ಸಮಗ್ರ ನ್ಯೂಸ್: ನೈಸರ್ಗಿಕ ಕಾರಣಗಳನ್ನು ಹೊರತುಪಡಿಸಿ ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವು ನೋವುಗಳು ಉಂಟಾಗುತ್ತದೆ. ದೇಶಾದ್ಯಂತ ಲಕ್ಷಾಂತರ ಜನ ರಸ್ತೆ ಅಫಘಾತಗಳಲ್ಲಿ ಸಾವನ್ನಪ್ಪುತ್ತಾರೆ. ಮಂಗಳೂರು ನಗರದಲ್ಲಿ ಪ್ರತೀ ವರ್ಷ ಸುಮಾರು 800 ರಿಂದ 900 ಅಪಘಾತ ಪ್ರಕರಣಗಳು ವರದಿಯಾಗುತ್ತದೆ. 900 ರಿಂದ 1000 ಜನ ನೋವನ್ನು ಅನುಭವಿಸುತ್ತಾರೆ ಮತ್ತು ಮತ್ತು ಹಲವರು ಗಾಯಾಳುಗಳಾಗುತ್ತಾರೆ. ಅದರಲ್ಲಿ 100 ರಿಂದ 125 ರಷ್ಟು ಜನ ಪ್ರಾಣವನ್ನು ಕಳಕೊಳ್ಳುತ್ತಾರೆ.
ರಸ್ತೆ ಅಪಘಾತಗಳನ್ನು ಕಡಿಮೆ ಮಾಡಬೇಕನ್ನುವಂತಹ ಕಾರಣದಿಂದ ಮಿನಿಷ್ಟ್ರಿ ಆಫ್ ರೋಡ್ ಟ್ರಾನ್ಸ್ ಫೋರ್ಟ್ & ಹೈವೇಸ್ (ಮಾರುತಿ) ರಸ್ತೆ ಸುರಕ್ಷತಾ ಸಪ್ತಾಹವನ್ನು ಆಚರಣೆ ಮಾಡಬೇಕು. ಪ್ರತಿಯೊಬ್ಬ ರಸ್ತೆಯನ್ನು ಉಪಯೋಗಿಸುವಂತಹ ವ್ಯಕ್ತಿಗೆ ಅಪಘಾತಗಳನ್ನು ಹೇಗೆ ತಡೆ ಮಾಡಬೇಕು ಅನ್ನುವಂತಹ ನಿಯಮಗಳನ್ನು ಹಾಗೂ ತಿಳಿ ಹೇಳುವಂತಹ ಕೆಲಸಗಳನ್ನು ಮಾಡಬೇಕು ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ, ಜೀವ ಉಳಿಸಿಕೊಳ್ಳಿ ಎಂದು ಕರೆ ನೀಡಿದರು. ರಸ್ತೆ ಸುರಕ್ಷಾ ನಿಯಮಗಳನ್ನು ಜನರು, ಅದರಲ್ಲೂ ಯುವಜನತೆ ಪಾಲಿಸಲೇಬೇಕು. ರಸ್ತೆಯಲ್ಲಿ ವಾಹನ ಚಲಾಯಿಸುವಾಗ ರಸ್ತೆ ಶಿಸ್ತನ್ನು ಪಾಲಿಸಲೇಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ, ಹೆಲ್ಮೆಟ್ ಧರಿಸದಿರುವುದು, ಸೀಟು ಬೆಲ್ಟ್ ಧರಿಸದೇ ಇರುವುದು ಇವೆಲ್ಲ ಶಿಕ್ಷಾರ್ಹ ಅಪರಾಧಗಳು. ಈ ನಿಯಮಗಳು ಬರೀ ಪೊಲೀಸರಿಗಾಗಿ ಅಲ್ಲ. ನಿಮ್ಮ ಜೀವನ ರಕ್ಷಣೆಗಾಗಿ ಚಾಲಕರು ಪಾಲಿಸತಕ್ಕದ್ದು. ಎಲ್ಲರೂ ಒಟ್ಟು ಸೇರಿ ರಸ್ತೆ ಸುರಕ್ಷಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ‘ಅಪಘಾತ ರಹಿತ’ ರಸ್ತೆಗಳನ್ನು ನಿರ್ಮಿಸೋಣ. ಆ ಮೂಲಕ ಬಲಿಷ್ಠ ಮತ್ತು ಆರೋಗ್ಯ ಪೂರ್ಣ ಭಾರತವನ್ನು ಕಟ್ಟೋಣ ಎಂದು ಮಂಗಳೂರು ನಗರದ ಅಪರಾದ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಬಿ.ಪಿ. ದಿನೇಶ್ ಕುಮಾರ್, ಪೊಲೀಸ್ ಉಪ ಆಯುಕ್ತರು ಅಪರಾಧ ಮತ್ತು ಸಂಚಾರ ಮಂಗಳೂರು ನಗರ ಅವರು ಕರೆ ನೀಡಿದರು.
ಜ. 16ರಂದು ನಗರದ ಹಂಪನಕಟ್ಟೆಯ ಮಾಂಡವಿ ಮೋಟಾರ್ಸ್ ಇಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ, ಪೊಲೀಸ್ ಇಲಾಖೆ ಮತ್ತು ಮಾಂಡವಿ ಮೋಟಾರ್ಸ್‍ನ ಸಹಯೋಗದೊಂದಿಗೆ ರಸ್ತೆ ಸುರಕ್ಷಾ ಸಪ್ತಾಹ ಅಂಗವಾಗಿ ಕೆಂಪು ಗುಲಾಬಿ ಕ್ಯಾಂಪೇಯ್ನ್ ಮತ್ತು ರಸ್ತೆ ಸುರಕ್ಷಾ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು. ರಸ್ತೆಯಲ್ಲಿ ಚಲಿಸುತ್ತಿರುವ ಬಸ್ಸು ಕಾರು, ದ್ವಿಚಕ್ರ ವಾಹನ ಸವಾರರಿಗೆ ಕೆಂಪು ಗುಲಾಬಿ ಹೂವನ್ನು ನೀಡಿ ಯಾವುದೇ ಸಮಯದಲ್ಲಿ ಅಪಘಾತ ರಹಿತ ಚಾಲನೆಯನ್ನು ಮಾಡಲು ಮನವಿ ಮಾಡಿದರು.
ಈ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಮತ್ತು ಪೌರರಕ್ಷಣಾ ದಳದ ಮುಖ್ಯ ಪಾಲ ಡಾ|| ಮುರಲೀ ಮೋಹನ್ ಚೂಂತಾರು ಅವರು ನಮ್ಮ ಸಂಸ್ಕೃತಿ ಎಂದರೆ ಯಾರೂ ನಮ್ಮನ್ನು ಗಮನಿಸದೇ ಇದ್ದಾಗ ನ,ಮ್ಮ ನಡವಳಿಕೆಯೇ ನಿಜವಾದ ಸಂಸ್ಕೃತಿ, ರಸ್ತೆ ಸಂಚಾರ ನಿಯಮಗಳನ್ನು ನಿಮಗಾಗಿ ಪಾಲಿಸಿ, ಪೊಲೀಸರಿಗಾಗಿ ಪಾಲಿಸಬೇಡಿ, ಮದ್ಯಪಾನ ಮಾಡಿ, ಡ್ರಗ್ಸ್ ಸೇವಿಸಿ ವಾಹನವನ್ನು ಚಾಲನೆಯನ್ನು ಮಾಡಬೇಡಿ, ನಿಯಮಗಳನ್ನು ದಂಡಕಟ್ಟಲು ಅಲ್ಲ, ನಮ್ಮ ಜೀವವನ್ನು ಉಳಿಸಿಕೊಳ್ಳಲು ನಿಯಮವನ್ನು ಪಾಲಿಸಿ ರಸ್ತೆ ಅಪಘಾತಗಳನ್ನು ತಡೆಯಲು ಬಹಳ ಉತ್ತಮ ಉಪಾಯ ಎಂದರೆ ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಿ, ಸುರಕ್ಷಿತವಾಗಿ ವಾಹನ ಚಾಲನೆ ಮಾಡುವುದೊಂದೇ ದಾರಿ ಎಂದು ನುಡಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಮಾಂಡೋವಿ ಮೋಟಾರ್ಸ್‍ನ ಉಪಾಧ್ಯಕ್ಷ ಪಾಶ್ರ್ವನಾಥ್, ಸಂಚಾರಿ ಎಸಿಪಿ ಗೀತಾ ಕುಲಕರ್ಣಿ, ಸಂಚಾರಿ ಠಾಣೆಯ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್, ಮಾಂಡೋವಿ ಮೋಟಾರ್ಸ್‍ನ ಡಿಜಿಎಂ ಶಶಿಧರ್ ಕಾರಂತ್, ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್‍ಶೇರಾ ಮತ್ತು ಮಾಂಡೋವಿ ಮೋಟಾರ್ಸ್‍ನ ಸಿಬ್ಬಂದಿಗಳು, ಗೃಹರಕ್ಷಕರಾದ ಸುನಿಲ್ ಕುಮಾರ್, ಜ್ಞಾನೇಶ್, ದಿವಾಕರ್, ಮಂಜುನಾಥ, ಬಬಿತಾ, ಸಂಜಯ್ ಶೆಣೈ, ರಾಜೇಶ್ ಗಟ್ಟಿ, ಮಲ್ಲಿಕಾ ಉಪಸ್ಥಿತರಿದ್ದರು.