Ad Widget .

ಅಯೋಧ್ಯೆಯಲ್ಲಿ ಮೊಳಗಲಿದೆ “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ”

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಇದರ ನಡುವೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಗೀತೆ ರಚನೆಗಾರ ಡಾ.ಗಜಾನನ ಶರ್ಮಾ ರಚಿಸಿರುವ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಎಂಬ ಗೀತೆ ಜ.22 ರಂದು ರಾಮಮಂದಿರ ಪ್ರಾಣಪ್ರತಿಷ್ಠೆ ವೇಳೆ ಪ್ರಸಾರವಾಗಲಿದೆ ಎಂದು ಅಯೋಧ್ಯೆ ಟ್ರಸ್ಟ್ ಟ್ವಿಟ್ ಮಾಡುವ ಮೂಲಕ ಖಚಿತಪಡಿಸಿದೆ.

Ad Widget . Ad Widget .

ಈ ಕುರಿತು ಡಾ.ಗಜಾನನ ಶರ್ಮಾ ಸ್ಪಷ್ಟಪಡಿಸಿದ್ದು ನಾನು ರಚಿಸಿದ ಹಾಡನ್ನು ರಾಮಮಂದಿರ ಟ್ರಸ್ಟ್‍ನವರು ತೆಗೆದುಕೊಂಡಿದ್ದಕ್ಕೆ ಖುಷಿಯಾಗಿದೆ ಎಂದರು.
ಡಾ.ಗಜಾನನ ಶರ್ಮಾರವರಿಗೆ ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ರಾಮಕಥೆಗಾಗಿ ಚಾತುರ್ಮಾಸದ ವೇಳೆ ಉತ್ತಮ ಗೀತ ರಚನೆ ಮಾಡಿಕೊಡುವಂತೆ ಹೇಳಿದ್ದರು. ಆದರೆ ಶರ್ಮರವರ ಕಾರ್ಯ ಒತ್ತಡದಿಂದ ರಚನೆ ಮಾಡಲಾಗಿರಲಿಲ್ಲ.

Ad Widget . Ad Widget .

ಒಮ್ಮೆ ಕೇರಳಕ್ಕೆ ಹೋದಾಗ ತಂಪು ಪಾನಿಯದ ಜಾಹಿರಾತಿನಲ್ಲಿ ದಿಲ್ ಮಾಂಗೆ ಮೋರ್ ಎಂದು ಬರೆದಿದ್ದನ್ನು ಓದಿದ ಇವರಿಗೆ ಈ ಟೈಟಲ್ ರಾಮನ ಕುರಿತು ಯಾಕಾಗಬಾರದು ಎಂದು ಅವರು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಎಂದು ಗೀತೆ ರಚಿಸಿದರು. ಈ ರಚನೆಯನ್ನು ಶ್ರೀಗಳಿಗೆ ತೋರಿಸಿದಾಗ ಅದನ್ನು ಮುಂದುವರೆಸಲು ಹೇಳಿದರು. ಹೀಗೆ ಈ ಗೀತೆ ರಚನೆಯಾಯ್ತು ಎಂದು ಅದರ ಮೂಲವನ್ನು ಶರ್ಮಾರವರು ತಿಳಿಸಿದ್ದಾರೆ.
ಡಾ.ಗಜಾನನ ಶರ್ಮಾರವರು ರಾಮಕಥೆ ಮೂಲಕವೇ ಇಡೀ ದೇಶಕ್ಕೆ ಪರಿಚಿತರಾಗಿದ್ದಾರೆ. ಇವರು ರಚಿಸಿದ ಗೀತೆಗಳು ಎಂಥವರನ್ನೂ ಮಂತ್ರ ಮುಗ್ಧಗೊಳಿಸುತ್ತದೆ. ಇದೀಗ ರಾಮನ ಸನ್ನಿಧಿಯಲ್ಲೇ ಅದರಲ್ಲೂ ಕನ್ನಡ ಭಾಷೆಯಲ್ಲಿ ಈ ಗೀತೆ ಪ್ರಸ್ತುತ ಪಡಿಸುತ್ತಿರುವುದು ಕನ್ನಡಿಗರ ಹೆಮ್ಮೆ ಎನಿಸಿದೆ.

Leave a Comment

Your email address will not be published. Required fields are marked *