Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜನ್ಮ ನಕ್ಷತ್ರಗಳ ಅನುಸಾರವಾಗಿ ಈ ವಾರದ ರಾಶಿಗಳ ಗೋಚಾರಫಲವನ್ನು ಇಲ್ಲಿ ನೀಡಲಾಗಿದೆ. ಜ.14 ರಿಂದ 20ರವರೆಗಿನ ನಿಮ್ಮ ರಾಶಿಗಳ ಫಲಾಪಲಗಳನ್ನು ನೀಡಲಾಗಿದೆ.

Ad Widget . Ad Widget .

ಮೇಷ ರಾಶಿ:
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಿರಿ. ಮಹತ್ವದ ನಿರ್ಧಾರ ಬಂದರಿಂದ ಹೊಸ ನಿರೀಕ್ಷೆಗಳು ಇರುತ್ತವೆ. ಖರ್ಚು ವೆಚ್ಚದಲ್ಲಿ ನಿಯಂತ್ರಣ ಕಳೆದುಕೊಳ್ಳುವಿರಿ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಉನ್ನತಮಟ್ಟ ತಲುಪುತ್ತಾರೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಅತಿಥಿ ಅಭ್ಯಾಗತರ ಆಗಮನ ಸಂತಸವನ್ನು ಹೆಚ್ಚಿಸುತ್ತದೆ. ಕಷ್ಟ ನಷ್ಟದ ನಡುವೆಯೂ ಯಶಸ್ಸನ್ನು ಗಳಿಸುವ ಬುದ್ದಿ ತೋರುವಿರಿ. ತಂದೆಯ ಜೊತೆಯಲ್ಲಿ ಇದ್ದ ಭಿನ್ನಾಭಿಪ್ರಾಯ ಮರೆಯಾಗುವುದು. ಪ್ರವಾಸಕ್ಕಾಗಿ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ನಿಮ್ಮ ನಿರೀಕ್ಷೆಯನ್ನು ಮಕ್ಕಳು ಸುಲಭವಾಗಿ ಈಡೇರಿಸುವರು. ಉತ್ತಮ ಆದಾಯವಿದ್ದರೂ ಹಣವನ್ನು ಉಳಿತಾಯ ಮಾಡಲು ವಿಫಲರಾಗುವಿರಿ.

Ad Widget . Ad Widget .

ವೃಷಭ ರಾಶಿ:
ಬಿಡುವಿಲ್ಲದ ಕೆಲಸಗಳ ಕಾರಣ ಕೈಕಾಲುಗಳಲ್ಲಿ ನೋವು ಇರುತ್ತದೆ. ವಯೋವೃದ್ಧರ ಆರೋಗ್ಯದಲ್ಲಿ ಏರಿಳಿತ ಉಂಟಾಗುತ್ತದೆ. ಸಮಾಜದಲ್ಲಿ ಉನ್ನತ ಗೌರವ ಲಭಿಸುತ್ತದೆ. ಅನಿರೀಕ್ಷಿತ ಖರ್ಚು ವೆಚ್ಚಗಳು ಇರಬಹುದು. ಕುಟುಂಬದಲ್ಲಿ ಮಾತ್ರವಲ್ಲದೆ ಸಮಾಜದಲ್ಲಿಯೂ ಉನ್ನತ ಗೌರವವನ್ನು ಪಡೆಯುವಿರಿ. ಉದ್ಯೋಗದಲ್ಲಿ ಅನಿರೀಕ್ಷಿತವಾದ ಬದಲಾವಣೆಗಳು ನಿಮಗೆ ಅನುಕೂಲಕರವಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶಕ್ಕಾಗಿ ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ. ಎಲ್ಲರೊಂದಿಗೆ ಸಂತೋಷದಿಂದ ಕಾಲ ಕಳೆಯಲು ಪರಸ್ಥಳಕ್ಕೆ ತೆರಳುವಿರಿ. ಅನಾವಶ್ಯಕವಾಗಿ ಎದುರಾಗುವ ಖರ್ಚು ವೆಚ್ಚಗಳನ್ನು ನಿಯಂತ್ರಿಸಬಲ್ಲಿರಿ. ವಾದ ವಿವಾದವನ್ನು ತೊರೆದು ಬುದ್ಧಿವಂತಿಕೆಯಿಂದ ಕೆಲಸ ಸಾಧಿಸುವಿರಿ.

ಮಿಥುನ ರಾಶಿ:
ದೈಹಿಕವಾಗಿ ಸಬಲರಾಗಲು ದೈಹಿಕ ವ್ಯಾಯಾಮವನ್ನು ಅವಲಂಬಿಸುವಿರಿ. ಕ್ರಮೇಣವಾಗಿ ಕಷ್ಟ ನಷ್ಟಗಳು ದೂರವಾಗುತ್ತವೆ. ಯೋಚನೆ ಮಾಡದೆ ಕೈಲಿರುವ ಹಣವನ್ನು ಖರ್ಚು ಮಾಡುವಿರಿ. ಹಣದ ಕೊರತೆ ಕಡಿಮೆಯಾಗಲು ಪೋಷಕರನ್ನು ಅವಲಂಬಿಸುವಿರಿ. ಹಬ್ಬ ಹರಿದಿನಗಳಲ್ಲಿ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ಹೆಚ್ಚಿನ ಹಣವನ್ನು ವಿನಿಯೋಗಿಸುವಿರಿ. ಅವಕಾಶವು ದೊರೆತಾಗ ಅದನ್ನು ಸದುಪಯೋಗ ಪಡಿಸಿಕೊಳ್ಳಿರಿ. ವಿದ್ಯಾರ್ಥಿಗಳು ಬಹುತೇಕ ಸಮಯವನ್ನುಮನರಂಜನೆಯಲ್ಲಿ ಕಳೆಯುತ್ತಾರೆ. ಸೋಲನ್ನು ಒಪ್ಪದೆ ಜಯಗಳಿಸಲು ಯಾವುದೇ ತ್ಯಾಗವನ್ನು ಮಾಡಬಲ್ಲಿರಿ. ಕುಟುಂಬದಲ್ಲಿ ಬಹು ಮುಖ್ಯ ಕೆಲಸವೊಂದು ನಿಮ್ಮಿಂದ ಪೂರ್ಣಗೊಳ್ಳಲಿದೆ. ಸುಲಭವಾಗಿ ಯಾರ ಪ್ರಭಾವಕ್ಕೂ ಮಣಿಯುವುದಿಲ್ಲ.

ಕಟಕ ರಾಶಿ:
ಆಹಾರ ಕ್ರಮದಲ್ಲಿ ಬದಲಾವಣೆ ತಂದುಕೊಂಡು ಸ್ಥಿರವಾದ ಆರೋಗ್ಯವನ್ನು ಪಡೆಯುವಿರಿ. ಯಾವುದೇ ಯೋಚನೆ ಇದ್ದರೂ ಸಂತೋಷ ಸಂಭ್ರಮದಿಂದ ವೇಳೆ ಕಳೆಯುವಿರಿ. ಹಣಕಾಸಿನ ತೊಂದರೆ ಎದುರಾಗಲು ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಒಳಗಾಗುವಿರಿ. ಆಸೆ ಆಕಾಂಕ್ಷೆಗಳು ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ನಿರಾಸೆಯನ್ನು ತಡೆಯದೆ ಸತತ ಪ್ರಯತ್ನದಿಂದ ಯಶಸ್ಸನ್ನು ಗಳಿಸುವಿರಿ. ಬಹುವಾಗಿ ನಂಬಿದ್ದ ವ್ಯಕ್ತಿಯ ಜೊತೆ ಮನಸ್ತಾಪ ಉಂಟಾಗುತ್ತದೆ. ಅತಿಯಾದ ಒಳ್ಳೆಯತನ ಉದ್ಯೋಗದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಲ್ಲವು. ಬುದ್ಧಿವಂತಿಕೆಯ ತೀರ್ಮಾನ ತೆಗೆದುಕೊಳ್ಳದೆ ಹೋದಲ್ಲಿ ದೊಡ್ಡ ಅವಕಾಶವೊಂದು ಮರೆಯಾಗುತ್ತದೆ. ಒಟ್ಟಾರೆ ಈ ವಾರ ಎಚ್ಚರಿಕೆಯಿಂದ ಮುಂದುವರೆಯಿರಿ.

ಸಿಂಹ ರಾಶಿ:
ಅತಿಯಾದ ಆತ್ಮವಿಶ್ವಾಸದಿಂದ ತೊಂದರೆಯನ್ನು ಎದುರಿಸಬೇಕಾಗುತ್ತದೆ. ದುಡುಕುತನದಿಂದ ಮುಂದುವರೆಯದೆ ಶಾಂತಿ ಸಂಯಮದಿಂದ ವರ್ತಿಸಿದರೆ ಯಾವ ಕೆಲಸವು ಅಸಾಧ್ಯವಲ್ಲ. ಸುಲಭವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಹಣಕಾಸಿನ ಕೊರತೆ ಮರೆಯಾಗುತ್ತದೆ. ಆತ್ಮೀಯ ಸ್ನೇಹಿತರೊಬ್ಬರು ಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತಾರೆ. ಮನೆಯ ಹೆಚ್ಚಿನ ಜವಾಬ್ದಾರಿ ನಿಮ್ಮದಾಗುತ್ತದೆ. ಅನಿರೀಕ್ಷಿತ ಲಾಭ ಕಂಡು ಬರುತ್ತದೆ. ವಿದ್ಯಾರ್ಥಿಗಳು ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸಬೇಕು. ಕುಟುಂಬದ ಹಿರಿಯರ ಬೆಂಬಲ ದೊರೆಯುತ್ತದೆ. ಹೊಸ ಹಣಕಾಸಿನ ಯೋಜನೆ ನಷ್ಟವನ್ನು ಉಂಟು ಮಾಡಬಹುದು. ಹೊಸ ಬಟ್ಟೆ ಅಥವಾ ಒಡವೆಗಳನ್ನು ಕೊಳ್ಳುವಿರಿ. ಅನಿರೀಕ್ಷಿತವಾಗಿ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವಿರಿ.

ಕನ್ಯಾ ರಾಶಿ:
ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಸಮಸ್ಯೆಗಳನ್ನು ಮರೆತು ಎಲ್ಲರೊಂದಿಗೆ ಸಂತಸದಿಂದ ಬಾಳುವಿರಿ. ಕುಟುಂಬದಲ್ಲಿ ಸಂಭ್ರಮದ ವಾತಾವರಣ ಕಂಡು ಬರುತ್ತದೆ. ತಪ್ಪನ್ನು ಒಪ್ಪದೆ ಟೀಕಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ವಿರೋಧಿಗಳು ಹೆಚ್ಚಬಹುದು. ಅನಿರೀಕ್ಷಿತ ಧನ ಲಾಭವಿರುತ್ತದೆ. ವಿದ್ಯಾರ್ಥಿಗಳು ವಿಶೇಷವಾದ ಸಾಧನೆ ಮತ್ತು ಗೌರವಕ್ಕೆ ಪಾತ್ರರಾಗುತ್ತಾರೆ. ಹಣದ ಕೊರತೆಯಿಂದ ಪಾರಾಗಲು ಉಪವೃತ್ತಿಯೊಂದನ್ನು ಆರಿಸುವಿರಿ. ಹಿರಿಯರ ಸಲಹೆಯನ್ನು ಪಾಲಿಸಿದರೆ ಯಾವುದೇ ತೊಂದರೆ ಎದುರಾಗದು. ಕೌಟುಂಬಿಕ ಕೆಲಸಗಳಿಗಾಗಿ ಹೆಚ್ಚಿನ ಹಣವನ್ನು ವಿನಿಯೋಗಿಸುವಿರಿ. ಹೊಸ ವಾಹನವನ್ನು ಕೊಳ್ಳುವ ಸಾಧ್ಯತೆ ಇದೆ.

ತುಲಾ ರಾಶಿ:
ತಡವಾದರೂ ಉದ್ಯೋಗದಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು ನಿಮ್ಮ ಪರವಾಗಿರುತ್ತದೆ. ಹಿರಿಯ ಅಧಿಕಾರಿಗಳ ಬೆಂಬಲದಿಂದ ಹೊಸ ಕೆಲಸವನ್ನು ಆರಂಭಿಸುವಿರಿ. ಕುಟುಂಬದಲ್ಲಿ ಹಿರಿಯರ ಸಹಾಯ ದೊರೆಯುತ್ತದೆ. ಕುಟುಂಬದಲ್ಲಿ ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ಹಣದ ತೊಂದರೆ ಉಂಟಾಗುವುದಿಲ್ಲ. ಕಷ್ಟ ನಷ್ಟಗಳಿಗೆ ಹೆದರದೆ ಯಶಸ್ಸನ್ನು ಗಳಿಸಲು ಪ್ರಯತ್ನಿಸುವಿರಿ. ಹಣಕಾಸಿನ ವ್ಯವಹಾರದಲ್ಲಿ ಆತ್ಮೀಯರೊಂದಿಗೆ ಮನಸ್ತಾಪ ಉಂಟಾಗಬಹುದು. ತಾಯಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಸಂತೋಷಕೂಟದಲ್ಲಿ ಭಾಗವಹಿಸಿ ಬೇಸರವನ್ನು ಮರೆಯುವಿರಿ. ದಿಡೀರನೆ ತೆಗೆದುಕೊಳ್ಳುವ ತೀರ್ಮಾನಗಳು ಅಪಜಯಕ್ಕೆ ಕಾರಣವಾಗಬಹುದು. ಕಾದು ನೋಡುವ ಬುದ್ಧಿ ಒಳ್ಳೆಯದು.

ವೃಶ್ಚಿಕ ರಾಶಿ:
ದೊರೆಯುವ ಅವಕಾಶಗಳನ್ನು ಆತುರದ ತೀರ್ಮಾನಗಳಿಂದ ಕಳೆದುಕೊಳ್ಳುವಿರಿ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಆಹಾರ ಕ್ರಮದಲ್ಲಿ ಬದಲಾವಣೆ ಅಗತ್ಯ. ಬೇಡದ ವಿಚಾರಗಳಿಗಾಗಿ ಹಣವನ್ನು ಖರ್ಚು ಮಾಡುವಿರಿ. ಹಠದ ಗುಣದಿಂದ ಆತ್ಮೀಯರು ದೂರವಿರುತ್ತಾರೆ. ಕೌಟುಂಬಿಕ ಕಾರಣಗಳಿಗಾಗಿ ಖರ್ಚು ವೆಚ್ಚಗಳು ಹೆಚ್ಚಾಗಲಿವೆ. ವಿದ್ಯಾರ್ಥಿಗಳು ಕ್ರಮೇಣವಾಗಿ ಕಲಿಕೆಯಲ್ಲಿ ಪ್ರಥಮರಾಗುತ್ತಾರೆ. ಗಂಟಲಿನ ಸಮಸ್ಯೆ ಉಂಟಾಗಬಹುದು. ನೀಡಿರುವ ಪ್ರದೇಶಗಳಿಗೆ ಕುಟುಂಬದ ಎಲ್ಲರೊಂದಿಗೆ ಪ್ರವಾಸಕ್ಕೆ ತೆರಳುವಿರಿ. ಉದ್ಯೋಗದಲ್ಲಿ ಬೇರೆಯವರ ಮನಸ್ಥಿತಿಯನ್ನು ಅರಿತು ವರ್ತಿಸಬೇಕು. ಆದಾಯ ಮತ್ತು ಖರ್ಚು ವೆಚ್ಚಗಳನ್ನು ಸರಿದೂಗಿಸಲು ಪ್ರಯತ್ನಿಸುವಿರಿ.

ಧನಸ್ಸು ರಾಶಿ:
ಗೆಲುವು ದೊರೆಯುವವರೆಗೂ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಯಾವುದೇ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಉತ್ತಮ ಪರಿಸರದ ಅವಶ್ಯಕತೆ ಇದೆ. ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನವನ್ನು ಗಳಿಸುವಿರಿ. ಸೋದರ ಅಥವಾ ಸೋದರಿ ಯಿಂದ ಹಣದ ಸಹಾಯ ದೊರೆಯುತ್ತದೆ. ದ್ರವಾಹಾರ ಸೇವನೆಯಿಂದ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಗಣ್ಯ ವ್ಯಕ್ತಿಗಳ ಸಹಾಯ ಸಹಕಾರ ನಿಮಗಿರುತ್ತದೆ. ಧಾರ್ಮಿಕ ಕಾರ್ಯವೊಂದಕ್ಕೆ ಹೆಚ್ಚಿನ ಒತ್ತು ನೀಡುವಿರಿ. ಉದ್ಯೋಗದಲ್ಲಿ ಅನಪೇಕ್ಷಿತ ಘಟನೆಯೊಂದು ನಡೆಯಬಹುದು. ಸೋಲಿಗೆ ಭಯಪಡದೆ ಗೆಲುವನ್ನು ನಿಮ್ಮದಾಗಿಸಿಕೊಳ್ಳುವಿರಿ

ಮಕರ ರಾಶಿ:
ಹಠದ ಗುಣದಿಂದ ಹಲವರ ವಿರೋಧವನ್ನು ಎದುರಿಸಬೇಕಾಗುತ್ತದೆ. ಅತಿ ನಿಧಾನವಾಗಿ ತೆಗೆದುಕೊಳ್ಳುವ ತೀರ್ಮಾನಗಳು ಬೇರೆಯವರಲ್ಲಿ ಬೇಸರ ಉಂಟುಮಾಡುತ್ತದೆ. ಕೊಂಚವೂ ಯೋಚಿಸದೆ ದುಡುಕಿ ಮಾತನಾಡುವ ಕಾರಣ ಏಕಾಂಗಿಯಾಗಿ ಇರಬೇಕಾಗುತ್ತದೆ. ಆರೋಗ್ಯದಲ್ಲಿ ಸ್ಥಿರತೆ ಮರುಕಳಿಸುತ್ತದೆ. ಬಂಧು-ಬಳಗದವರಿಗೆ ಅನಿವಾರ್ಯವಾಗಿ ಹಣದ ಸಹಾಯ ಮಾಡುವಿರಿ. ಕುಟುಂಬದ ಸಂಭ್ರಮದ ವಾತಾವರಣಕ್ಕೆ ಕಾರಣರಾಗುವಿರಿ. ಇತಿ ಮಿತಿ ಇಲ್ಲದೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳು ಆಟ ಪಾಠದ ಜೊತೆ ವಿಶ್ರಾಂತಿಗೂ ಪ್ರಾಮುಖ್ಯತೆ ನೀಡುತ್ತಾರೆ. ತಂದೆ ಅಥವಾ ತಾಯಿಯವರ ಸಂಪೂರ್ಣ ಸಹಕಾರ ನಿಮ್ಮದಾಗುತ್ತದೆ. ವಾರಾಂತ್ಯಕ್ಕೆ ಅನಿರೀಕ್ಷಿತವಾಗಿ ಉದ್ಯೋಗ ಬದಲಿಸುವ ಸಾಧ್ಯತೆ ಇದೆ.

ಕುಂಭ ರಾಶಿ:
ಅತಿಯಾದ ನಿದ್ದೆ ನಿಮ್ಮನ್ನು ಬಹುವಾಗಿ ಕಾಡುತ್ತದೆ. ಯಾವುದೇ ಕೆಲಸ ಕಾರ್ಯವಾದರೂ ಒಲ್ಲದ ಮನಸ್ಸಿನಿಂದ ಮುಂದುವರೆಯುವಿರಿ. ಹಣಕಾಸಿನ ವಿಚಾರದಲ್ಲಿ ಅನಿರೀಕ್ಷಿತ ಧನಲಾಭವಿದ್ದರೂ ಹಣವನ್ನು ಉಳಿಸಲಾರಿರಿ. ಕುಟುಂಬ ನಿರ್ವಹಣೆಗೆ ಹೆಚ್ಚಿನ ಹಣ ಬೇಕಾಗಬಹುದು. ಅನಾವಶ್ಯಕವಾಗಿ ಮಾನಸಿಕ ಖಿನ್ನತೆಗೆ ಒಳಗಾಗುವಿರಿ. ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮುಂದುವರೆಯುವುದು ಲಾಭಕರ. ದೊಡ್ಡ ಸಮಸ್ಯೆಯೊಂದನ್ನು ಮಾತುಕತೆಯಿಂದ ಬಗೆಹರಿಸುವಿರಿ. ವಿದ್ಯಾರ್ಥಿಗಳು ಮಾತ್ರ ಓದುವುದರಲ್ಲಿ ತನ್ಮಯರಾಗುತ್ತಾರೆ. ನಿಮ್ಮ ಮನದ ಆಂತರ್ಯವನ್ನು ಅರಿಯಲು ಸಂಗಾತಿಗೂ ಸಾಧ್ಯವಾಗುವುದಿಲ್ಲ. ರಹಸ್ಯವಾಗಿ ಸ್ವಂತ ಕೆಲಸಗಳನ್ನು ಪೂರೈಸುವಿರಿ. ಕುಟುಂಬದವರ ಮತ್ತು ಆತ್ಮೀಯರ ಅನುಕಂಪವನ್ನು ಬುದ್ದಿವಂತಿಕೆಯಿಂದ ಗಳಿಸುವಿರಿ.

ಮೀನ ರಾಶಿ:
ನೀವು ಆತಂಕಕ್ಕೆ ಒಳಗಾಗುವುದಲ್ಲದೆ ಜೊತೆಯಲ್ಲಿರುವವರಿಗೂ ಮಾನಸಿಕ ಒತ್ತಡವನ್ನು ಉಂಟುಮಾಡುವಿರಿ. ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸದೆ ಹೋದಲ್ಲಿ ಖಚಿತ ಯಶಸ್ಸು ದೊರೆಯುತ್ತದೆ. ಮಾರ್ಮಿಕತೆಯ ಮಾತುಕತೆ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಉತ್ತಮ ಆದಾಯ ವಿರುತ್ತದೆ. ಆದರೆ ಹಣ ಉಳಿಸುವ ಬಗ್ಗೆ ದಿಟ್ಟ ತೀರ್ಮಾನವನ್ನು ತೆಗೆದುಕೊಳ್ಳಬೇಕು. ಯಾರನ್ನು ಸುಲಭವಾಗಿ ನಂಬದ ಸ್ಥಿತಿಯಲ್ಲಿ ಇರುವಿರಿ. ವಂಶಾಧಾರಿತ ವ್ಯಾಪಾರದಿಂದ ಹೆಚ್ಚಿನ ಲಾಭ ಗಳಿಸುವಿರಿ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಬಹುದು. ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಹಣಕಾಸಿನ ವ್ಯವಹಾರದಲ್ಲಿ ಮುಂದುವರೆಯಿರಿ. ವಿದ್ಯಾರ್ಥಿಗಳು ದೃಡವಾದ ಮನಸ್ಸಿನಿಂದ ಅಭ್ಯಾಸದಲ್ಲಿ ನಿರತರಾಗಬೇಕು.

Leave a Comment

Your email address will not be published. Required fields are marked *