Ad Widget .

ಬಿಳಿನೆಲೆ: ಅಂಗಡಿ, ಟಾಟಾ ಸುಮೋ ಮೇಲೆ ಉರುಳಿದ ಬೃಹದಾಕಾರದ ಮರ| ಮರ ಕಡಿಯದಂತೆ ಗ್ರಾಮಸ್ಥರಿಂದ ಪ್ರತಿಭಟನೆ| ಅಧಿಕಾರಿಗಳಿಂದ ಪರಿಹಾರ ದೊರಕಿಸಲು ಮನವಿ

ಸಮಗ್ರ ನ್ಯೂಸ್: ಬಿಳಿನೆಲೆ ಕೈಕಂಬದಲ್ಲಿ ಚಲಿಸುತ್ತಿದ್ದ ಟಾಟಾ ಸುಮೋ ಮೇಲೆ ಬಿದ್ದ ಬೃಹದಾಕಾರದ ಮರವನ್ನು ಕಡಿಯದಂತೆ ಗ್ರಾಮಸ್ಥರು ಜ. 8ರಂದು ಪ್ರತಿಭಟನೆ ನಡೆಸಿದರು.

Ad Widget . Ad Widget .

ಪರಿಹಾರದ ಭರವಸೆ ನೀಡುವ ತನಕ ಕಡಿಯದಂತೆ ತಡೆದು, ಅಧಿಕಾರಿಗಳೊಂದಿಗೆ ಪರಿಹಾರದ ಭರವಸೆಯನ್ನು ತೆಗೆದುಕೊಂಡರು. ಮತ್ತು ಸ್ಥಳ ಮಹಜರಿಗೆ ಒತ್ತಾಯಿಸಿ ಮೇಲಾಧಿಕರಿಗಳಿಂದ ಆದಷ್ಟು ಬೇಗ ಪರಹಾರ ದೊರಕಿಸಿಕೊಡುವಂತೆ ಮನವಿ ಮಾಡಿಕೊಂಡರು.

Ad Widget . Ad Widget .

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಶಾರದ ದಿನೇಶ್ ಬಿಳಿನೆಲೆ, ಉಪಾಧ್ಯಕ್ಷ ಶಿವಶಂಕರ್ ಬಿಳಿನೆಲೆ, ಪಂಚಾಯತ್ ಸದಸ್ಯೆ ಭವ್ಯಶ್ರೀ ಕುಕ್ಕಾಜೆ, ಕಂದಾಯ ಇಲಾಖೆಯ ತಹಶೀಲ್ದಾರ್, ಉಪತಹಶೀಲ್ದಾರ್, ಮೆಸ್ಕಾಂ ಹಾಗೂ ಅರಣ್ಯ ಇಲಾಖಾಧಿಕಾರಿಗಳು, ಪಿಡಿಒ,ಹಾಗೂ ಪ್ರತಿಭಟನೆಯ ಪ್ರಮುಖರಾದ ಪ್ರದೀಪ್ ಕಳಿಗೆ ಮತ್ತು ವಾಡ್ಯಪ್ಪ ಎರ್ಮಾಯಿಲ್ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *