ಬೆಳ್ತಂಗಡಿ: ಕಾಲುಜಾರಿ ಬಾವಿಗೆ ಬಿದ್ದು ಬಾಲಕ ಸಾವು

ಸಮಗ್ರ ನ್ಯೂಸ್: ಮಕ್ಕಳ ಜೊತೆ ಆಟವಾಡುತ್ತಿರುವ ವೇಳೆ ತೆರೆದ ಬಾವಿಗೆ ಕಾಲು ಜಾರಿ ಬಿದ್ದು 7 ವರ್ಷದ ಬಾಲಕ ಸಾವನಪ್ಪಿರುವ ಘಟನೆ ಬೆಳ್ತಂಗಡಿಯ ಸೋಣಂದೂರು ಗ್ರಾಮದ ಪಣಕಜೆ ಎಂಬಲ್ಲಿ ನಡೆದಿದೆ.

Ad Widget ... ..

ಮೃತ ಬಾಲಕ ಪಣಕಜೆ ನಿವಾಸಿ ಮಹಮ್ಮದ ಹನೀಫ್ ಅವರ ಪುತ್ರ ಮಹಮ್ಮದ್ ಅನಾನ್(7) ಜ. 15ರಂದು ಶಾಲೆಗೆ ರಜೆ ಇದ್ದ ಕಾರಣ ಪಕ್ಕದ ಮನೆಯ ಮಕ್ಕಳ ಜೊತೆ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ.

Ad Widget

ಕಟ್ಟೆ ಇಲ್ಲದ ಬಾವಿಯ ಬಳಿ ಮಕ್ಕಳು ಆಟವಾಡುತ್ತಿದ್ದಾಗ ಬಾಲಕ ಅನಾನ್ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದನೆನ್ನಲಾಗಿದೆ. ಕೂಡಲೇ ಸ್ಥಳೀಯರ ಸಹಕಾರದಲ್ಲಿ ಬಾಲಕನನ್ನು ಮೇಲೆತ್ತಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆಗೆ ಬಾಲಕ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈತ ಸ್ಥಳೀಯ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಪುಂಜಾಲಕಟ್ಟೆ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *