Ad Widget .

ಅವಧಿ ಮೀರಿ ಪಬ್ ನಲ್ಲಿ ಸೆಲೆಬ್ರಿಟಿಗಳ ಪಾರ್ಟಿ… ನಟ ದರ್ಶನ್ ಸೇರಿ 8 ಮಂದಿಗೆ ನೋಟಿಸ್

ಸಮಗ್ರ ನ್ಯೂಸ್: ಅವಧಿ ಮೀರಿ ಪಬ್ ನಲ್ಲಿ ಸೆಲೆಬ್ರಿಟಿಗಳ ಪಾರ್ಟಿ ವಿಚಾರ ಇತ್ತೀಚೆಗೆ ಸುದ್ದಿಯಾಗಿತ್ತು. ಜೆಟ್​ ​ಲ್ಯಾಗ್ ಪಬ್​ನಲ್ಲಿ ದರ್ಶನ್, ಅಭಿಷೇಕ್ ಅಂಬರೀಷ್ ಸೇರಿ ಅನೇಕ ಸೆಲೆಬ್ರೆಟಿಗಳು ಮಧ್ಯ ರಾತ್ರಿ 3 ಗಂಟೆವರೆಗೂ ಪಾರ್ಟಿ ಮಾಡಿದ್ದರು. ಈ ಪ್ರಕರಣದಲ್ಲಿ ಪಬ್ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪಾರ್ಟಿಯಲ್ಲಿ ಭಾಗಿ ಆದ ನಟ ದರ್ಶನ್, ಅಭಿಷೇಕ್, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​ ಸೇರಿ 8 ಮಂದಿಗೆ ಸುಬ್ರಹ್ಮಣ್ಯನಗರ ಇನ್ಸ್​ಪೆಕ್ಟರ್​ ಸುರೇಶ್ ಅವರು ನೋಟಿಸ್ ನೀಡಿ ಹೇಳಿಕೆ ದಾಖಲಿಸಲಾಗಿದೆ.

Ad Widget . Ad Widget .

‘ಕಾಟೇರ’ ಸಿನಿಮಾ ರಿಲೀಸ್ ಆಗಿ ಅದರ‌ ಸಕ್ಸಸ್ ಸೆಲೆಬ್ರೇಷನ್ ಬಳಿಕ ದರ್ಶನ್, ಅಭಿಷೇಕ್ ಅಂಬರೀಷ್, ಧನಂಜಯ್ ಸೇರಿ ಅನೇಕರು ಬೆಂಗಳೂರಿನ ಒರಾಯನ್‌ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ಪಬ್​​ನಲ್ಲಿ ರಾತ್ರಿ‌ 3 ಗಂಟೆವರೆಗೆ ಪಾರ್ಟಿ ಮಾಡಿದ್ದಾರೆ. ನಿಯಮದ ಪ್ರಕಾರ ತಡರಾತ್ರಿ 1 ಗಂಟೆವರೆಗೆ ಮಾತ್ರ ಪಬ್ ಓಪನ್ ಇಡಲು ಅವಕಾಶ ಇದೆ. ಆದರೆ, ನಿಯಮವನ್ನು ಇಲ್ಲಿ ಮೀರಲಾಗಿದೆ.

Ad Widget . Ad Widget .

ಈಗಾಗಲೇ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ಅಭಿಷೇಕ್ ಅಂಬರೀಷ್​ಗೆ ನೋಟಿಸ್ ತಲುಪಿದೆ. ಪಾರ್ಟಿಯಲ್ಲಿ ಭಾಗಿ ಆಗಿದ್ದ ನಟ ಡಾಲಿ ಧನುಂಜಯ್, ನಟ ಚಿಕ್ಕಣ್ಣ, ನಿನಾಸಂ ಸತೀಶ್, ಡೈರಕ್ಟರ್ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ.
ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿತ್ತು ಆದರೆ ಮಧ್ಯಾಹ್ನವಾದರು ನಟರು ಹಾಜರಾಗಿಲ್ಲ. CRPC 160 ಅಡಿಯಲ್ಲಿ ಪೊಲೀಸರು ನೋಟಿಸ್ ಜಾರಿ ಮಾಡಲಾಗಿದೆ.
ಸದ್ಯ ಚಿತ್ರತಂಡ ವಿದೇಶದಲ್ಲಿದೆ ಎಂಬ ಮಾಹಿತಿಯು ಇದೆ.

Leave a Comment

Your email address will not be published. Required fields are marked *