Ad Widget .

ಆದರ್ಶ ಗ್ರಾಮ ಬಳ್ಪದ ಅಭಿವೃದ್ಧಿ ದೇಶಕ್ಕೆ ಮಾದರಿ| ಕೇಂದ್ರ ಸಚಿವ ಭಗವಂತ ಖೂಬಾ ಶ್ಲಾಘನೆ

ಸಮಗ್ರ ನ್ಯೂಸ್: ಬಳ್ಪ ಗ್ರಾಮ ಪಂಚಾಯತ್ ನಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯ ಮೂಲಕ 58 ಕೋಟಿ ರೂ ವೆಚ್ಚದಲ್ಲಿ ಗ್ರಾಮದ ಅಭಿವೃದ್ಧಿ ದೇಶಕ್ಕೆ ಮಾದರಿ ಯಾಗಿದೆ ಎಂದು ಕೇಂದ್ರ ರಾಸಾಯನಿಕ,‌ ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಭಗವಂತ ಖೂಬ ಶ್ಲಾಘಿಸಿದರು.

Ad Widget . Ad Widget .

ಅವರು ಬುಧವಾರ ಕಡಬ ತಾಲೂಕಿನ ಬಳ್ಪ-ಕೇನ್ಯದ ಗ್ರಾಮ ಉತ್ಸವ ಸಮಿತಿ ಆಶ್ರಯ ದಲ್ಲಿ ಹಮ್ಮಿಕೊಂಡಿದ್ದ ಸಂಸದರ ಆದರ್ಶ ಗ್ರಾಮದ ಗ್ರಾಮೋತ್ಸವ -2024 ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.

Ad Widget . Ad Widget .

ಕುಗ್ರಾಮದಲ್ಲೂ ಕಡುಬಡವರ ಅಭಿವೃದ್ಧಿಗಾಗಿ ಸಂಸದರ ಆದರ್ಶ ಗ್ರಾಮದ ಜೊತೆ ಹಲವು ಯೋಜನೆ ಗಳನ್ನು ಕೇಂದ್ರ ಸರಕಾರ ಜಾರಿ ಮಾಡಿದೆ. ವಿಕಸಿತ ಭಾರತ ನಮ್ಮ ಕನಸಲ್ಲ. ಅದು ನನಸಾಗುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ನಡೆಯುತ್ತಿದೆ. ಸಂಸದರ ಆದರ್ಶದ ಜೊತೆ, ಎಲ್ಲರಿಗೂ ಆರೋಗ್ಯ, ಎಲ್ಲರಿಗೂ ಶಿಕ್ಷಣ,ಎಲ್ಲರಿಗೂ ಸೂರು ಸೇರಿದಂತೆ ಎಲ್ಲರೂ ನೆಮ್ಮದಿಯಿಂದ ಬದುಕಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದು ಸಚಿವ ಭಗವಂತ ಖೂಬ ಸಂಸದ ನಳಿನ್ ಕುಮಾರ್ ರನ್ನು ಶ್ಲಾಘಿಸಿದರು.

Leave a Comment

Your email address will not be published. Required fields are marked *