ಸಮಗ್ರ ನ್ಯೂಸ್: ಮಕರ ಸಂಕ್ರಾಂತಿಯ ದಿನದಂದು ಪ್ರತಿ ವರ್ಷದಂತೆ ಈ ವರ್ಷವೂ ಶಬರಿಮಲೆಯಲ್ಲಿ ಮಕರ ಜ್ಯೋತಿಯ ದರ್ಶನವಾಯಿತು. ಜ್ಯೋತಿಯನ್ನು ಕಂಡಂತ ಅಯ್ಯಪ್ಪ ಭಕ್ತಗಣವು ಭಾವ ಪರವಶತೆಯಲ್ಲಿ ಮುಳುಗಿದರು.
ಮಕರ ಸಂಕ್ರಮಣದ ಕಾಲದಲ್ಲಿಯೇ ಶಬರಿಮಲೆ ಮಕರ ವಿಳಕ್ಕು ಪೂಜೆಗಳು ನಡೆಯುವುದರಿಂದ ಇದರಿಂದ ಮಕರ ಜ್ಯೋತಿ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ.
ಮಕರ ಜ್ಯೋತಿ (ಸಾಮಾನ್ಯವಾಗಿ ಜನವರಿ 14 ರಂದು). ಆದ್ರೇ ಜ.15ರ ಇಂದು ಮಕರ ಜ್ಯೋತಿ ದರ್ಶನವಾಗಿದೆ. ತಿರುವಾಭರಣಂ ಅಥವಾ ಭಗವಂತನ ಪವಿತ್ರ ಆಭರಣಗಳು ಮೂರು ಪೆಟ್ಟಿಗೆಗಳಲ್ಲಿ ಶಬರಿಮಲೆಗೆ ಆಗಮಿಸುತ್ತವೆ. ಆಭರಣ ಪೆಟ್ಟಿಗೆಗಳ ಆಗಮನದ ನಂತರ ಇಡೀ ಪರ್ವತವು ಈ ಕಾರ್ಯಕ್ರಮವನ್ನು ವೀಕ್ಷಿಸಲು ಅಲ್ಲಿ ನೆರೆದಿದ್ದ ಲಕ್ಷಾಂತರ ಭಕ್ತರು ‘ಶರಣಂ ಅಯ್ಯಪ್ಪ’ ಪಠಣಕ್ಕೆ ಪ್ರತಿಧ್ವನಿಸುತ್ತದೆ.
ಪ್ರತಿ ವರ್ಷ ಜನವರಿ.14ರಂದು ಗೋಚರಿಸುತ್ತಿದ್ದಂತ ಮಕರ ಜ್ಯೋತಿ, ಈ ಬಾರಿಯೂ ಜನವರಿ 15ರ ಸೋಮವಾರ ಮಕರ ಸಂಕ್ರಮಣದಂದು ಶಬರಿಮಲೆಯಲ್ಲಿ ಗೋಚರಿಸಿತು. ಸಂಜೆ 6.30 ರಿಂದ 7ಗಂಟೆ ಒಳಗೆ ಮೂರು ಬಾರಿ ಮಕರ ದರ್ಶನವಾಯಿತು. ಆ ಮಕರ ಜ್ಯೋತಿಯನ್ನು ಕಂಡ ಅಯ್ಯಪ್ಪನ ಭಕ್ತಗಣ, ಭಾವಪರವಶವಾಯಿತು.