Ad Widget .

ಜನವರಿ 22 ರಂದು ಧ್ರುವ ಸರ್ಜಾ ಮಗಳ ನಾಮಕರಣ..!

ಸಮಗ್ರ ನ್ಯೂಸ್: ಇನ್ನೇನೂ ಜನವರಿ 22ರ ದಿನಕ್ಕಾಗಿ ಇಡೀ ದೇಶವೇ ಕಾಯುತ್ತಿದೆ. ಅಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಅಷ್ಟೇ.ಹಲವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗುವುದಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ. ಕನ್ನಡ ಸಿನಿಮಾ ರಂಗದಿಂದಲೂ ಹಲವಾರು ಸೆಲೆಬ್ರಿಟಿಗಳಿಗೆ ಇದಾಗಲೆ ಆಹ್ವಾನ ಬಂದಿದೆ. ಆದರೆ ಈ ದಿನವೇ ನಟ ಧ್ರುವ ಸರ್ಜಾ ತಮ್ಮ ಮಕ್ಕಳಿಗೆ ನಾಮಕರಣ ಮಾಡಲಿದ್ದಾರೆ ಎಂಬ ಮಾಹಿತಿಯು ಹೊರಬಿದ್ದಿದೆ.

Ad Widget . Ad Widget .

ಧ್ರುವ ಸರ್ಜಾ ಅಂಡ್ ಫ್ಯಾಮಿಲಿ ಆಂಜನೇಯನ ಭಕ್ತರು. ಆಂಜನೇಯ ಗುಡಿಯನ್ನೇ ಈ ಕುಟುಂಬ ನಿರ್ಮಾಣ ಮಾಡಿದೆ. ಹನುಮನ ಉಸಿರಾಗಿರುವ ರಾಮನ ಮಂದಿರ ಉದ್ಘಾಟನೆ ದಿನದಂದು ತಮ್ಮ ಮಕ್ಕಳಿಗೆ ನಾಮಕರಣ ಮಾಡಲಿದ್ದಾರಂತೆ ನಟ ಧ್ರುವ.

Ad Widget . Ad Widget .

ಇನ್ನೂ ಧ್ರುವ ಸರ್ಜಾ ಮಕ್ಕಳ ಹೆಸರೇನು ಅಂತ ಅವರ ಅಭಿಮಾನಿಗಳು ಕೇಳುತ್ತಿದ್ದರು. ಈಗ ಮಕ್ಕಳ ಹೆಸರನ್ನ ರಿವೀಲ್ ಮಾಡ್ತಿದ್ದಾರೆ ಧ್ರುವ. ರಾಮ ಮಂದಿರದ ದಿನವೇ ಮಕ್ಕಳ ನಾಮಕರಣ ಮಾಡುತ್ತಿರೋ ಧ್ರುವ ಮಕ್ಕಳಿಗೆ ರಾಮಾಯಣದಲ್ಲಿ ಬರೋ ಎರಡು ಪವರ್ ಫುಲ್ ಹೆಸರನ್ನೇ ಇಡುತ್ತಿದ್ದಾರಂತೆ. ಬೆಂಗಳೂರಿನ ಖಾಸಗಿ ಹೋಟೆಲ್ ಅಥವ ಚಿರು ಸರ್ಜಾ ಸಮಾಧಿ ಇರೋ ನೆಲಗುಳಿಯಲ್ಲಿ ಮಕ್ಕಳ ನೇಮಿಂಗ್ ಸೆರ್ಮನಿ ಕಾರ್ಯಕ್ರಮ ನಡೆಯಲಿದೆಯಂತೆ.

Leave a Comment

Your email address will not be published. Required fields are marked *