲಿ ೪ನೇ ತರಗತಿವರೆಗೆ, ಅಡ್ಕಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭ನೇ ತರಗತಿ ವರೆಗೆ ಶಿಕ್ಷಣ ಪೂರೈಸಿದರು. ಪ್ರೌಢ ಶಿಕ್ಷಣವನ್ನು ಪೆರ್ನಾಜೆಯ ಪ್ರೌಢಶಾಲೆಯಲ್ಲಿ ಪಡೆದರು. ೧೯೭೮ರಲ್ಲಿ ಕಾಂಚಿ ಕಾಮಕೋಟಿ ವಿದ್ಯಾಪೀಠದಲ್ಲಿ ಋಗ್ವೇದದಲ್ಲಿ ಪದವಿ ಶಿಕ್ಷಣ ಪಡೆದರು. ಸಂಸ್ಕೃತದಲ್ಲಿ ಪದವಿ ಶಿಕ್ಷಣದ ಬಳಿಕ ಮಂತ್ರಾಲಯ ಶ್ರೀ ರಾಘವೇಂದ್ರ ಮಠದಲ್ಲಿ ಶಾಸ್ತ್ರ ಆಧ್ಯಯನ ವಿಷಯದಲ್ಲಿ ಎಂ.ಎ. ಪದವಿ ಪಡೆದರು. ಬಳಿಕ ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿ.ವಿ.ಯಲ್ಲಿ ಪಿ.ಎಚ್.ಡಿ ಪದವಿ, ಮದ್ರಾಸ್ ವಿ.ವಿ.ಯಲ್ಲಿ ಸಂಸ್ಕೃತ ವೇದಾಂತ ಮತ್ತು ನ್ಯಾಯಶಾಸ್ತ್ರ ವಿಷಯದಲ್ಲಿ ಮತ್ತೊಂದು ಎಂ.ಎ ಪದವಿಯನ್ನು ಚಿನ್ನದ ಪದಕದೊಂದಿಗೆ
ಪಡೆದಿರುವ ಗಣಪತಿ ಭಟ್ ಭಾರತ ಸರಕಾರ ನಡೆಸಿದ ಯುಜಿಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು.

ಶಿಕ್ಷಣದ ಮೂಲಕ ಸಂಸ್ಕೃತ ಪಾಂಡಿತ್ಯ ಸಂಪಾದಿಸಿದ ಡಾ. ಗಣಪತಿ ಭಟ್ ಕಾಲಡಿಯ ಶಂಕರಾಚಾರ್ಯ ವಿ.ವಿ.ಯಲ್ಲಿ ೮ ವರ್ಷ ಉಪನ್ಯಾಸಕರಾಗಿ ಬೋಧನೆ, ತಿರುಪತಿ ರಾಷ್ಟ್ರೀಯ ಸಂಸ್ಕ್ರತ ವಿ.ವಿ.ಯಲ್ಲಿ ಪ್ರೊಫೆಸರ್ ಆಗಿ, ಪರೀಕ್ಷಾಂಗ ಕುಲಸಚಿವರಾಗಿ, ಪ್ರಸ್ತುತ ತಿರುಪತಿ ವಿ.ವಿ.ಯ ಪರಮಚಾರ್ಯ ಗುರುಕುಲದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಡಾ.ಕೆ.ಗಣಪತಿ ಭಟ್ ಅವರು ೪೦ ಮಂದಿಗೆ ಪಿ.ಎಚ್.ಡಿ. ಮಾರ್ಗದರ್ಶನ ಮತ್ತು ೨೦ ಮಂದಿಗೆ ಎಂ.ಫಿಲ್.ಗೆ ಮಾರ್ಗದರ್ಶನ ನೀಡಿದ್ದಾರೆ. ಕೇರಳ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಪರೀಕ್ಷಾಧಿಕಾರಿಯಾಗಿ, ದೇಶದ ವಿವಿಧ ೧೮ ವಿಶ್ವವಿದ್ಯಾಲಯಗಳ ಪಿ.ಎಚ್.ಡಿ ಮೌಲ್ಯಮಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೋಟ್ – ೧
ಹತ್ತನೇ ತರಗತಿಯ ಬಳಿಕ ಸಂಸ್ಕೃತ ವಿಷಯದಲ್ಲಿ ಆಳವಾಗಿ ಅಧ್ಯಯನದಲ್ಲಿ ತೊಡಗಿಕೊಂಡೆ. ಇದರಿಂದ ಸಂಸ್ಕೃತ ವಿಷಯದಲ್ಲಿ ಅಳವಾಗಿ ಪಾಂಡಿತ್ಯ ಪಡೆಯಲು ಸಾಧ್ಯವಾಯಿತು. ಕಾಶಿಯ ವಿದ್ವಾಂಸರಾದ ಗಣೇಶ್ವರ ಶಾಸ್ತ್ರಿ ಮತ್ತು ಲಕ್ಷ್ಮಿಕಾಂತ್ ದೀಕ್ಷಿತ್‌ರ ಮೂಲಕ ರಾಮ ಜನ್ಮಭೂಮಿಗೆ ಕಾಲಿರಿಸುವ ಅವಕಾಶ ಸಿಕ್ಕಿದ್ದು, ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಧಾರ್ಮಿಕ ವಿಧಿ ನೆರವೇರಿಸಲು ಅವಕಾಶ ಸಿಕ್ಕಿರುವುದು ನನ್ನ ಬದುಕಿನ ಪವಿತ್ರ ಕ್ಷಣ.
:- ಡಾ.ಕೆ.ಗಣಪತಿ ಭಟ್, ನಿರ್ದೇಶಕರು
ರಾಷ್‌ಟರೀಯ ಸಂಸ್ಕೃತ ವಿವಿ, ಪರಮಾಚಾರ್ಯ ಗುರುಕುಲ, ತಿರುಪತಿ

Leave a Comment

Your email address will not be published. Required fields are marked *