ಸಮಗ್ರ ನ್ಯೂಸ್: ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ರಾಮಮಂದಿರ ಸಿದ್ಧತೆ ನಡುವೆ 400% ವಿಮಾನ ದರ ಏರಿಕೆಯಾಗಿದೆ. ಬೇಡಿಕೆಗೆ ಅನುಗುಣವಾಗಿ ವಿಮಾನದ (Flight) ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ.
ವಿಮಾನ ಟಿಕೆಟ್ ದರ ಹೆಚ್ಚಳ.. !
ವಿಮಾನಯಾನ ಸಂಸ್ಥೆಗಳು ಬೇಡಿಕೆಗೆ ಅನುಗುಣವಾಗಿ ಟಿಕೆಟ್ ದರ ಹೆಚ್ಚಿಸಿವೆ. ಕಳೆದ 10 ದಿನದಲ್ಲಿ 6,000 ಇದ್ದ ಟಿಕೆಟ್ ದರ ಈಗ 21,500 ಆಗಿದೆ. ಬರೋಬ್ಬರಿ ಶೇ.400ರಷ್ಟು ಹೆಚ್ಚಳವಾಗಿದೆ.
ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್ ದರ ಎಷ್ಟು?
ವಿಮಾನ ದರ 400% ಏರಿಕೆ!
-ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್ ದರ 6,000 ಇತ್ತು
-ಜ.19ಕ್ಕೆ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನದ ಟಿಕೆಟ್ 21,500
-ಜ.20ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್
-ಜ. 20ರಂದು ಹೊರಡಲಿರುವ ವಿಮಾನದ ಟಿಕೆಟ್ ದರ 29,700
-ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1ಕ್ಕೆ ವಿಮಾನ ಹೊರಡಲಿದೆ
-ಮಾಮೂಲಿ ದಿನಕ್ಕೆ ಹೋಲಿಸಿದರೆ ಟಿಕೆಟ್ ದರದಲ್ಲಿ ಶೇ.395% ಏರಿಕೆ
-ಜ.20ಕ್ಕೂ ಮುನ್ನ ಅಯೋಧ್ಯೆಗೆ ತೆರಳುವ ವಿಮಾನಗಳ ಟಿಕೆಟ್ ಸೋಲ್ಡ್
-ಕೆಲವೇ ಟಿಕೆಟ್‍ಗಳು ಲಭ್ಯವಿದ್ದರೂ ಕೂಡ ಬೆಲೆ ಕೈಗೆಟಕದಂತಾದ ದರ
ವಾರಾಂತ್ಯದಲ್ಲೇ ಅಯೋಧ್ಯೆಯ ವಿಮಾನ ಟಿಕೆಟ್ ದರ ಭಾರೀ ಏರಿಕೆ ಜ.20 ಮತ್ತು ಜ. 21ರಂದು ರಜೆ ಇರುವ ಕಾರಣ ರಾಮ ಮಂದಿರ ಉದ್ಘಾಟನೆಗೂ ಮುನ್ನವೇ ಅಯೋಧ್ಯಾಯತ್ತ ಜನರು ಹೆಚ್ಚು ಪಯಣ ಬೆಳೆಸುವ ಸಾಧ್ಯತೆ ಇದೆ.