ಧರ್ಮಸ್ಥಳ: ನೈತಿಕ ಪೊಲೀಸ್ ಗಿರಿ| ಭಿನ್ನಕೋಮಿನ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಸಮಗ್ರ ನ್ಯೂಸ್ : ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿಯ ಘಟನೆ ಮರುಕಳಿಸಿದೆ. ಕ್ಷೇತ್ರಕ್ಕೆ ಮುಸ್ಲಿಂ ಯುವಕನ ಜೊತೆ ಬಂದಿದ್ದ ಹಿಂದೂ ಯುವತಿಯ ಜೋಡಿಯನ್ನು ಸಾರ್ವಜನಿಕರು ಹಿಡಿದು ವಿಚಾರಿಸಿ ಬಳಿಕ ಪೋಲಿಸರಿಗೆ ಒಪ್ಪಿಸಿದ್ದಾರೆ.

Ad Widget ... ..

ಬೆಂಗಳೂರು ಮೂಲದ ಈ ಜೋಡಿ ಧರ್ಮಸ್ಥಳದಲ್ಲಿ ತಿರುಗಾಡುತ್ತಿದ್ದಾಗ ಸಂಶಯಗೊಂಡ ಸಾರ್ವಜನಿಕರು ಹಿಡಿದು ವಿಚಾರಿಸಿದ್ದಾರೆ. ಆಗ ಯುವಕ ಮುಸ್ಲಿಂ ಧರ್ಮದವನಾಗಿದ್ದು ಯುವತಿ ಹಿಂದೂ ಎಂದು ಗೊತ್ತಾಗಿದೆ.

Ad Widget

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆಧಾವಿಸಿ ಬಂದ ಪೊಲೀಸರು ಯುವಕ ಯುವತಿಯನ್ನು ವಶಕ್ಕೆ ಪಡೆದು ಠಾಣೆಗೆ ಒಯ್ದು ವಿಚಾರಣೆ ನಡೆಸಿದ್ದಾರೆ.

Leave a Comment

Your email address will not be published. Required fields are marked *