ಸಮಗ್ರ ನ್ಯೂಸ್: ಪೆರುವಾಜೆ ಶ್ರೀ ಉದ್ಭವ ಜಲದುರ್ಗಾ ದೇವಿ ದೇವಸ್ಥಾನದ ನೂತನ ರಥೋತ್ಸವ ಜ. 19ರಂದು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲ ಆಗಲು ಸಾರಿಗೆ ಬಸ್ ವ್ಯವಸ್ಥೆಗೆ ಕಲ್ಪಿಸಲು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮಾಜಿ ಜಿಲ್ಲಾಧ್ಯಕ್ಷ ಸಚಿನ್ ರಾಜ್ ಶೆಟ್ಟಿ ಅವರು ಮನವಿ ಮಾಡಿಕೊಂಡರು.
ಈ ಸಮಯದಲ್ಲಿ ಮಾಡಾವು, ಕಾಣಿಯೂರು, ಸವಣೂರು, ಕಲ್ಮಡ್ಕ, ಬಾಳಿಲ, ಪೆರ್ಲಂಪಾಡಿ, ಐವರ್ನಾಡು ಈ ಸ್ಥಳಗಳಿಂದ ಸಂಜೆ ಮತ್ತು ರಾತ್ರಿ ವಿಶೇಷ ಸಾರಿಗೆ ವ್ಯವಸ್ಥೆ ಮಾಡುವಂತೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮಾಜಿ ಜಿಲ್ಲಾಧ್ಯಕ್ಷ ಸಚಿನ್ ರಾಜ್ ಶೆಟ್ಟಿ ಅವರು KSRTC ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿ ಅವರಿಗೆ ಮನವಿ ಮಾಡಿದರು. ಸಾರಿಗೆ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ತಿಳಿಸಿದ್ದಾರೆ.