Ad Widget .

ಬೆಳ್ಳಾರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ ನಿಂದ 16ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಸಮಗ್ರ ನ್ಯೂಸ್: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ಳಾರೆ ವಲಯದಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಐವರ್ನಾಡು ಪ್ರಗತಿ ಬಂಧು-ಸ್ವ ಸಹಾಯ ಸಂಘಗಳ ಒಕ್ಕೂಟ ಐವರ್ನಾಡು, ಪಾಲೆಪ್ಪಾಡಿ, ದೇವರಕಾನ ಹಾಗೂ ಊರವರ ಸಹಕಾರದೊಂದಿಗೆ ಪರಮಪೂಜ್ಯ ರಾಜಶ್ರೀ ಡಾ| ಡಿ. ವೀರೇಂದ್ರ ಹೆಗ್ಗಡೆ ರವರ ಮತ್ತು ಮಾತೃಶ್ರೀ ಡಾ| ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹದಿನಾರನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು 50 ಮಂದಿ ವ್ರತದಾರಿಗಳ ಪಾಲ್ಗೊಳ್ಳುವಿಕೆಯಿಂದ ಜ.14ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪೂಜೆಯ ನಂತರ ಧಾರ್ಮಿಕ ಸಭಾ ಕಾರ್ಯಕ್ರಮವು ಐವರ್ನಾಡು ಸಾಮೂಹಿಕ ಸತ್ಯನಾರಾಯಣ ಪೂಜೆ ಸಮಿತಿಯ ಅಧ್ಯಕ್ಷ ಎಸ್.ಎನ್.ಮನ್ಮಥರವರ ಅಧ್ಯಕ್ಷತೆಯಲ್ಲಿ ನಡೆಯಿತು. ಚಂದ್ರಶೇಖರ ಬಿಳಿನೆಲೆಯವರು ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸುಳ್ಯ ತಾಲೂಕಿನ ಮಾನ್ಯ ಯೋಜನಾಧಿಕಾರಿ ನಾಗೇಶ್ ಪಿ. ಅವರು ಯೋಜನೆಯು ನಡೆದುಬಂದ ಹಾದಿ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಐವರ್ನಾಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಹಾಗೂ ಒಕ್ಕೂಟದ ವಲಯ ಅಧ್ಯಕ್ಷೆ ವೇದಾ ಹೆಚ್. ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ ಎಸ್.ಎನ್.ಮನ್ಮಥರವರು ಗ್ರಾಮ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಕಾರ್ಯವೈಕರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

Ad Widget . Ad Widget . Ad Widget .

ಕಾರ್ಯಕ್ರಮದಲ್ಲಿ ಐವರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಲಕೃಷ್ಣ ಕಿಲಾಡಿ ಹಾಗೂ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ ರವರು ಉಪಸ್ಥಿತರಿದ್ದರು.

ಜನ ಮಂಗಳ ಕಾರ್ಯಕ್ರಮದಡಿಯಲ್ಲಿ ಮುಪ್ಪೇರಿಯ ಒಕ್ಕೂಟದ ಸದಸ್ಯೆ ಚಿನ್ನಮ್ಮರವರಿಗೆ ವಾಕರ್ ವಿತರಣೆಮಾಡಲಾಯಿತು. ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಡಿಯಲ್ಲಿ ಕೊಡಿಯಾಲ ಒಕ್ಕೂಟದ ಸದಸ್ಯೆ ಜಲಜಾಕ್ಷಿರವರಿಗೆ ಅನಾರೋಗ್ಯ ನಿಮಿತ್ತ 71,000ರೂ ಹಾಗೂ ಶೀಲಾ ರವರಿಗೂ 10000 ರೂಪಾಯಿ ಮಂಜುರಾದ ಚೆಕ್ ವಿತರಣೆ ಮಾಡಲಾಯಿತು. ಐವರ್ನಾಡು ಒಕ್ಕೂಟದ ಸದಸ್ಯೆ ಸಿಂಕುರವರ ತಂಗಿ ಲಲಿತಾ ರವರಿಗೆ ಮಾನಸಿಕ ಅಸ್ವಸ್ತೆಗಾಗಿ ತಿಂಗಳಿಗೆ ತಲಾ 750ರಂತೆ ಮಾಸಾಸನ ಮಂಜುರಾಗಿದ್ದು ಮಂಜುರಾತಿ ಪತ್ರವನ್ನು ವಿತರಣೆ ಮಾಡಲಾಯಿತು. ಈ ಸಂದರ್ಭ ಬೆಳ್ಳಾರೆ ವಲಯದ ಒಕ್ಕೂಟದ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು, ಊರ ಗಣ್ಯರು ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು. ತಾಲೂಕಿನ ಜ್ಞಾನವಿಕಾಸದ ಸಮನ್ವಯ ಅಧಿಕಾರಿ ಭಾರತಿರವರು ಕಾರ್ಯಕ್ರಮವನ್ನು ನಿರೂಪಿಸಿ ಐವರ್ನಾಡು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ವನಿತಾ ರವರು ವಲಯದ ಸಾಧನ ವರದಿಯನ್ನು ವಾಚಿಸಿದರು. ದೇವರಕಾನ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಯಶೋಧ ರವರು ಸ್ವಾಗತಿಸಿ, ವಲಯದ ಮೇಲ್ವಿಚಾರಕ ಗೋಪಾಲಕೃಷ್ಣರವರು ಧನ್ಯವಾದ ಸಮರ್ಪಿಸಿದರು.

Leave a Comment

Your email address will not be published. Required fields are marked *