ಯಾರೂ ಹೆಣ್ಣು ಕೊಡಲ್ಲ ಎಂದು ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ಮದುವೆ ವಿಚಾರವಾಗಿ ಬಹಳ ಯುವಕರು ತಮ್ಮ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಇದೀಗ ಎದುರಾಗಿದೆ. ಮದುವೆಗೆ ಯುವತಿ ಸಿಗದ ಹಿನ್ನೆಲೆ ನೊಂದ 26 ವರ್ಷದ ಯುವಕ ಮಧುಸೂದನ್ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ.

Ad Widget ... ..

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಮಧುಸೂದನ್ ತಂದೆ ಅರೆ ಹುಚ್ಚನಂತೆ ವರ್ತಿಸುವ ಕಾರಣ ಯಾರೂ ಹೆಣ್ಣು ನೀಡಲು ಮುಂದಾಗಿರಲಿಲ್ಲ ಈ ಕಾರಣಕ್ಕಾಗಿ ಮಧುಸೂದನ್ ನೊಂದುಕೊಂಡಿದ್ದ ಎನ್ನಲಾಗಿದೆ.

Ad Widget

ನನಗೆ ಹೆಣ್ಣು ಸಿಗಲ್ಲ. ನಾನು ಒಂಟಿಯಾಗಿಯೇ ಬದುಕ ಬೇಕಾಗುತ್ತದೆ ಎಂದು ಮಧುಸೂದನ್ ಮದ್ಯ ಸೇವನೆ ಮಾಡಲು ಸಹ ಆರಂಭಿಸಿದ್ದನಂತೆ ಇದೇ ವಿಷಯಕ್ಕೆ ಮಧುಸೂದನ್ ಜನವರಿ 5ರಂದು ವಿಷ ಸೇವಿಸಿದ್ದನು. ಕೂಡಲೇ ಪೋಷಕರು ಮಧುಸೂದನ್​​ ನನ್ನು ಬಳ್ಳಾರಿಯ ವಿಮ್ಸ್​ಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಧುಸೂದನ್ ಮೃತನಾಗಿದ್ದಾನೆ. ಮಧುಸೂದನ್ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *