Ad Widget .

ಸೋಮರವಾರಪೇಟೆ: ಮಾನವೀಯತೆ ಮೆರೆದ ಕರವೇ

ಸಮಗ್ರ ನ್ಯೂಸ್: ಬಳ್ಳಾರಳ್ಳಿ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದ ವಯಸ್ಸಾದ ವೃದ್ಧರನ್ನು ಬೆಂಗಳೂರು ಆಟೋ ರಾಜ ಅನಾಥಾಶ್ರಮಕ್ಕೆ ಸೇರಿಸುವ ಮೂಲಕ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯ ಹಂಡ್ಲಿ ಗ್ರಾ.ಪಂ. ಮತ್ತು ಗ್ರಾ.ಪಂ. ಸದಸ್ಯ ವೀರೇಂದ್ರ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯವರು ಮಾನವೀಯತೆ ಮೆರೆದಿದ್ದಾರೆ.

Ad Widget . Ad Widget .

ಎರಡು ವರ್ಷದಿಂದ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದ ವಯಸ್ಸಾದ ವೃದ್ದನನ್ನು(70) ಗಮನಿಸಿ ಗ್ರಾಮಸ್ಥರು ಕರ್ನಾಟಕ ರಕ್ಷಣಾ ವೇದಿಕೆಗೆ ತಿಳಿಸಿ ಅವರನ್ನು ಅನಾಥಾಶ್ರಮಕ್ಕೆ ಸೇರಿಸುವಂತೆ ಕೇಳಿಕೊಂಡಿದ್ದರು. ಅದರಂತೆ ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷೆ ಫ್ರಾನ್ಸಿಸ್ ಡಿಸೋಜರವರು ಹಂಡ್ಲಿ ಗ್ರಾ.ಪಂ. ಸದಸ್ಯ ವೀರೇಂದ್ರ ಕುಮಾರ್ ಅವರ ಸಹಕಾರದೊಂದಿಗೆ ಬೆಂಗಳೂರು ಆಟೋ ರಾಜ ಅನಾಥಾಶ್ರಮಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರೆ.

Ad Widget . Ad Widget .

ಈ ಸಂದರ್ಭದಲ್ಲಿ ಹಂಡ್ಲಿ ಗ್ರಾ.ಪಂ. ತಾಲ್ಲೂಕು ಅಧ್ಯಕ್ಷೆ ಫ್ರಾನ್ಸಿಸ್ ಡಿಸೋಜ, ಹಂಡ್ಲಿ ಗ್ರಾಮ ಪಂಚಾಯತಿ ಸದಸ್ಯ ವೀರೇಂದ್ರ ಕುಮಾರ್, ಬಾಳ್ಳಾರಳಿ ಜಗದೀಶ್, ಗಂಗಾಧರ, ಭರತ್, ಹೂವಯ್ಯ ಭಾಗವಹಿಸಿದ್ದರು.

Leave a Comment

Your email address will not be published. Required fields are marked *