ಸಮಗ್ರ ನ್ಯೂಸ್: ಪ್ರೀತಿ ಅನ್ನೋದೆ ಹಾಗೇ ಏನಾದ್ರು ಒಂದು ಪಜೀತಿಗೆ ಎಡೆಮಾಡಿಕೊಡುತ್ತೆ. ಪ್ರೀತಿ ಮಾಡುವಾಗ ಇಲ್ಲದ ಜಾತಿ ಮದುವೆ ವಿಷಯ ಪ್ರಸ್ತಾಪಕ್ಕೆ ಮಾತ್ರ ಎದ್ದು ನಿಲ್ಲುತ್ತದೆ.
ಇಲ್ಲೂ ಅದೇ ಘಟನೆ ನೋಡಿ ಆಕೆ ಅಜ್ಜಿ ಮನೆಯಲ್ಲಿದ್ದುಕೊಂಡು ಓದುತ್ತಿದ್ದಳು ಆ ಸಂದರ್ಭದಲ್ಲಿ ಅದೇ ಊರಿನ ಒಬ್ಬಾತನ ಜೊತೆಗೆ ಸ್ನೇಹ ಬೆಳೆದಿತ್ತು. ಆರಂಭದಲ್ಲಿ ಎಲ್ಲರಂತೆ ಇವರದ್ದೂ ಕೇವಲ ಸ್ನೇಹವಾಗಿಯೇ ಇತ್ತು. ದಿನಗಳು ಕಳೆದಂತೆ ಅವರಿಬ್ಬರ ನಡುವೆ ಹೆಚ್ಚು ಹೆಚ್ಚು ಆತ್ಮೀಯತೆ ಬೆಳೆಯಲಾರಂಭಿಸಿತ್ತು. ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನ ಬಳಸಿಕೊಂಡಾತ ಜಾತಿ ಕಾರಣ ನೀಡಿ ಮದುವೆಯಾಗಲು ಈಗ ಹಿಂದೇಟು ಹಾಕಿದ್ದಾನೆ. ತನಗೆ ನ್ಯಾಯಬೇಕೆಂದು ಹಠ ಹಿಡಿದ ಆಕೆ ಪ್ರಿಯಕರನ ಮನೆ ಮುಂದೆ ಕುಳಿತು, ನ್ಯಾಯಬೇಕು ಎನ್ನುತ್ತಿದ್ದಾಳೆ.
ಎಂಟು ವರ್ಷಗಳ ಕಾಲ ಪ್ರೀತಿಸಿ, ದೈಹಿಕವಾಗಿ ಬಳಸಿಕೊಂಡು ಮದುವೆಯಾಗುವುದಾಗಿ ನಂಬಿಕೆ, ಯುವಕನೊಬ್ಬ ಮೋಸ ಮಾಡಿದ್ದಾನೆ ಎಂದು ಯುವತಿಯೊಬ್ಬಳು ಪ್ರಿಯಕರನ ಮನೆಯ ಮುಂದೆ ನ್ಯಾಯಕ್ಕಾಗಿ ಧರಣಿ ಕುಳಿತ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಳ್ಳಗೆರೆ ಗ್ರಾಮದಲ್ಲಿ ನಡೆದಿದೆ. ತನ್ನನ್ನ ಮದುವೆಯಾಗುವುದಾಗಿ ನಂಬಿಸಿ ಬಳಸಿಕೊಂಡು ಮದುವೆಯಾಗಲು ನಿರಾಕಿಸಿದ್ದಾನೆ ಎಂದು ಆರೋಪಿಸಿ ಮಂಜು ಎಂಬಾತನ ಮನೆ ಮುಂದೆ ರಮ್ಯಶ್ರೀ ಎಂಬಾಕೆ ಪ್ರತಿಭಟನೆಗೆ ಕುಳಿತಿದ್ದಾಳೆ. ಅಲ್ಲದೆ ಈಕೆ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಳೆ.
ಮಂಜು ಮನೆಯವರೆಲ್ಲರೂ ಮಲಗಿದ್ದ ಸಂದರ್ಭದಲ್ಲಿ ಮಧ್ಯರಾತ್ರಿ ಸುಮಾರಿಗೆ ಆತನ ಮನೆ ಬಳಿಗೆ ಬಂದ ಈಕೆ ತನಗೆ ನ್ಯಾಯ ಬೇಕೇ ಬೇಕು ಎಂದೆಲ್ಲಾ ಹೇಳಿ ಒಂದು ರಾತ್ರಿ ಪೂರ್ತಿ ಮನೆಯ ಮುಂದೆ ಒಬ್ಬಳೇ ಕುಳಿತಿದ್ದಾಳೆ. ಬೆಳಗಾಗುತ್ತಲೇ ಆಕೆಯ ಮೇಲೆ ಮಂಜು ಮನೆಯವರು ಹಲ್ಲೆ ನಡೆಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ರಮ್ಯ ಶ್ರೀ ಹಾಗೂ ಮಂಜು ಮನೆಯವರ ನಡುವೆ ದೊಡ್ಡ ವಾಗ್ಯುದ್ಧವೇ ನಡೆದಿದ್ದು ಗಲಾಟೆಯಲ್ಲಿ ಗಾಯಗೊಂಡಿರೊ ರಮ್ಯ ಶ್ರೀ ಸದ್ಯ ಮಂಡ್ಯ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಲ್ಲದೆ ಪೊಲೀಸ್ ಠಾಣೆಗೂ ದೂರು ನೀಡಲು ಮುಂದಾಗಿದ್ದಾಳೆ.
ಪ್ರೀತಿಯ ಸಂದರ್ಭದಲ್ಲಿ ಇಲ್ಲದ ಜಾತಿ ಮದುವೆಗೆ ಅಡ್ಡಿಯಾಗಿತ್ತು. ರಮ್ಯಶ್ರೀ ಮದುವೆಯಾಗುವಂತೆ ಒತ್ತಾಯ ಮಾಡಿದಾಗಲೆಲ್ಲಾ ನೆಪ ಹೇಳುತ್ತಿದ್ದ. ನಂತರ ಬೆಂಗಳೂರಿನ ಖಾಸಗಿ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಇರಲಾರಂಭಿಸಿದ್ದ. ಆದ್ರೆ ಮಂಜು ಮೇಲಿನ ಪ್ರೀತಿಯಿಂದ ರಮ್ಯಶ್ರೀ ಬೆಂಗಳೂರಿಗೂ ತೆರಳಿದ್ದಳು. ಆದರೆ ಮಂಜು ಮಾತ್ರ ಮದುವೆಗೆ ಒಪ್ಪಲೇ ಇಲ್ಲ. ಜೊತೆಗೆ ರಮ್ಯಶ್ರೀ ಕೈಗೆ ಸಿಗದೇ ಆಟ ಆಡಿಸಲು ಶುರು ಮಾಡಿದ್ದ. ಕಡೆಗೆ ಮಂಜು ಬಳ್ಳಗೆರೆಯ ಊರಿನಲ್ಲೇ ಇದ್ದಾನೆ ಎಂದು ತಿಳಿದು ಆತನ ಮನೆಗೆ ಹೋಗಿ ಪ್ರತಿಭಟನೆಗೆ ಕುಳಿತ ರಮ್ಯಾಶ್ರೀ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ಬಲವಂತವಾಗಿ ಕಳುಹಿಸಿದ್ದಾರೆ. ಮಂಜುವಿನಿಂದ ಅನ್ಯಾಯಕ್ಕೊಳಗಾಗಿರೊ ನನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಿ ಎನ್ನುತ್ತಿದ್ದಾರೆ ರಮ್ಯಶ್ರೀ ಹೆತ್ತವರು. ಇನ್ನು ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.