ಸಮಗ್ರ ನ್ಯೂಸ್: ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಭಾಗ ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ಜ. 17ರಂದು ನಡೆದಿದೆ.

ಸರಸ್ವತಿ ಕಿರವೆ (26), ಮಕ್ಕಳಾದ ದೀಪಿಕಾ (7), ರೀತಿಕಾ(4) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾರುಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಈ ಬಗ್ಗೆ ದಾಖಲಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ನಿವಾಸಿ ಕಿರಣ ಎಂಬವರ ಜೊತೆ 2016ರಲ್ಲಿ ಸರಸ್ವತಿ ವಿವಾಹವಾಗಿದ್ದರು. ಬುಧವಾರ ಮುಂಜಾನೆ ಇವರು ಮನೆಯಿಂದ ಕಾಣೆಯಾಗಿದ್ದು, ಕುಟುಂಬಸ್ಥರು ಆತಂಕಗೊಂಡು ತೋಟ, ಬಾವಿಯಲ್ಲಿ ಹುಡುಕಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಹಾರುಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.