Ad Widget .

ಪುತ್ತೂರು: ಕೇವಲ ಕೇಸರಿ ಶಾಲು ಹಾಕಿದರೆ ಹಿಂದುತ್ವ ಆಗುತ್ತಾ..? ಪುತ್ತಿಲ ಪರಿವಾರದಿಂದ ಜೀವಕ್ಕೇ ಅಪಾಯವಿದೆ”| ಪುತ್ತಿಲ ಪರಿವಾರ ವಿರುದ್ಧ ಸಂತೋಷ್ ಕುಟುಂಬ ವಾಗ್ದಾಳಿ

ಸಮಗ್ರ ನ್ಯೂಸ್: ಮಂತ್ರಾಕ್ಷತೆ ಹಂಚುವ ವಿಚಾರದಲ್ಲೇ ಪುತ್ತಿಲ ಪರಿವಾರದ ಸದಸ್ಯರಿಂದ ನಮ್ಮ ಮೇಲೆ ಹಲ್ಲೆ ನಡೆದಿದೆ ನಮಗೆ ಬದುಕಲು ಬಿಡುತ್ತಿಲ್ಲ ನಮ್ಮ ಜೀವಕ್ಕೆ ಅಪಾಯವಿದೆ ಎಂದು ಜ. 16ರಂದು ನಡೆದ ಸುದ್ದಿಗೋಷ್ಟಿಯಲ್ಲಿ ಹಲ್ಲೆಗೊಳಗಾದ ಸಂತೋಷ್ ಅಳಲು ತೋಡಿಕೊಂಡಿದ್ದಾರೆ.

Ad Widget . Ad Widget .

ತಮ್ಮ ಕುಟುಂಬದ ಜೊತೆ ಸೇರಿ ಪುತ್ತೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಸಂತೋಷ್, ಹಲ್ಲೆ ಮಾಡಿದವರು ಮತ್ತು ನಮ್ಮ ನಡುವೆ ಕಳೆದ ಮೂರು ವರ್ಷಗಳಿಂದ ದಾರಿ ವಿವಾದವಿದೆ. ಆದರೂ ನಾವು ಯಾವತ್ತೂ ಅವರ ಜೊತೆಗೆ ತಕರಾರು ಎತ್ತಲು ಹೋಗಿಲ್ಲ.

Ad Widget . Ad Widget .

ಆದರೆ ರಾಮಮಂದಿರದ ಅಕ್ಷತೆ ಹಂಚುವ ವಿಚಾರದಲ್ಲಿ ಆರೋಪಿಗಳಿಗೆ ನಮ್ಮ ಮೇಲೆ ದ್ವೇಷವಿದೆ. ಸಂಘ-ಪರಿವಾರದ ಮುಖಂಡರು ಅಕ್ಷತೆ ಹಂಚಲು ನಮಗೆ ಜವಾಬ್ದಾರಿ ನೀಡಿದ್ದರು. ಆ ಕಾರಣಕ್ಕೆ ಮುಂಡೂರು ಪರಿಸರದ ಮನೆಗೆ ಅಕ್ಷತೆ ಹಂಚಿದ್ದೇವೆ. ಈ ನಡುವೆ ಮುಂಡೂರು ದೇವಸ್ಥಾನದಲ್ಲಿದ್ದ ಅಕ್ಷತೆಯನ್ನು ಪುತ್ತಿಲ ಪರಿವಾರಕ್ಕೆ ಸೇರಿದ ಆರೋಪಿಗಳು ಕೊಂಡೊಯ್ದು ಹಂಚಿದ್ದಾರೆ. ಅಕ್ಷತೆಯನ್ನು ಖಾಲಿ ಮಾಡಿ ಖಾಲಿ ಕಲಶವನ್ನು ದೇವಸ್ಥಾನದಲ್ಲಿ ಇಟ್ಟಿದ್ದರು. ಆ ಕಲಶವನ್ನು ಮರುದಿನ ನಾವು ಸ್ಥಳೀಯ ವ್ಯಕ್ತಿಯೋರ್ವರ ಮನೆಯಲ್ಲಿ ಇರಿಸಿರುವ ಸಂಬಂಧ ನನ್ನ ಮೇಲೆ ಆರೋಪಿಗಳಾದ ಧನುಂಜಯ್, ಕೇಶವ ಮತ್ತು ಜಗದೀಶ್ ದ್ವೇಷ ಸಾಧಿಸಿ ಹಲ್ಲೆ ನಡೆಸಿದರು.

ಇದೇ ಕಾರಣಕ್ಕೆ ಅಕ್ಷತೆಯ ಸಭೆಯನ್ನು ಮುಗಿಸಿ ಮನೆಗೆ ಬರುವ ಸಮಯದಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯ ಹಿಂದೆ ಪುತ್ತಿಲ ಪರಿವಾರದ ಅರುಣ್ ಪುತ್ತಿಲರ ಕುಮ್ಮಕ್ಕಿದೆ. ನಮ್ಮ ಮನೆಗೆ ಸಂಪರ್ಕಿಸುವ ದಾರಿಯನ್ನು ಮುಚ್ಚುವ ಹಿಂದೆಯೂ ಪುತ್ತಿಲರಿದ್ದಾರೆ. ಅವರು ಆರೋಪಿಗಳನ್ನು ನಮ್ಮ ಮೇಲೆ ಛೂ ಬಿಡುತ್ತಿದ್ದು, ನಮಗೆ ಬದುಕಲು ಬಿಡುತ್ತಿಲ್ಲ ನಮ್ಮ ಜೀವಕ್ಕೆ ಅಪಾಯವಿದೆ ಎಂದು ಅಳಲು ತೋಡಿಕೊಂಡರು. ನಾವೇನು ಮುಸ್ಲೀಮರೇ, ನಾವು ಹಿಂದುಗಳಲ್ಲವೇ ಕೇವಲ ಕೇಸರಿ ಶಾಲು ಹಾಕಿದರೆ ಹಿಂದುತ್ವ ಆಗುತ್ತಾ..? ಎಂದು ಅರುಣ್ ಪುತ್ತಿಲ ವಿರುದ್ಧ ಸಂತೋಷ್ ಕುಟುಂಬ ವಾಗ್ದಾಳಿ ನಡೆಸಿದೆ.

Leave a Comment

Your email address will not be published. Required fields are marked *