Ad Widget .

ಶಿವನಿಗೆ ಭಾಸ್ಕರನ ನಮಸ್ಕಾರ|ಗವಿಗಂಗಾಧರನಿಗೆ ನಮಿಸಿ ಪಥ ಬದಲಿಸಿದ ಭಾಸ್ಕರ…!

  • ಸಮಗ್ರ ನ್ಯೂಸ್: ಇಂದು ಎಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ. ಜನರು ಸಂತೋಷದಿಂದ ಹಬ್ಬ ಆಚರಿಸುತ್ತಿದ್ದಾರೆ. ಇದರ ಸಂಭ್ರಮ ಹೆಚ್ಚಿಸುವಂತೆ ಬೆಂಗಳೂರಿನ ಪ್ರಸಿದ್ಧ ಗವಿಗಂಗಾಧರೇಶ್ವರ ದೇಗುಲ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿಶೇಷ ಕೌತುಕವೊಂದಕ್ಕೆ ಸಾಕ್ಷಿಯಾಗಿದೆ. ಸೂರ್ಯ ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ತನ್ನ ದಿಕ್ಕು ಬದಲಿಸುವ ಘಳಿಗೆ ಇದಾಗಿದೆ. ಈ ಶುಭ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಗವಿಗಂಗಾಧರೇಶ್ವರ ದೇಗುಲದಲ್ಲಿರುವ ಶಿವನ ಲಿಂಗವನ್ನು ಸ್ಪರ್ಶಿಸಿವೆ. ಸಂಜೆ 5.20 ರಿಂದ 5.23ರ ಒಳಗೆ ದೇವಾಲಯದ ಗರ್ಭಗುಡಿ ಪ್ರವೇಶಿಸಿದ ಸೂರ್ಯರಶ್ಮಿ, ಸುಮಾರು 3 ನಿಮಿಷಗಳ ಕಾಲ ಶಿವಲಿಂಗದ ಮೇಲೆ ಇತ್ತು!

ವರ್ಷದಲ್ಲಿ ಒಂದು ಬಾರಿ ಈ ಮಕರ ಸಂಕ್ರಾಂತಿಯಂದು ಈ ಸನ್ನಿವೇಷ ನಡೆಯುತ್ತದೆ. ಮೊದಲು ದೇಗುಲದ ಗರ್ಭಗುಡಿಯ ಹೊಸ್ತಿಲು ದಾಟಿ, ನಂದಿ ವಿಗ್ರಹವನ್ನು ಸ್ಪರ್ಶಿಸಿತು. ಬಳಿಕ ನಂದಿ ಮೂಲಕ ಹಾದು ಸ್ಪಟಿಕ ಲಿಂಗ ಸ್ಪರ್ಶಿಸಿತು. ನಂತರ ಶಿವಲಿಂಗದ ಕೆಳಭಾಗದ ಮೂಲಕ ಹಾದು, ಶಿವಲಿಂಗವನ್ನು ಆವರಿಸಿತು. ಇನ್ನು ಸೂರ್ಯ ರಶ್ಮಿ ಸ್ಪರ್ಶದ ವೇಳೆ ಭಕ್ತರಿಗೆ ದೇಗುಲದ ಒಳಗೆ ಪ್ರವೇಶ ಇರಲಿಲ್ಲ. ಹೀಗಾಗಿ ಭಕ್ತರಿಗೆ ಅನುಕೂಲವಾಗುವಂತೆ ದೇವಸ್ಥಾನದ ಹೊರಾಂಗಣದಲ್ಲಿ ದೊಡ್ಡ ಪೆಂಡಾಲ್‌ ಹಾಕಿ 10 ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಅಲ್ಲಿಂದಲೇ ಭಕ್ತರು ಈ ವಿಸ್ಮಯವನ್ನು ಕಣ್ತುಂಬಿಕೊಂಡರು.

Ad Widget . Ad Widget .

Leave a Comment

Your email address will not be published. Required fields are marked *