Ad Widget .

ಮಾಂಸಕ್ಕಾಗಿ 11 ನವಿಲುಗಳ ಮಾರಣಹೋಮ

ಸಮಗ್ರ ನ್ಯೂಸ್: ಮಾಂಸಕ್ಕಾಗಿ ವಿಷದ ಕಾಳು ಹಾಕಿ 11 ನವಿಲುಗಳ ಹತ್ಯೆ ಮಾಡಿರುವ ಅಮಾನವೀಯ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಹೊರ ವಲಯದಲ್ಲಿ ಬೆಳಕಿಗೆ ಬಂದಿದೆ.

Ad Widget . Ad Widget .

ಕಬ್ಬಿನ ಗದ್ದೆಯಲ್ಲಿ ರಾಷ್ಟ್ರಪಕ್ಷಿ ಎಂಟು ನವಿಲುಗಳು ಮೃತ ದೇಹಗಳು ಪತ್ತೆಯಾಗಿವೆ. ಸ್ಥಳಕ್ಕೆ ಚಿಕ್ಕೋಡಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಇಟ್ಟಿಗೆ ಕಾರ್ಖಾನೆ ಕಾರ್ಮಿಕ ಮಂಜುನಾಥ ಪವಾರ್ ಬಂಧಿತ ಆರೋಪಿ, ಮತ್ತೋರ್ವ ಆರೋಪಿ ಪರಾರಿಯಾಗಿದ್ದು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ. ನವಿಲುಗಳಿಗೆ ವಿಷ ಹಾಕಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನವಿಲುಗಳ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿಗೆ ರವಾನಿಸಲಾಗಿದೆ. ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *