ದೇಶದ ಅತೀ ಉದ್ದದ ಸಮುದ್ರ ಸೇತುವೆ ಇಂದು ಲೋಕಾರ್ಪಣೆ/ ಪ್ರಧಾನಿ ಮೋದಿಯಿಂದ ಉದ್ಘಾಟನೆ

ಸಮಗ್ರ ನ್ಯೂಸ್: ದೇಶದ ಅತೀ ಉದ್ದದ ಸಮುದ್ರ ಸೇತುವೆಯಾದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಇಂದು ಲೋಕಾರ್ಪಣೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

Ad Widget ... ..

ಮುಂಬೈನ ಸವಿ ಹಾಗೂ ರಾಯಗಢದ ಪ್ರವಾ ಪ್ರದೇಶದ ನಡುವಿನ 21.8 ಕಿ.ಮೀ ಉದ್ದದ ಸೇತುವೆಯನ್ನು ಕೇವಲ 20 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ. ಒಟ್ಟಾರೆ ಆರು ಲೇನ್ ಮಾರ್ಗ ಹೊಂದಿರುವ ಅಟಲ್ ಬಿಹಾರಿ ವಾಜಪೇಯಿ ಸೇವಿ-ನವ ಶೇವಾ ಅಟಲ್ ಸೇತು ಸಮುದ್ರದ ಮೇಲೆ 16.50 ಕಿಮೀ ಹಾಗೂ ಭೂಮಿಯ ಮೇಲೆ 5.50 ಕಿ.ಮೀ ಉದ್ದವನ್ನು ಹೊಂದಿದೆ. 60 ವರ್ಷದ ಹಿಂದ ಆರಂಭವಾಗಿದ್ದ ಈ ಕನಸು, ಇಂದು ನನಸಾಗುವ ಸಂದರ್ಭ ಬಂದಿದೆ.

Ad Widget

ಈ ರಸ್ತೆಯಲ್ಲಿ ನಾಲ್ಕು ಚಕ್ರ ವಾಹನಗಳ ವೇಗಮಿತಿ 100 ಕಿಮೀ ಆಗಿದ್ದು, ಬೈಕ್, ಆಟೋ ಹಾಗೂ ಟ್ರಾಕ್ಟರ್ ಸಂಚಾರ ನಿಬರ್ಂಧಿಸಲಾಗಿದೆ. 1962ರಲ್ಲಿ ಎರಡು ನಗರಗಳ ಮಧ್ಯೆ ಸಂಚಾರದ ಕನಸು ಆರಂಭವಾಗಿತ್ತು. ಅಂತಿಮವಾಗಿ 2018 ರಲ್ಲಿ ಕಾಮಗಾರಿ ಆರಂಭವಾಗಿತ್ತು.

Leave a Comment

Your email address will not be published. Required fields are marked *