Ad Widget .

ಸಂಕ್ರಾಂತಿ ಸ್ಪೆಷಲ್ ಸ್ವೀಟ್ ಪೊಂಗಲ್ ಹೇಗೆ? ಇಲ್ಲಿದೆ ಸಂಪೂರ್ಣ ವಿಧಾನ

ಸಮಗ್ರ ನ್ಯೂಸ್: ಮಕರ ಸಂಕ್ರಾಂತಿಗೆ ವಿಶೇಷವಾಗಿ ಸಾಮಾನ್ಯವಾಗಿ ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಪೊಂಗಲ್ ತಯಾರಿಸುತ್ತಾರೆ. ಇದು ಆರೋಗ್ಯಕ್ಕೂ ಒಳ್ಳೆಯದು. ಸ್ವೀಟ್ ಪೊಂಗಲ್ ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳ್ಕೊಬೇಕಾ? ಹಾಗಿದ್ರೆ ಇದನ್ನು ಪೂರ್ತಿ ಓದಿ.

Ad Widget . Ad Widget .

ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ- 1 ಕಪ್
ಅಕ್ಕಿ – 1 ಕಪ್
ಪುಡಿ ಮಾಡಿದ ಬೆಲ್ಲ/ ಸಕ್ಕರೆ – 1 ಕಪ್
ಏಲಕ್ಕಿ – 4
ದ್ರಾಕ್ಷಿ, ಗೋಡಂಬಿ – 50 ಗ್ರಾಂ
ತುಪ್ಪ – 4 ಚಮಚ

Ad Widget . Ad Widget .

ಮಾಡುವ ವಿಧಾನ:
ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಸ್ಪಲ್ಪ ಕೆಂಪಾಗುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ ತೊಳೆದ ಅಕ್ಕಿ ಮತ್ತು ಹುರಿದ ಹೆಸರುಬೇಳೆಯನ್ನು ಕುಕ್ಕರ್‌ ಗೆ ಹಾಕಿ 4 ಕಪ್ ನೀರು ಹಾಕಿ ಒಂದು ವಿಷಲ್ ಬರುವ ತನಕ ಬೇಯಿಸಿ.

ಮತ್ತೊಂದು ಪ್ಯಾನ್‌ನಲ್ಲಿ ಪುಡಿಮಾಡಿದ ಬೆಲ್ಲ ಹಾಕಿ ಕರಗಿಸಿ (ಬೆಲ್ಲದಲ್ಲಿ ಕಲ್ಮಶವಿದ್ದರೆ ಒಮ್ಮೆ ಶೋಧಿಸಿಕೊಳ್ಳಿ). ಈಗ ಬೆಂದ ಅಕ್ಕಿ ಮತ್ತು ಬೇಳೆಗೆ ಬೆಲ್ಲದ ಪಾಕ ಹಾಕಿ ಚೆನ್ನಾಗಿ ತಿರುವಿ. ನಂತರ ಪುಡಿ ಮಾಡಿದ ಏಲಕ್ಕಿ, ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿ ಹಾಕಿ ಒಲೆಯಿಂದ ಇಳಿಸಿ (ಬೇಕಿದ್ದಲ್ಲಿ ಸ್ವಲ್ಪ ಪಚ್ಚ ಕರ್ಪೂರ ಮತ್ತು ಒಂದು ಚಿಟಿಕೆ ಲವಂಗದ ಪುಡಿಯನ್ನು ಸೇರಿಸಬಹುದು). ಈಗ ರುಚಿಕರವಾದ ಸ್ವೀಟ್ ಪೊಂಗಲ್ ಸವಿಯಲು ಸಿದ್ಧ.

Leave a Comment

Your email address will not be published. Required fields are marked *