Ad Widget .

ಜ.22ರಂದು ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ‌ ರಜೆ ಘೋಷಣೆ

ಸಮಗ್ರ ನ್ಯೂಸ್: ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ‘ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾನ’ ಸಮಾರಂಭದ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳನ್ನ ಅರ್ಧ ದಿನ ಮುಚ್ಚುವುದಾಗಿ ಘೋಷಿಸಿದ್ದಾರೆ.

Ad Widget . Ad Widget .

ಐತಿಹಾಸಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ರಜೆ ಘೋಷಿಸಿರುವುದಾಗಿ ತಿಳಿಸಿರುವ ಸಚಿವರು, ಅಧಿಕಾರಿಗಳೂ ಈ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶ ನೀಡುವುದಾಗಿ‌ ತಿಳಿಸಿದ್ದಾರೆ.

Ad Widget . Ad Widget .

ರಾಮ್ ಲಲ್ಲಾ ವಿಗ್ರಹವನ್ನು ಬುಧವಾರ ರಾತ್ರಿ ರಾಮ ದೇವಾಲಯದ ಗರ್ಭಗುಡಿಗೆ ತರಲಾಯಿತು ಎಂದು ಶ್ರೀ ರಾಮ್ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಖಚಿತಪಡಿಸಿದ್ದಾರೆ. ಸಧ್ಯ ವಿಗ್ರಹವನ್ನು ‘ಗರ್ಭಗೃಹ’ದಲ್ಲಿ ಇರಿಸಲಾಗಿದೆ.

ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಗರ್ಭಗುಡಿಯಲ್ಲಿ ವಿಶೇಷ ಪೂಜೆ ನಡೆಯಿತು. ಗರ್ಭಗುಡಿಯಲ್ಲಿ ವಿಗ್ರಹದ ಸ್ಥಾಪನೆ ಗುರುವಾರ ನಡೆಯುವ ನಿರೀಕ್ಷೆಯಿದೆ ಎಂದು ಮಿಶ್ರಾ ತಿಳಿಸಿದ್ದಾರೆ.

Leave a Comment

Your email address will not be published. Required fields are marked *