Ad Widget .

ಯುವಕನ ಮೇಲೆ ದುಷ್ಕರ್ಮಿಗಳಿಂದ ಆ್ಯಸಿಡ್​ ದಾಳಿ| ಪ್ರೇಯಸಿ ಕಡೆಯವರಿಂದ ಕೃತ್ಯ ಶಂಕೆ..!

ಸಮಗ್ರ ನ್ಯೂಸ್: ಯುವಕನ ಮೇಲೆ ದುಷ್ಕರ್ಮಿಗಳು ಆ್ಯಸಿಡ್​ ದಾಳಿ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ KSRTC ಬಸ್ ನಿಲ್ದಾಣ ಸಮೀಪ ನಡೆದಿದೆ.

Ad Widget . Ad Widget .

ಆ್ಯಸಿಡ್​​ ದಾಳಿಯಿಂದ ಯುವಕ ಅರುಣ್ ಕುಮಾರ್ ತಲೆ- ಕೈ, ಮುಖಕ್ಕೆ ಗಂಭೀರ ಗಾಯವಾಗಿದೆ‌. ಅರುಣ್​ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಮೂಲದರಾಗಿದ್ದು. ಅರುಣ್​ ಕುಮಾರ್ ಕೆಎಸ್​ಆರ್​ಟಿಸಿ ಬಸ್​ ಇಳಿದು ಶೌಚಾಲಯಕ್ಕೆ ತೆರಳುವಾಗ ದುಷ್ಕರ್ಮಿಗಳು ಏಕಾಏಕಿ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಸದ್ಯ ಗಾಯಗೊಂಡಿರುವ ಯುವಕನನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದ್ದು, ಸ್ಥಳಕ್ಕೆ ಸಿಪಿಐ ರಾಘವೇಂದ್ರ ಕಾಂಡಿಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ad Widget . Ad Widget .

ಅರುಣ್ ಕುಮಾರ್ ಬೆಂಗಳೂರಿನ ಗೋಗ್ಯಾಸ್ LPG ಬಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದವರು. ಅರುಣ್ ಕುಮಾರ್ ಯುವತಿ ಒಬ್ಬರನ್ನು ಪ್ರೀತಿಸುತ್ತಿದ್ದರಂತೆ. ಆದರೆ ಇದಕ್ಕೆ ಯುವತಿ ಕಡೆಯವರಿಂದ ವಿರೋಧ ಕೇಳಿ ಬಂದಿತ್ತು. ಪ್ರೀತಿಸಿದ ಯುವತಿ ಕಡೆಯವರಿಂದಲೇ ಕೃತ್ಯದ ನಡೆದಿರುವ ಶಂಕೆಯನ್ನು ಅರುಣ್ ವ್ಯಕ್ತಪಡಿಸಿದ್ದಾರೆ. ಅರುಣ್​ ಕುಮಾರ್ ಗೆ ಈ ಹಿಂದೆಯೂ ಕರೆ ಮಾಡಿದ್ದ ದುಷ್ಕರ್ಮಿಗಳು, ಬೆದರಿಕೆ ಒಡ್ಡಿದ್ದರಂತೆ, ನಿನಗೆ ಇಷ್ಟರಲ್ಲೇ ಅಪಾಯವಿದೆ ಎಂದು ವಾರ್ನ್ ಮಾಡಿದ್ದಾರಂತೆ. ಈ ಪ್ರಕರಣ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *