Ad Widget .

ಶ್ರೀರಾಮನಿಗೆ ತುಳಸಿ ಸೇವೆ| ಅಯೋಧ್ಯೆ ಸಮೀಪ 2 ಎಕರೆ ಜಾಗ ಖರೀದಿಸಿ ತುಳಸಿ ಕೃಷಿ ಮಾಡಿದ ಬೆಂಗಳೂರಿನ ಭಕ್ತ

ಸಮಗ್ರ ನ್ಯೂಸ್: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಈಗಾಗಲೇ ಪೂಜಾ ಕೈಂಕರ್ಯಗಳು ಆರಂಭವಾಗಿದೆ. ಕೋಟ್ಯಾಂತರ ಜನರ ಕನಸು ಈಡೇರುತ್ತಿರುವ ಸನಿಹದಲ್ಲಿ ರಾಮ ಭಕ್ತರು ವಿವಿಧ ರೀತಿಯಲ್ಲಿ ಭಕ್ತಿಯನ್ನು ಅರ್ಪಿಸುತ್ತಿದ್ದಾರೆ. ಇದೀಗ ಬೆಂಗಳೂರು ನಗರದ ಭಕ್ತರೊಬ್ಬರು ಶ್ರೀರಾಮನಿಗೆ ತುಳಸಿ ಸೇವೆ ಮಾಡಲೆಂದೇ ಅಯೋಧ್ಯೆ ಸಮೀಪ ಎರಡು ಎಕರೆ ಜಾಗ ಖರೀದಿಸಿ ತುಳಸಿ ಬೆಳೆದಿದ್ದು, ನಿನ್ನೆಯಿಂದ ನಿರಂತರವಾಗಿ ತುಳಸಿ ಸೇವೆ ನಡೆಸುತ್ತಿದ್ದಾರೆ.

Ad Widget . Ad Widget .

ಬೆಂಗಳೂರು ನಗರದ ಜಯನಗರದ ನಿವಾಸಿಯಾಗಿರುವ ರಾಮ ಭಕ್ತ ಡಾ. ಶಿವಕಜಮಾರ್ ಅವರು ಪ್ರಭು ಶ್ರೀರಾಮನಿಗೆ ತುಳಸಿ ಸೇವೆ ಮಾಡಲೆಂದೇ ಅಯೋಧ್ಯೆ ಸಮೀಪ 60 ಕಿಲೋಮೀಟರ್ ದೂರದಲ್ಲಿ 2 ಎಕರೆ ಜಾಗ ಖರೀದಿ ಮಾಡಿದ್ದಾರೆ. ಕಳೆದ ಸಪ್ಟೆಂಬರ್​ ತಿಂಗಳಲ್ಲಿ ಗುಜರಾತ್​ನ ತುಳಸಿ ವನದಿಂದ ಕೃಷ್ಣ ತುಳಸಿ ಬೀಜಗಳನ್ನು ತಂದು ನಾಟಿ ಮಾಡಿದ್ದು ಇದೀಗ ಸದ್ಯ ತುಳಸಿ ಗಿಡಗಳಾಗಿ ಬೆಳೆದು ನಿಂತಿದೆ,

Ad Widget . Ad Widget .

ರಾಮನ ಸನ್ನಿದಿಗೆ ಶ್ರೀರಾಮನಿಗಾಗಿ ತುಳಸಿ ಮಾಲೆ ಕಟ್ಟಲು ಬೆಂಗಳೂರಿನ ಮೂವರು ಯುವಕರನ್ನು ಕಳುಹಿಸಲಾಗಿದೆ. ವಿಮಾನದ ಮೂಲಕ ತೆರಳಿದ ಯುವಕರು ಅಯೋಧ್ಯೆ ತಲುಪಿದ್ದು, ಹೂವು ಕಟ್ಟುವ ಕಾರ್ಯ ಆರಂಭಿಸಿದ್ದಾರೆ. ಜನವರಿ 17 ರಿಂದ ನಿರಂತರ ತುಳಸಿ ಸೇವೆ ಮಾಡಲಾಗುತ್ತಿದ್ದು, ಜನವರಿ 22 ಕ್ಕೆ ರಾಮಲಲ್ಲಾನಿಗೆ ವಿಶೇಷ ತುಳಸಿ ಮಾಲೆ ಸಿದ್ಧಪಡಿಸಲಾಗುತ್ತಿದೆ.

Leave a Comment

Your email address will not be published. Required fields are marked *