Ad Widget .

ಕೊಳಲನೂದುತ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ಮನೆ-ಮನೆಗೆ ನೀಡುತ್ತಿರುವ ಪುಟ್ಟ ಬಾಲಕನ ವಿಡಿಯೋ ವೈರಲ್

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ದಿನಗಣನೆ ಆರಂಭ ಆಗಿದೆ. ಜನವರಿ 22ರಂದು ವಿಜೃಂಭಣೆಯಿಂದ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕೆ ಅನೇಕ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. ಇದಲ್ಲದೇ ಭಾರತದ ಪ್ರತೀ ಮೂಲೆಯಲ್ಲಿರುವ ಶ್ರೀ ರಾಮ ಭಕ್ತರಿಗೆ ಅಯೋಧ್ಯೆಯಿಂದ ತಂದ ಅಕ್ಷತೆ ನೀಡಿ ಆಹ್ವಾನಿಸಲಾಗುತ್ತಿದೆ.

Ad Widget . Ad Widget .

ಇದಕ್ಕೆ ಪೂರಕವೆಂಬಂತೆ ಇದೀಗ ಪುಟ್ಟ ಬಾಲಕನ ವಿಡಿಯೋವೊಂದು ನೆಟ್ಟಿಗರ ಮನಗೆದ್ದಿದೆ. ರಾಮ ಮಂದಿರ ಲೋಕಾರ್ಪಣೆಯ ಸುಸಂದರ್ಭದಲ್ಲಿ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ಕೊಳಲನೂದುತ ಮನೆ-ಮನೆಗೆ ನೀಡಿ ಆಹ್ವಾನ ನೀಡಿರುವ ಪುಟ್ಟ ಬಾಲಕನ ವಿಡಿಯೋ ವೈರಲ್ ಆಗುತ್ತಿದೆ.

Ad Widget . Ad Widget .

ಈ ವಿಡಿಯೋವನ್ನು @mauna_adiga ಎಂಬ ‘X’ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೆಟ್ಟಿಗರ ಮನಗೆದ್ದಿದೆ. ಇದೀಗಾಗಲೇ ಲಕ್ಷಾಂತರ ರಾಮಭಕ್ತರು ಪುಟ್ಟ ಬಾಲಕನ ಭಕ್ತಿಗೆ ಕಾಮೆಂಟ್​​​ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಈ ಬಾಲಕ ಕೊಳಲನೂದುತ ಮನೆಮನೆಗೆ ಬಂದು ಮಂತ್ರಾಕ್ಷತೆ ನೀಡಿ ಪ್ರೀತಿಯಿಂದ ಆಹ್ವಾನ ನೀಡಿರುತ್ತಿರುವುದನ್ನು ಕಾಣಬಹುದು.

Leave a Comment

Your email address will not be published. Required fields are marked *