ಸಮಗ್ರ ನ್ಯೂಸ್: ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ.. ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕರು ಗೈರಾಗುವ ವಿಚಾರ ಹೊರಬಿದ್ದಿತ್ತು.ಈ ವಿಚಾರಕ್ಕೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ನಾವೂ ಹಿಂದುಗಳೇ, ನಾನೂ ಕೂಡ ಶ್ರೀರಾಮನ ಭಕ್ತ. ನಮಗೂ ಶ್ರೀ ರಾಮಚಂದ್ರ ಆರಾಧ್ಯ ದೇವರೇ. ಶ್ರೀರಾಮ ಹಿಂದೂಗಳ ಆರಾಧ್ಯ ದೈವ. ಕಾಂಗ್ರೆಸ್‌ನಲ್ಲೂ ಶ್ರೀರಾಮನ ಭಕ್ತರಿದ್ದಾರೆ. ಶ್ರೀರಾಮಚಂದ್ರ ಏನ್ ಬಿಜೆಪಿಯವರ ಅಪ್ಪನ ಮನೆ ಆಸ್ತಿ ಏನೂ ಅಲ್ಲ ಎಂದು ಹೇಳಿದರು. ನಾವೂ ಶ್ರೀರಾಮನನ್ನು ಆರಾಧಿಸುತ್ತೇವೆ ಅಷ್ಟೇ ಅಲ್ಲ ಅಲ್ಲಾಹ್, ಏಸುವನ್ನು ಗೌರವಿಸುತ್ತೇವೆ. ಬಿಜೆಪಿಯವರ ತರಹ ಧರ್ಮ-ಧರ್ಮಗಳ ಮಧ್ಯೆ ಕಿತ್ತಾಟ ತರುವ ಕೆಲಸ ಮಾಡುವುದಿಲ್ಲ. ಕಾಂಗ್ರೆಸ್ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುತ್ತದೆ ಎಂದು ಹೇಳಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ವಿರುದ್ಧವೂ ಕಿಡಿಕಾರಿದ ಶಾಸಕ ಪ್ರದೀಪ್ ಈಶ್ಚರ್, ಆತನಷ್ಟು ಅಯೋಗ್ಯ, ಮುಠ್ಠಾಳ ಇನ್ನೊಬ್ಬರಿಲ್ಲ. 45 ವರ್ಷ ರಾಜಕೀಯ ಅನುಭವ ಹೊಂದಿರುವ ಸಿದ್ಧರಾಮಯ್ಯರ ಬಗ್ಗೆ ಮಾತಾಡ್ತಾರೆ. ಪ್ರತಾಪ್ ಸಿಂಹ ಅವರೇ ಬಾಯ್ ಮುಚ್ಚಿಕೊಂಡು ಇರಬೇಕು, ಬಾಯಿ ತೆವಲು ಕಡಿಮೆ ಮಾಡಬೇಕು ಎಂದರು. ಲೋಕಸಭೆಯ ಪ್ರವೇಶಕ್ಕೆ ಪಾಸ್ ಕೊಟ್ಟ ಪ್ರತಾಪ್ ಸಿಂಹ ದೇಶದ್ರೋಹಿ ಅಲ್ವಾ ಎಂದು ಪ್ರಶ್ನಿಸಿದ ಶಾಸಕ ಪ್ರದೀಪ್ ಈಶ್ವರ್, ಒಂದು ವೇಳೆ ನಾವು ಪಾಸ್ ಕೊಟ್ಟಿದ್ರೆ ಏನ್ ಪಟ್ಟ ಕಟ್ಟುತ್ತಿದ್ರಿ ಎಂದು ಪ್ರಶ್ನಿಸಿದರು. ಇನ್ನು, ಕೇಂದ್ರ ಸರ್ಕಾರ ನಮ್ಮ ಪಾಲಿನ ಅಕ್ಕಿ ಕೊಡ್ತಿದ್ದಾರೆಯೇ ಹೊರತು, ಅವರ ಮನೆಯಿಂದ ತಂದು ಕೊಡ್ತಿಲ್ಲ ಎಂದ ಪ್ರದೀಪ್ ಈಶ್ವರ್, ಚುನಾವಣಾ ಸಮಯದಲ್ಲಿ ಬಿಜೆಪಿಯವರು ಬಾಯಿ ಬಡ್ಕೋತಾರೆ ಎಂದರು.
ಸಿಎಂ ಸಿದ್ಧರಾಮಯ್ಯನವರ ಬಗ್ಗೆ ಮಾತಾಡಬೇಕಾದರೆ ನಾಲಿಗೆ ಬಿಗಿಹಿಡಿದು ಮಾತಾಡಬೇಕು ಅಂತ ಎಚ್ಚರಿಕೆ ಕೊಟ್ಟರು.