ಸಮಗ್ರ ನ್ಯೂಸ್: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಕಾಟ ಕೊಟ್ಟ ಘಟನೆ ರಾಯಚೂರಿನ ಮಾನ್ವಿ ಠಾಣೆಯಲ್ಲಿ ನಡೆದಿದೆ.
ಮದ್ಯದ ಅಮಲಿನಲ್ಲಿ ಬಟ್ಟೆ ಬಿಚ್ಚಿಕೊಂಡು ಓಡಾಡುತ್ತಿದ್ದ ವ್ಯಕ್ತಿ ನೇರವಾಗಿ ಮಾನ್ವಿ ಪೊಲೀಸ್ ಠಾಣೆಗೆ ಬಂದು ನೀಡಿದ ಕಾಟಕ್ಕೆ ಪೊಲೀಸರೇ ಸುಸ್ತಾಗಿದ್ದರು. ಏಕಾಏಕಿ ಠಾಣೆಗೆ ಎಂಟ್ರಿ ಕೊಟ್ಟಿದ್ದ ನರಸಿಂಹ, ನನಗೆ ಹೆಂಡ್ತಿ ಬೇಕು, ಇಲ್ಲದಿದ್ದರೆ ಠಾಣೆ ಬಿಟ್ಟು ಹೋಗಲ್ಲ ಅಂತ ಪಟ್ಟು ಹಿಡಿದಿದ್ದಾನೆ. ಅರೆಬರೆ ಬಟ್ಟೆ ಹಾಕಿಕೊಂಡು ತೇಲಾಡುತ್ತಿದ್ದಿದ್ದನ್ನ ನೋಡಿ ಈತ ಪಕ್ಕಾ ಕುಡುಕ ಅನ್ನೋದು ಪೊಲೀಸರಿಗೆ ಗೊತ್ತಾಗಿದೆ. ಹೀಗಾಗಿ ಆತನಿಗೆ ತಿಳಿ ಹೇಳುವ ಪ್ರಯತ್ನ ಮಾಡಿದರೂ ಕೇಳಲಿಲ್ಲ. ಮದ್ಯದಮಲು ನೆತ್ತಿಗೇರಿತ್ತು. ಪೊಲೀಸರ ಮಾತು ಕೇಳದೇ ಇಂಗ್ಲಿಷ್ನಲ್ಲಿ ಲೈಫ್ ಲಾಂಗ್ ಅಂತೆಲ್ಲಾ ಇಂಗ್ಲಿಷ್ನಲ್ಲಿ ಡೈಲಾಗ್ ಹೊಡೆದಿದ್ದಾನೆ. ಬಳಿಕ ನಾನು ಸಾಯೋ ವರೆಗೂ ಜಾಗ ಬಿಟ್ಟು ಕದಲಲ್ಲ ಅಂತ ಪಟ್ಟು ಹಿಡಿದಿದ್ದಾನೆ. ಅಲ್ಲಿದ್ದ ಕೆಲ ಸಾರ್ವಜನಿಕರು ಕೂಡ ಆತನನ್ನ ಮಾತನಾಡಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಬಳಿಕ ಆತನ ಊರು ಯಾವುದು ಅಂತ ವಿಚಾರಿಸಿದಾಗ ಎಲ್ಲ ಮಾಹಿತಿ ಬೆಳಕಿಗೆ ಬಂದಿದೆ.
ಈ ವ್ಯಕ್ತಿ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ರಾಜೋಳ್ಳಿ ಅನ್ನೋ ಗ್ರಾಮದ ನರಸಿಂಹ, ಈತ ಬಂದಿದ್ಯಾಕೆ ಅನ್ನೋದನ್ನ ತೆಲುಗಿನಲ್ಲೇ ಹೇಳುತ್ತಿದ್ದ. ರಾಜೋಳ್ಳಿ ಗ್ರಾಮ ಆಂದ್ರದ ಗಡಿಯಲ್ಲಿರುವುದರಿಂದ ಈ ಭಾಗದ ಜನ ಸ್ವಲ್ಪ ಹೆಚ್ಚಾಗಿ ತೆಲುಗು ಭಾಷೆ ಹೆಚ್ಚಾಗಿ ಮಾತನಾಡುತ್ತಾರೆ. ಅದೇ ರೀತಿ ಈ ನರಸಿಂಹ ಕೂಡ ತೆಲುಗು ಮಾತನಾಡುತ್ತಿದ್ದ ಈತ ತನಗೆ ಇಬ್ಬರು ಹೆಂಡತಿಯರಿದ್ದಾರೆ. ಅವರು ಬಿಟ್ಟು ಹೋಗಿದ್ದಾರೆ. ನನಗೆ ನನ್ನ ಹೆಂಡತಿಯರು ಬೇಕು. ನನ್ನ ಹೆಂಡ್ತಿರನ್ನ ನನ್ನ ಜೊತೆ ಕಳಿಸಿಕೊಡಿ ಅಂತ ಪಟ್ಟು ಹಿಡಿದಿದ್ದಾನೆ. ಒಂದು ವೇಳೆ ನನ್ನ ಹೆಂಡ್ತಿರು ನನ್ನ ಜೊತೆ ಬಾರದೇ ಇದ್ದರೆ ನಾನೂ ಇಲ್ಲೇ ಕುಳಿತುಕೊಳ್ಳುತ್ತೇನೆ ಅಂತ ತೆಲುಗಿನಲ್ಲಿ ಹೇಳಿದ್ದಾನೆ.
ಇಷ್ಟೆಲ್ಲಾ ಆದ ಬಳಿಕ ಮತ್ತೆ ಆತ ಲುಂಗಿ ಬಿಚ್ಚುತ್ತಾ ನ್ಯುಸೆನ್ಸ್ ಕ್ರಿಯೆಟ್ ಮಾಡತೊಡಗಿದ್ದ. ಕೊನೆಗೆ ಪೊಲೀಸರು ಎಚ್ಚರಿಕೆ ನೀಡಿ ಠಾಣೆಯಿಂದ ಹೊರ ಕಳುಹಿಸಿದ್ದಾರೆ. ಆದರೂ ಇತ ಹೇಳಿರೊದ್ರ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.