Ad Widget .

ಸರ್ಕಾರಿ ನಿವಾಸ ಬೇಕೆಂದು ಆರ್. ಅಶೋಕ ಮನವಿ: ಡಿ.ಕೆ ಶಿವಕುಮಾರ್​​ಗೆ ಕೊಟ್ಟಿರುವ ನಿವಾಸದ ಮೇಲೆ ಕಣ್ಣು

ಸಮಗ್ರ ನ್ಯೂಸ್: ವಿಪಕ್ಷ ನಾಯಕರಾಗಿ ಆಯ್ಕೆಯಾದ ಬಿಜೆಪಿ ನಾಯಕ ಆರ್. ಅಶೋಕ ತಮಗೂ ಸರ್ಕಾರಿ ನಿವಾಸ ಒದಗಿಸುವಂತೆ ಮನವಿ ಮಾಡಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅಶೋಕ ಅವರು ವಿಧಾನಸಭೆ ವಿಪಕ್ಷ ನಾಯಕರಾಗಿ ಎರಡು ತಿಂಗಳು ಪೂರ್ಣಗೊಳ್ಳುತ್ತಿದೆ. ನಿರ್ದಿಷ್ಟ ಮೂರು ಸರ್ಕಾರಿ ಬಂಗಲೆ ಕೇಳಿರುವ ಅಶೋಕ್, ಅದರಲ್ಲಿ ಡಿಸಿಎಂ ಮತ್ತು ಇಬ್ಬರು ಸಚಿವರಿಗೆ ಈಗಾಗಲೇ ಹಂಚಿಕೆಯಾಗಿದೆ ಅಶೋಕ್ ಇದೀಗ ಅದೇ ಮನೆಗಳಿಗೇ ಬೇಡಿಕೆ ಇಟ್ಟಿದ್ದಾರೆ.

Ad Widget . Ad Widget .

ಬೆಂಗಳೂರಿನ ಕುಮಾರಕೃಪಾ ದಕ್ಷಿಣದಲ್ಲಿರುವ ನಂಬರ್ 1 ನಿವಾಸ ಒದಗಿಸುವಂತೆ ಅಶೋಕ ಮನವಿ ಮಾಡಿದ್ದಾರೆ. ಸದ್ಯ ಈ ನಿವಾಸ ಡಿಸಿಎಂ ಡಿ.ಕೆ‌ ಶಿವಕುಮಾರ್​​ಗೆ ಹಂಚಿಕೆಯಾಗಿದೆ. ಇನ್ನೂ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್​ನಲ್ಲಿ ನಂಬರ್ 1 ಮತ್ತು ನಂಬರ್ 3 ನಿವಾಸಕ್ಕೆ ಕೂಡಾ ಅಶೋಕ್ ಬೇಡಿಕೆ ಇಟ್ಟಿದ್ದಾರೆ. ಸದ್ಯ ರೇಸ್ ವ್ಯೂ ಕಾಟೇಜ್​​ನ ನಂಬರ್ 1 ನಿವಾಸ ಸಚಿವ ಎಂ.ಬಿ ಪಾಟೀಲ್​​ಗೆ, ನಂಬರ್ 3 ನಿವಾಸ ಸಚಿವ ಪ್ರಿಯಾಂಕ್ ಖರ್ಗೆಗೆ ಹಂಚಿಕೆಯಾಗಿದೆ.

Ad Widget . Ad Widget .

ಜಯಮಹಲ್ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆ ಆಯ್ದುಕೊಳ್ಳುವಂತೆ ವಿಪಕ್ಷ ನಾಯಕರಿಗೆ ಸರ್ಕಾರ ಸಲಹೆ ನೀಡಿದೆ. ಆದರೆ, ಅದಕ್ಕೆ ಒಪ್ಪದ ಅಶೋಕ ನಿರ್ದಿಷ್ಟ ಮೂರು ಬಂಗಲೆಗಳ ಪೈಕಿ ಒಂದು ಬಂಗಲೆಯನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅದರಲ್ಲೂ ಡಿಸಿಎಂ ಡಿ.ಕೆ ಶಿವಕುಮಾರ್​ಗೆ ಹಂಚಿಕೆಯಾಗಿರುವ ನಿವಾಸದ ಮೇಲೆಯೇ ಅಶೋಕ್ ಅವರಿಗೆ ಹೆಚ್ಚಿನ ಆಸಕ್ತಿ ಇದೆ.

Leave a Comment

Your email address will not be published. Required fields are marked *