Ad Widget .

3 ರೋಜಸ್ ನಕಲಿ ಟೀ ಪುಡಿ ಮಾಡ್ತಿದ್ದ ಮನೆ ಮೇಲೆ ಪೊಲೀಸರ ದಾಳಿ

ಸಮಗ್ರ ನ್ಯೂಸ್: ಬೆಂಗಳೂರು ನಗರ ಉತ್ತರ ತಾಲೂಕಿನ ಗಂಗೊಂಡಹಳ್ಳಿಯಲ್ಲಿ ನಕಲಿ 3 ರೋಜಸ್ ಟೀ ಪುಡಿ ತಯಾರು ಮಾಡುತ್ತಿದ್ದ ಮನೆ ಮೇಲೆ 3 ರೋಜಸ್​​​ ಕಂಪನಿ ಅಧಿಕಾರಿಗಳು ಹಾಗೂ ಪೊಲೀಸರ ತಂಡ ದಾಳಿ ನಡೆಸಿದೆ. ಕೃತ್ಯಕ್ಕೆ ಬಳಸಿದ್ದ 200 ಕೆಜಿ ಟೀ ಪುಡಿ, ಮಷಿನ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ದಾಳಿ ವೇಳೆ ಕೃತ್ಯದಲ್ಲಿ ಭಾಗಿಯಾಗಿದ್ದ ಮನೆ ಮಾಲೀಕ ಮಾಧುಸಿಂಗ್​​ ಪರಾರಿಯಾಗಿದ್ದಾನೆ.

Ad Widget . Ad Widget .

6 ತಿಂಗಳಿಂದ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಹಲವಾರು ಜಿಲ್ಲೆಯಲ್ಲಿ 3 ರೋಜಸ್ ಟೀ ಪುಡಿ ವಹಿವಾಟು ಕುಸಿದಿತ್ತು. ಈ ಹಿನ್ನೆಲೆ ಕಂಪನಿ ಸೆಲ್ಸ್ ಟೀಮ್ ಕಾರಣ ಹುಡುಕಲು ಶುರುಮಾಡಿದ್ರು. ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದವರನ್ನ ಗುಪ್ತ ಕಾರ್ಯಚರಣೆ ಮೂಲಕ ಪತ್ತೆ ಹಚ್ಚಲಾಯಿತು. ಈ ಮೂಲಕ ಖಚಿತವಾದ ಮಾಹಿತಿ ಮೇರೆಗೆ ಗಂಗೊಂಡಹಳ್ಳಿಯಲ್ಲಿ ರಾಜಸ್ಥಾನ ಮೂಲದ ಮಾಧುಸಿಂಗ್ ಮನೆ ಮೇಲೆ ಏಕಾಏಕಿ ಪೊಲೀಸರು ಹಾಗೂ 3ರೋಜಸ್ ಕಂಪನಿಯವರು ದಾಳಿ ಮಾಡಿದಾಗ ಮನೆಯಲ್ಲಿದ್ದ ಇಬ್ಬರು ಕಾರ್ಮಿಕರು ಸೇರಿದಂತೆ ಮನೆ ಮಾಲೀಕ ಮಾಧುಸಿಂಗ್ ಪರಾರಿಯಾಗಿದ್ದರೆ. ಬೇರೆ ಬೇರೆ ರೀತಿಯ ಟೀ ಪುಡಿ ಬಳಿಸಿ 3 ರೋಜಸ್ ಕಂಪನಿಯ ಲೋಗೋ ಬಳಸಿ ನಕಲಿ ಟೀ ಪುಡಿಯನ್ನ ಪಾಕೇಟ್ ಮಾಡಿರೋದು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದೆ. ಸ್ಥಳದಲ್ಲಿ ಸಿಕ್ಕ 200ಕೆಜಿಯಷ್ಟು ಟೀ ಪುಡಿ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಮೆಷಿನ್ ಜಪ್ತಿ ಮಾಡಲಾಗಿದೆ. ಈ ಪ್ರಕರಣ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅರೋಪಿಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ.

Ad Widget . Ad Widget .

Leave a Comment

Your email address will not be published. Required fields are marked *