Ad Widget .

ಜನವರಿ 16ರಂದು ಬೆಂಗಳೂರಿನಲ್ಲಿ ಲಾರಿ ಮುಷ್ಕರ|ಏನಿರುತ್ತೆ, ಏನಿರಲ್ಲ?

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ಹಿಟ್ ಐಂಡ್ ರನ್ ಕಾನೂನು ರೂಲ್ಸ್ ಜಾರಿಗೆ ಮುಂದಾಗಿದೆ. ಈಗ ಕೇಂದ್ರ ಸರ್ಕಾರ ವಿರುದ್ಧ ಸಿಡಿದೆದ್ದಿರೋ ಲಾರಿ ಓನರ್ಸ್ ಅಸೋಸಿಯೇಷನ್ ಕಾನೂನು ರದ್ದತಿಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಜ.16ರ ಮಧ್ಯರಾತ್ರಿಯಿಂದ ಬೆಂಗಳೂರಿನಲ್ಲಿ ಲಾರಿ ಮುಷ್ಕರ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಚನ್ನಾರೆಡ್ಡಿ ತಿಳಿಸಿದ್ದಾರೆ.

Ad Widget . Ad Widget .

ಕೇಂದ್ರದ ಹಿಟ್​​​ ಆ್ಯಂಡ್​​​ ರನ್​​​ ಕಾಯ್ದೆಯನ್ನ ನಾವು ಖಂಡಿಸ್ತಿದ್ದೇವೆ. ಈ ಕಾಯ್ದೆಯಿಂದ ಲಾರಿ ಮಾಲೀಕ, ಚಾಲಕರಿಗೆ ತೊಂದರೆ ಆಗುತ್ತೆ. ಕಾಯ್ದೆಯಡಿ ಲಕ್ಷ ಲಕ್ಷ ದಂಡ ಕಟ್ಟಲು ಚಾಲಕರಿಂದ ಅಸಾಧ್ಯ. ಮುಷ್ಕರದಿಂದ 6 ರಿಂದ 8 ಲಕ್ಷ ಲಾರಿ ಸಂಚಾರ ನಿಲ್ಲಲಿದೆ. ಅಗತ್ಯ ವಸ್ತು ಸಾಗಣೆ ಬಿಟ್ಟು ಎಲ್ಲಾ ಲಾರಿ ಸಂಚಾರ ಬಂದಾಗುತ್ತೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಚನ್ನಾರೆಡ್ಡಿ ಹೇಳಿದರು.

Ad Widget . Ad Widget .

ಹಿಟ್ ಅ್ಯಂಡ್ ರನ್ ಪ್ರಕರಣಗಳಿಗೆ ಭಾರತೀಯ ನ್ಯಾಯ ಸಂಹಿತೆಯಡಿ ರೂಲ್ಸ್‌ ಜಾರಿ. ಈ ಹಿಂದೆ ಐಪಿಸಿ ಸೆಕ್ಷನ್ ಅಡಿ ಯಾರಾದ್ರೂ ಸಾವನ್ನಪ್ಪಿದ್ರೆ 2 ವರ್ಷ ಜೈಲು ಶಿಕ್ಷೆ ಇತ್ತು. ಇದೀಗ ಹೊಸ ಕಾನೂನಿನಡಿ ತಪ್ಪಿತಸ್ಥ ಚಾಲಕರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಸೇರಿದಂತೆ 7 ಲಕ್ಷದವರೆಗೆ ದಂಡದ ಪ್ರಸ್ತಾಪ ನಡೆದಿದೆ. ಅಪಘಾತದ ಬಳಿಕ ಓಡಿ ಹೋಗದೇ ಘಟನಾ ಸ್ಥಳದಲ್ಲೇ ಇದ್ದರೂ ಕೂಡಾ 5 ವರ್ಷ ಜೈಲು ಶಿಕ್ಷೆ. ಇದ್ರಿಂದ ಲಾರಿ, ಟ್ರಕ್ ಚಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಲಾರಿ ಮಾಲೀಕರನ್ನಾಗಲೀ ಅಥವಾ ಈ ಉದ್ಯಮದಲ್ಲಿ ಇರುವ ಯಾರನ್ನೂ ಸಂಪರ್ಕಿಸದೇ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಅಂತಾ ಆಕ್ರೋಶ ಹೊರ ಹಾಕಿದ್ದಾರೆ.

ಬಂದ್ ದಿನ‌ ಸುಮಾರು 9 ರಿಂದ 10 ಲಕ್ಷ ವಾಹನ ಸಂಚಾರ ಬಂದ್ ಆಗಲಿದೆ. ಮರಳು , ಸಿಮೆಂಟ್ ಸಪ್ಲೈ, ಇಂಡಸ್ಟ್ರಿ ಮೆಟಿರಿಯಲ್ ಬಂದ್ ಆಗಲಿದೆ. ನೀರು, ಹಾಲು, ಪೆಟ್ರೋಲಿಯಂ, ತರಕಾರಿ ನೀರು ಮೆಡಿಸನ್ ಸರಬರಾಜು ಇರಲಿದೆ ಎಂಬ ಮಾಹಿತಿ ಲಭಿಸಿದೆ

Leave a Comment

Your email address will not be published. Required fields are marked *