Ad Widget .

ಬದುಕಿರುವ ವ್ಯಕ್ತಿಗೆ ಡೆತ್ ಸರ್ಟಿಫಿಕೇಟ್ ವಿರಾಜಪೇಟೆ ಪುರಸಭೆಯಲ್ಲಿ ಅವಾಂತರ ಶಂಕೆ..!! ಕ್ರಮಕ್ಕೆ ಜೆಡಿಎಸ್ ಒತ್ತಾಯ

ಸಮಗ್ರ ನ್ಯೂಸ್: ವಿರಾಜಪೇಟೆ ಪುರಸಭೆಯ ಕಚೇರಿಯಲ್ಲಿ ವ್ಯಕ್ತಿಗಳು ಬದುಕಿದ್ದರು ಮರಣ ದೃಢೀಕರಣ ಪತ್ರ ನೀಡಿರೋ ಬಗೆ ಶಂಖೆ ಇದ್ದು ಕೂಡಲೇ ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕೆಂದು ಜೆ.ಡಿ ಎಸ್.ನ ವಿರಾಜಪೇಟೆ ತಾಲೂಕು ಅಧ್ಯಕ್ಷ ಮಂಜುನಾಥ್ ಪಿ. ಎ ಅವರು ಆಗ್ರಹಿಸಿದ್ದಾರೆ.

Ad Widget . Ad Widget .

ವಿರಾಜಪೇಟೆ ಪುರಸಭೆಯಲ್ಲಿ ಹಲವಾರು ವರ್ಷಗಳಿಂದ ಈ ರೀತಿಯ ದಂಧೆ ನಡೆಯುತ್ತಿರುವ ಶಂಖೆ ಇದೆ. ಕಳೆದ ಒಂದು ತಿಂಗಳಿನಿಂದ ಇದುವರೆಗಿನ ದಾಖಲಾತಿಗಳನ್ನು ಪರಿಶೀಲನೆ ಮಾಡಿದರೆ ಪ್ರಕರಣ ಬಯಲಾಗಬಹುದಾಗಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ವಿರಾಜಪೇಟೆ ಶಾಸಕರು ಅಧಿಕಾರಿಗಳನ್ನು ತನಿಖೆಗೊಳಪಡಿಸಬೇಕು. ಕಚೇರಿಯ ದಾಖಲಾತಿಗಳನ್ನು ಪರಿಶೀಲನೆ ಮಾಡಬೇಕು ಯಾರೇ ಶಾಮೀಲಾಗಿದ್ದರು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಪುರಸಭೆಯ ಮಹಿಳಾ ಸದಸ್ಯರೊಬ್ಬರ ಪ್ರಭಾವದಿಂದ ಬದುಕಿರುವ ವ್ಯಕ್ತಿಗೆ ಮರಣ ದೃಢೀಕರಣ ಪತ್ರ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

Ad Widget . Ad Widget .

Leave a Comment

Your email address will not be published. Required fields are marked *