ಸಮಗ್ರ ನ್ಯೂಸ್: ನಮ್ಮ ಮೆಟ್ರೋ ನೂತನ ನಿರ್ದೇಶಕರಾಗಿ ಮಹೇಶ್ವರ್ ರಾವ್ರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಇತ್ತೀಚಿಗೆ ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ಮಾಡಿ ಮೆಟ್ರೋಗೆ ಪೂರ್ಣಾವಧಿ ಎಂಡಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಅವರನ್ನು ಭೇಟಿ ಮಾಡಿದ್ದರು. ಇದೆಲ್ಲದರ ಬೆನ್ನಲ್ಲೇ ಇದೀಗ ಬಿಎಂಆರ್ಸಿಎಲ್ ನೂತನ ಎಂಡಿ ಆಗಿ ಮಹೇಶ್ವರ್ ರಾವ್ರನ್ನು ನೇಮಕ ಮಾಡಲಾಗಿದೆ.
ನಮ್ಮ ಮೆಟ್ರೋದ ಫೇಸ್-2 ಕಾಮಗಾರಿ ತುಂಬಾ ವಿಳಂಬ ಆಗುತ್ತಿದೆ. ಇದೆಕ್ಕೆಲ್ಲ BMRCLನಲ್ಲಿ ಪೂರ್ಣಾವಧಿ ಎಂಡಿ ಇಲ್ಲ ಎಂದು ಆರೋಪ ಕೇಳಿಬಂದಿತ್ತು. ರಾಜ್ಯ ಸರ್ಕಾರದಿಂದ ಸೂಕ್ತ ವ್ಯಕ್ತಿಯ ಶಿಫಾರಸು ಮಾಡುವಂತೆ ಸಂಸದ ತೇಜಸ್ವಿ ಸೂರ್ಯ ಕೇಳಿದ್ದರು. ಕೇಂದ್ರದಿಂದ ಅನುಮತಿ ಕೊಡಿಸೋದಾಗಿ ಕೂಡ ಹೇಳಿದ್ದರು. ಹೀಗಾಗಿ ಪೂರ್ಣಾವಧಿ ಮೆಟ್ರೋ ಎಂಡಿ ನೇಮಕಕ್ಕೆ ಆಗ್ರಹಿಸಿದ್ದರು. ಸದ್ಯ ಅಂಜುಂ ಫರ್ವೇಜ್ ಜಾಗಕ್ಕೆ ಮಹೇಶ್ವರ್ ರಾವ್ರನ್ನು ನೇಮಿಸಿ ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸಿದೆ.
‘ಕೊನೆಗೂ ನಮ್ಮ ಮೆಟ್ರೋಗೆ ಪೂರ್ಣ ಪ್ರಮಾಣದ ಎಂಡಿಯನ್ನು ಪಡೆಯಲಾಗಿದೆ. ನಗರದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತ್ವರಿತವಾಗಿ ನೇಮಕ ಮಾಡಿದಕ್ಕಾಗಿ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಅವರಿಗೆ ತೇಜಸ್ವಿ ಸೂರ್ಯ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.