ಎದೆಹಾಲು ಗಂಟಲಲ್ಲಿ ಸಿಲುಕಿ ಹಸುಳೆ ಸಾವು

ಸಮಗ್ರ ನ್ಯೂಸ್: ತಾಯಿಯ ಎದೆ ಹಾಲು ಗಂಟಲಲ್ಲಿ ಸಿಲುಕಿ ಮಗು ಮೃತಪಟ್ಟ ಘಟನೆ ಮಂಗಳವಾರ ಕಾಸರಗೋಡಿನ ಕುಂಬಳೆ ಸಮೀಪದ ಬಂಬ್ರಾಣದಲ್ಲಿ ನಡೆದಿದೆ.

Ad Widget ... ..

ಸ್ಥಳೀಯ ನಿವಾಸಿ ಅಬ್ದುಲ್ ಅಝೀಝ್-ಖದೀಜಾ ದಂಪತಿ ಪುತ್ರಿ, ಎರಡೂವರೆ ತಿಂಗಳ ಹಸುಳೆ ಮೃತಪಟ್ಟಿದೆ. ಮಲಗಿಕೊಂಡು ಎದೆಹಾಲು ಕುಡಿಯುತ್ತಿದ್ದ ಮಗು ಎಷ್ಟು ಹೊತ್ತಾದರೂ ಎಚ್ಚರಗೊಳ್ಳದೆ ಇದ್ದಾಗ ಕುಂಬಳೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅದಾಗಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Leave a Comment

Your email address will not be published. Required fields are marked *