Ad Widget .

ಬಿಗ್ ಬಾಸ್​ ಕೊಟ್ರು ಎಲಿಮಿನೇಷನ್ ಶಾಕ್​…! ತನಿಷಾ ಬಿಗ್ ಬಾಸ್ ಮನೆಯಿಂದ ಔಟ್…

ಸಮಗ್ರ ನ್ಯೂಸ್: ಬಿಗ್ ಬಾಸ್​ ಫಿನಾಲೆಗೆ ಇನ್ನೇನೂ ಕೆಲವೇ ದಿನಗಳಷ್ಟೆ ಬಾಕಿ ಇದೆ. ಈಗ ಬಿಗ್ ಬಾಸ್ ಮನೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ತೆಗೆದುಕೊಳ್ತಿದೆ. ಬಂದ ಅತಿಥಿಗಳೆಲ್ಲಾ ಹೊರಗೆ ಹೋದ ಬಳಿಕ ಈಗ ಬಿಗ್​ ಬಾಸ್​ ಎಲಿಮಿನೇಷನ್ ಶಾಕ್ ಕೊಟ್ಟಿದ್ದಾರೆ.

Ad Widget . Ad Widget .

ಹೌದು ಕಳೆದ ವಾರ ವರ್ತೂರು ಸಂತೋಷ್​ ಹಾಗೂ ತುಕಾಲಿ ಸಂತೋಷ್ ಎಲಿಮಿನೇಷನ್​ ನಿಂದ ಬಚಾವ್ ಆಗಿದ್ರು. ಸುದೀಪ್​ ಈ ವಾರ ಯಾವುದೇ ಎಲಿಮಿನೇಷನ್ ಇಲ್ಲ ಎಂದಿದ್ರು. ಇದೀಗ ಬಿಗ್ ಬಾಸ್​ ರಾತ್ರಿ ಡೈರೆಕ್ಟ್​ ಎಲಿಮಿನೇಷನ್ ಮಾಡಿದೆ. ವಾರದ ನಡುವೆಯೇ ದಿಢೀರ್​ ಎಲಿಮಿನೇಷ್​ ಶಾಕ್ ಕೊಟ್ಟಿದೆ. ಬಿಗ್ ಬಾಸ್ ಸೂಚಿಸಿದ ಸ್ಪರ್ಧಿ ಮನೆಯಿಂದ ಹೊರಗೆ ಹೋಗಬೇಕು ಎಂದು ಆದೇಶ ನೀಡಿದ್ದಾರೆ. ಈ ವೇಳೆ ಸ್ಪರ್ಧಿಗಳು ಶಾಕ್ ಆಗಿದ್ದಾರೆ.

Ad Widget . Ad Widget .

ತನಿಷಾ ನಿಮ್ಮ ಬಿಗ್ ಬಾಸ್​ ಮನೆಯ ಪಯಣ ಮುಗಿದಿದೆ. ಈ ಕೂಡಲೇ ನೀವು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗ್ಬೇಕು ಎಂದು ಆದೇಶಿಸಿದ್ದಾರೆ. ಬಿಗ್ ಬಾಸ್​ ನಿರ್ಧಾರ ಕೇಳಿ ತನಿಷಾ ಶಾಕ್ ಆಗಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುವ ಮುನ್ನ ಕಣ್ಣೀರಾಕಿದ್ದು. ನಾನು ಹೋಗ್ಬೇಕು ಎಂದು ತುಂಬಾ ಆಸೆ ಪಟ್ಟಿದ್ದೀರಾ ಅಲ್ಲ ಎಲ್ಲಾ ಎಂದ ತನಿಷಾ ಕಣ್ಣೀರು ಹಾಕಿದ್ದಾರೆ. ನನ್ನ ವಾಯ್ಸ್ ಅಂದ್ರೆ ನಿಮಗೆಲ್ಲಾ ಕಷ್ಟವಾಗಿತ್ತು. ಇನ್ಮುಂದೆ ನನ್ನ ವಾಯ್ಸ್ ನಿಮಗೆ ಕಿರಿಕಿರಿಯುಂಟು ಮಾಡೋದಿಲ್ಲ ಎಂದು ತನಿಷಾ ಕಣ್ಣೀರು ಹಾಕಿದ್ದಾರೆ.

Leave a Comment

Your email address will not be published. Required fields are marked *