Ad Widget .

ವಿಧಾನಸೌಧ ಮುಂಭಾಗದಲ್ಲೇ ಸೀಮೆಎಣ್ಣೆ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನ..!

ಸಮಗ್ರ ನ್ಯೂಸ್: ಸಾಲ ಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್​ನವರು ಜಮೀನು ಹರಾಜು ಹಾಕಿದ್ದರು. ಇದರಿಂದ ಮನನೊಂದು ಶಾಯಿಸ್ತಾ ದಂಪತಿ ವಿಧಾನಸೌಧ ಮುಂಭಾಗದಲ್ಲೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಕೂಡಲೆ ದಂಪತಿಯನ್ನು ತಡೆದಿದ್ದಾರೆ.

Ad Widget . Ad Widget .

ಬೆಂಗಳೂರು ಕೋ ಆಪರೇಟೀವ್ ಬ್ಯಾಂಕ್‌ನಿಂದ 50 ಲಕ್ಷ ಸಾಲ ಪಡೆದುಕೊಂಡಿದ್ದೆ. ಇದೀಗ ಸಾಲಕ್ಕೆ ₹1.20 ಕೋಟಿಯ ಮನೆ ಸೀಜ್ ಮಾಡಿದ್ದಾರೆ. ಬ್ಯಾಂಕ್ ನಿಂದ ನಮಗೆ ಅನ್ಯಾಯವಾಗಿದೆ ಎಂದು ಮೊಹಮದ್ ಮುನಾಯಿದ್ ಉಲ್ಲಾ ಆರೋಪಿಸಿದ್ದಾರೆ.
ಸಚಿವ ಜಮೀರ್ ಅಹ್ಮದ್ ಖಾನ್ ಸಹಾಯ ಮಾಡ್ತೀನಿ ಅಂತ ಹೇಳಿ ಸುಮ್ಮನಾದ್ರು. ಯಾರೂ ನಮಗೆ ಸಹಾಯ ಮಾಡಿಲ್ಲ ಎಂದು ಶಾಯಿಸ್ತಾ ಬಾನು ಕಣ್ಣೀರು ಹಾಕಿದ್ದಾರೆ.

Ad Widget . Ad Widget .

ಆತ್ಮಹತ್ಯೆಗೆ ಯತ್ನಿಸಿದ್ದ ದಂಪತಿ ಶಾಯಿಸ್ತಾ ಬಾನು, ಮೊಹಮ್ಮದ್ ಮುನಾಯಿದ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಐಪಿಸಿ ಸೆಕ್ಷನ್ 309, 290ರ ಅಡಿಯಲ್ಲಿ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಿದ್ದಾರೆ.

ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ನಾನು ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ. ಈ ವಿಷಯವೇ ನನಗೆ ಗೊತ್ತಿಲ್ಲ ಎಂದು ಹೇಳಿದರು.

Leave a Comment

Your email address will not be published. Required fields are marked *