Ad Widget .

ಮಗುವನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿದ ತಾಯಿ…

ಸಮಗ್ರ ನ್ಯೂಸ್: ಸ್ಟಾರ್ಟ್ ಅಪ್ ಕಂಪನಿಯ ಸಿಇಓ ಆಗಿರುವ ಸುಚನಾ ಸೇಠ್ ತನ್ನ ನಾಲ್ಕು ವರ್ಷದ ಮಗುವನ್ನೇ ಕೊಲೆ ಮಾಡಿದ್ದ ಪ್ರಕರಣ ನಡೆದಿದೆ.

Ad Widget . Ad Widget .

ಸ್ಟಾರ್ಟ್ ಅಪ್ ಫೌಂಡರ್ & ಸಿಇಓ ಸುಚನಾ ಅವರು ಗೋವಾದ ಹೋಟೆಲ್​ನಲ್ಲಿ ಉಳಿದುಕೊಂಡಿದ್ದರು. ಇನ್ನೇನು ಹೋಟೆಲ್​ನಿಂದ ಬೆಂಗಳೂರಿಗೆ ಹೋಗಲು ತಮ್ಮ ಸೂಟ್ ಕೇಸ್ ಹಿಡಿದು ಟ್ಯಾಕ್ಸಿಯತ್ತ ಹೊರಟಾಗ ಹೋಟೆಲ್ ಸಿಬ್ಬಂದಿ ನಿಮ್ಮ ಜೊತೆ ಬಂದಿದ್ದ ಮಗು ಎಲ್ಲಿ ಎಂದು ವಿಚಾರಿಸಿದ್ದಾರೆ. ಆಗ ಸುಚನಾ ಅವರು ಸಂಬಂಧಿಕರ ಮನೆಗೆ ಕಳಿಸಿದ್ದೇನೆಂದು ಸುಳ್ಳು ಹೇಳಿ ಟ್ಯಾಕ್ಸಿ ಮೂಲಕ ಬೆಂಗಳೂರಿನತ್ತ ತೆರಳಿದ್ದಾರೆ. ಈ ವೇಳೆ ಅನುಮಾನಗೊಂಡ ಹೋಟೆಲ್​ನವರು ರೂಮ್ ಸ್ವಚ್ಛಗೊಳಿಸಲು ಹೋಗಿದ್ದು ಅಲ್ಲಿ ರಕ್ತದ ಕಲೆಗಳು ಪತ್ತೆ ಆಗಿವೆ. ಇದರಿಂದ ಬೆಚ್ಚಿಬಿದ್ದ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Ad Widget . Ad Widget .

ಇನ್ನು ಹೋಟೆಲ್ ಸಿಬ್ಬಂದಿ ಗೋವಾ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಪೊಲೀಸರು ನಂಬರ್ ಹುಡುಕಿ ಸುಚನಾ ಪ್ರಯಾಣಿಸುತ್ತಿದ್ದ ಟ್ಯಾಕ್ಸಿ ಡ್ರೈವರ್​ಗೆ ಕರೆ ಮಾಡಿದ್ದಾರೆ. ಹೈವೇ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಪೊಲೀಸರ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ 4ರ ಐಮಂಗಲ ಠಾಣೆ ಬಳಿ ಚಾಲಕ ಟ್ಯಾಕ್ಸಿ ನಿಲ್ಲಿಸಿದ್ದು ಐಮಂಗಲ ಪೊಲೀಸರಿಗೆ ಆರೋಪಿ ಸುಚನಾಳನ್ನು ಒಪ್ಪಿಸಿದ್ದಾರೆ. ಕಾರ್​ನ ಡಿಕ್ಕಿಯಲ್ಲಿದ್ದ ಸೂಟ್ ಕೇಸ್ ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಮಗುವಿನ ಶವವನ್ನು ಶವಾಗಾರಕ್ಕೆ ಶಿಫ್ಟ್ ಮಾಡಿ ಆರೋಪಿ ಸುಚನಾಳನ್ನ ವಶಕ್ಕೆ ಪಡೆಯಲಾಗಿದೆ

ಸುಚನಾ 2010ರಲ್ಲಿ ವಿವಾಹವಾಗಿದ್ದಾರೆ. 2019 ರಲ್ಲಿ ದಂಪತಿಗೆ ಮಗು ಜನಸಿದೆ. ಆದರೆ 2020ರಲ್ಲಿ ದಂಪತಿ ವಿಚ್ಛೇದನಕ್ಕೆ ಅರ್ಜಿಸಲ್ಲಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಿಚ್ಛೇದನ ನೀಡಿದೆ. ಆದರೆ ಪ್ರತಿಭಾನುವಾರದಂದು ತನ್ನ ಮಗುವನ್ನು ಭೇಟಿಯಾಗಲು ತಂದೆಗೆ ನ್ಯಾಯಾಲಯ ಅನುಮತಿ ನೀಡಿದೆ. ಸುಚನಾ ಪತಿಯು ಮಗನನ್ನು ಭೇಟಿಯಾದರೆ, ಅವರು ಮಗುವನ್ನು ತಮ್ಮ ಬಳಿಯೇ ಇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಸುಚನಾ ನಾಲ್ಕು ವರ್ಷದ ಮಗುವನ್ನು ಕೊಲೆಮಾಡಿದ್ದಾರೆ.

Leave a Comment

Your email address will not be published. Required fields are marked *