Ad Widget .

ಕುಕ್ಕೆ ಸುಬ್ರಹ್ಮಣ್ಯ: ಜ.12ರಿಂದ ಕಿರುಷಷ್ಟಿ ಮಹೋತ್ಸವ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವ ಸ್ಥಾನ ದಲ್ಲಿ ಜ. 16ರ ವರೆಗೆ ಕಿರುಷಷ್ಠಿ ಮಹೋತ್ಸವ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಜ.12ರಂದು ಸಾಯಂಕಾಲ 5ಕ್ಕೆ ಶ್ರೀ ಕಾರ್ತಿಕ ವೇದಿಕೆಯಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಮ ಎಸ್‌. ಸುಳ್ಳಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

Ad Widget . Ad Widget .

ಜ. 16ರಂದು ಪೂರ್ವಾಹ್ನ ದೇವಾಲಯ ಆಡಳಿತ ದರ್ಮದರ್ಶಿಗಳ ಚಿಂತನ ಸಭೆ ಗುಡಿ-ಜನರ ಜೀವನಾಡಿ ಶ್ರೀ ಕಾರ್ತಿಕ ವೇದಿಕೆಯಲ್ಲಿ ನಡೆಯಲಿದೆ. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ದೇವಾಲಯ ಸಂವರ್ಧನ ಸಮಿತಿ ಸಂಯೋಜಕ ಮನೋಹರ ಮಠದ್‌ ಉಪನ್ಯಾಸ ನೀಡಲಿದ್ದಾರೆ.

Ad Widget . Ad Widget .

ಧಾರ್ಮಿಕ ಪರಿಷತ್‌ ಸದಸ್ಯೆ ಮಲ್ಲಿಕಾ ಪ್ರಶಾಂತ್‌ ಪಕ್ಕಳ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ ರಾಂ ಸುಳ್ಳಿ ಉಪಸ್ಥಿತರಿರುವರು. ಸಂಜೆ 6 ರಿಂದ ದೇವರ ರಥೋತ್ಸವ ನಡೆಯಲಿದೆ.

Leave a Comment

Your email address will not be published. Required fields are marked *