ಸಮಗ್ರ ನ್ಯೂಸ್: ಜ್ಞಾನವಾಪಿ ಮಸೀದಿಯ ಸಮೀಕ್ಷೆಯಲ್ಲಿ ಪತ್ತೆಯಾದ ಶಿವಲಿಂಗ ಸ್ಥಳವನ್ನು ಮುಸ್ಲಿಮರು ವಝುಖಾನವಾಗಿ ಬಳಕೆ ಮಾಡಿ ಅಪವಿತ್ರ ಮಾಡಿದ್ದಾರೆ. ಇದು ಹಿಂದು ಭಕ್ತರ ಭಾವನೆಯನ್ನು ಘಾಸಿಗೊಳಿಸಿದೆ. ಹೀಗಾಗಿ ಈ ಸ್ಥಳದ ಶುಚಿತ್ವ ಕಾಪಾಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ.
ಮಸೀದಿಯ ಸರ್ವೆಯಲ್ಲಿ ಶಿವಲಿಂಗ ಪತ್ತೆಯಾದ ಶಿವಲಿಂಗ ಸ್ಥಳವನ್ನು ಮುಸ್ಲಿಮರು ತಮ್ಮ ನಮಾಜ್‍ಗೆ ಮೊದಲು ಕೈಕಾಲು, ಮುಖ ತೊಳೆಯಲು ವಝುಖಾನವಾಗಿ ಬಳಕೆ ಮಾಡುತ್ತಿದ್ದರು. ಈ ಮೂಲಕ ಅತ್ಯಂತ ಪವಿತ್ರ ಶಿವಲಿಂಗವನ್ನು ಅಪವಿತ್ರಗೊಳಿಸಲಾಗಿದೆ. ಹೀಗಾಗಿ ಸದ್ಯ ಶಿವಲಿಂಗ ಪತ್ತೆಯಾಗಿರುವ ಸ್ಥಳದಲ್ಲಿ ಶುಚಿತ್ವ ಹಾಗೂ ಪಾವಿತ್ರ್ಯತೆ ಕಾಪಾಡಲು ಸುಪ್ರೀಂ ಕೋರ್ಟ್‍ಗೆ ಮನವಿ ಮಾಡಲಾಗಿತ್ತು.
ಈ ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್, ಪಾವಿತ್ರ್ಯತೆ ಕಾಪಾಡಲು ಸೂಚನೆ ನೀಡಿದೆ. ವಾರಣಾಸಿ ಜಿಲ್ಲಾಧಿಕಾರಿಗಳ ಸುಪರ್ಧಿಯಲ್ಲಿ ಶುಚಿತ್ವ ಹಾಗೂ ಪಾವಿತ್ರ್ಯತೆ ಕಾಪಾಡಲು ಎಲ್ಲಾ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.