Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ದ್ವಾದಶ ರಾಶಿಗಳ ಈ ವಾರದ ಫಲಾಫಲಗಳೇನು? ಯಾವ ರಾಶಿಗೆ ಏನು ಲಾಭ? ಯಾರಿಗೆ ಶುಭ ಫಲ? ಇಲ್ಲಿದೆ ನೋಡಿ

Ad Widget . Ad Widget .

ಮೇಷ: ಮಂಗಳಕಾರಕನು, ಪ್ರಸನ್ನವದನನು ಆದ ಸುಬ್ರಹ್ಮಣ್ಯನನ್ನು ಪೂಜಿಸಿದರೆ, ಗುರು-ಶನಿ ಗ್ರಹಗಳ ಒಳ್ಳೆಯ ಫಲಗಳನ್ನು ಪಡೆಯಬಹುದು. ಮನುಷ್ಯನ ಶರೀರದಲ್ಲಿ ಹರಿಯುವ ಶಕ್ತಿಗೆ ಸುಬ್ರಹ್ಮಣ್ಯನೇ ಅಧಿಪತಿ. ಅವನ ಕೃಪೆಯಿದ್ದರೆ ಆರೋಗ್ಯದಲ್ಲಿ ಸಮಸ್ಯೆ ಬರುವುದಿಲ್ಲ. ಪ್ರತಿ ನಿತ್ಯ ಸುಬ್ರಹ್ಮಣ್ಯ ಸಹಸ್ರನಾಮ ಪಠಿಸಿ. ಸಾಧ್ಯವಾದಲ್ಲಿ ಗುರುವಾಯೂರಿನ ಗುರುವಾಯೂರಪ್ಪನನ್ನು ದರ್ಶಿಸಿ ಬನ್ನಿ. ಶುಭಫಲಗಳನ್ನು ಪಡೆಯುತ್ತೀರಿ.

Ad Widget . Ad Widget .

ವೃಷಭ: ಜೀವನದಲ್ಲಿ ಅಂದಾಜಿನಲ್ಲಿ ಕಾಲ ಕಳೆಯಬಾರದು. ನಾಳೆಯನ್ನು ನಾಳೆಯಾಗಿಯೇ ನೋಡಬೇಕು. ನಿಮ್ಮ ಗುರುವಿನ ಮೇಲೆ ಪೂಜ್ಯ ಭಾವನೆ, ಸಂಪೂರ್ಣ ನಂಬಿಕೆ ಇದ್ದಲ್ಲಿ ಕೆಲಸಕಾರ್ಯಗಳು ದಡಮುಟ್ಟುವಂತೆ ಕಾಪಾಡುತ್ತಾನೆ. ಈ ವಾರದಲ್ಲಿ ವೈಯಕ್ತಿಕವಾಗಿ ಒಂದು ಒಳ್ಳೆಯ ಕೆಲಸವನ್ನು ದೇವರೇ ನಿರೂಪಿಸಿ-ನಿಮಗೆ ದರ್ಶಿಸುತ್ತಾನೆ. ನಿಮಗೆ ಇಚ್ಛಿತ ಫಲವನ್ನು ಪೂರೈಸುತ್ತಾನೆ.

ಮಿಥುನ: ಸಪ್ತಮದಲ್ಲಿ ಗುರು ಇರುವುದರಿಂದ ಯಾವುದೇ ವಿಷಯವು ಅತಿಯಾಗಿ ಬಾಧಿಸದು. ಆದರೆ, ದುಃಖವನ್ನು ನೀಡಲು ಶನಿ ಪಂಚಮದಲ್ಲಿ ಇದ್ದಾನೆ. ದುರಾಸೆಯು ದುಃಖವನ್ನು ತರುತ್ತದೆ. ಅನ್ಯರನ್ನು ನೋಡಿ, ಅಸೂಯೆ ಬೇಡ. ತಪ್ಪು ಮಾಡದಿರಿ. ಯಾರಿಗೂ ದ್ರೋಹವಾಗದ ಹಾಗೆ ನಡೆದರೆ ಶ್ರೀಕೃಷ್ಣನು ಕೃಪೆ ತೋರುತ್ತಾನೆ. ಶ್ರೀಕೃಷ್ಣ ಅಷ್ಟೋತ್ತರ ಪಠಿಸಿ.

ಕಟಕ: ಜಲರಾಶಿಯವರಾದ ನೀವು ಜೀವನದಲ್ಲಿ ಅತಿಯಾದ ಒತ್ತಡವನ್ನು ದೂರ ಮಾಡಿ, ಜಾಣ್ಮೆಯಿಂದ ಕೆಲಸವನ್ನು ಮಾಡಬೇಕು. ಅಷ್ಟಮ ಶನಿಯಿಂದ ಆಗುವ ಬಾಧೆಗಳನ್ನು ಸುಧಾರಿಸಿಕೊಂಡು, ಮನಸ್ಸಿಗೆ ಉದ್ವೇಗ, ಶರೀರಕ್ಕೆ ಆಯಾಸ ಎರಡನ್ನೂ ಮಾಡಿಕೊಳ್ಳದೆ, ಶಾಂತಿಯಿಂದ ಜೀವನವನ್ನು ನಡೆಸಿಕೊಂಡು ಹೋಗಬೇಕು. ದಶಮ ಗುರುವಿಗೆ ಗುರು ದತ್ತಾತ್ರೇಯನನ್ನು ಪ್ರಾರ್ಥಿಸಿ.

ಸಿಂಹ: ನಿಮ್ಮ ಬುದ್ಧಿವಂತಿಕೆಯಿಂದ ಯಾವ ಕೆಲಸವನ್ನಾದರೂ ಸಾಧಿಸುವ ಚತುರತೆ ಹೊಂದಿರುವವರು. ಲೋಕಕ್ಕೆ ಬೆಳಕನ್ನು ಕೊಡುವ ಸೂರ್ಯನಾರಾಯಣನನ್ನು ಅರ್ಚಿಸಿದರೆ ನಿಮ್ಮ ತೇಜಸ್ಸು ಹೆಚ್ಚಾಗಿ ಮಾಡುವ ಕಾರ್ಯಗಳಲ್ಲಿ ಜಯವನ್ನು ಸಾಧಿಸಬಹುದು. ಭಗವಂತನ ಸ್ಮರಣೆ ಮರೆತರೆ ಮಾತ್ರ ಮನುಷ್ಯನಿಗೆ ಕಷ್ಟಗಳು ಆವರಿಸಿಕೊಳ್ಳುತ್ತವೆ. ಹಾಗಾಗಿ ಕೇತು ಅಷ್ಟೋತ್ತರ ಪಠಿಸಿ. ಗಣಪತಿಯನ್ನು ಪೂಜಿಸಿದರೆ ಬರುವ ಅದೃಷ್ಟಗಳಿಗೆ ವಿಘ್ನಗಳು ಬಾರದೆ ಮುಂದೆ ಸಾಗುತ್ತೀರಿ.

ಕನ್ಯಾ: ಗ್ರಹಬಾಧೆಯು ದೂರವಾಗಿ ಅಂದುಕೊಂಡ ಕಾರ್ಯಗಳು ಅಲ್ಪಸ್ವಲ್ಪ ನಡೆಯುತ್ತವೆ. ಇದಕ್ಕೆ ದೈವಸಹಾಯ ಬೇಕೇಬೇಕು. ಗುರುವಿನ ಮೇಲೆ ನಂಬಿಕೆ ಇರಲಿ. ನಿಮಗೆ ಸಹಾಯ ಮಾಡಿದವರನ್ನು ಮರೆಯಬೇಡಿ. ಅವರಿಗೆ ಮೋಸ ಮಾಡಿದರೆ ಭಗವಂತ ಮೆಚ್ಚಲಾರ. ಕುಲಗುರುಗಳನ್ನು ಪೂಜಿಸಿ-ಆಶೀರ್ವಾದ ಪಡೆದು ಬನ್ನಿ. ಷಷ್ಠ ಶನಿಯು ನಿಮ್ಮನ್ನು ಕಾಯುತ್ತಾನೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.

ತುಲಾ: ಆಲಸ್ಯ ಇದ್ದರೂ, ಜವಾಬ್ದಾರಿಯಿಂದ ಶ್ರೇಯಸ್ಸನ್ನು ಪಡೆಯುವ ಕಾಲ. ಕೆಲಸದಲ್ಲಿ ಮೆಚ್ಚುಗೆ ಗಳಿಸುತ್ತೀರಿ. ಗುರುಕಟಾಕ್ಷ ದೊರೆಯುವುದರಲ್ಲಿ ಯಾವುದೇ ಸಂದೇಹ ಇಲ್ಲ. ಮೌನವೇ ಬಂಗಾರವೆಂದು ತಾವು ತಿಳಿದಿದ್ದರೆ, ತಮ್ಮ ಮಾತನ್ನು ಕಟ್ಟಿ ಹಾಕಿ ಕೆಲಸದ ಕಡೆ ಲಕ್ಷ್ಯ ಕೊಟ್ಟು ನಡೆಯಿರಿ. ಗುರುವು ಕೆಲಸ ಕೈಗೂಡುವಂತೆ ಮಾಡುತ್ತಾನೆ. ತಾಳ್ಮೆಯಿಂದ ಮುಂದೆ ಸಾಗಿರಿ.

ವೃಶ್ಚಿಕ: ನೀವು ಅಂದುಕೊಂಡ ಕೆಲಸವು ಆಗುವ ಸಮಯ ಬಂದಿದೆ. ಬೇಸರ ಬೇಡ. ನೀವು ಬಯಸಿದಾಗ ಬೇಗನೇ ದೊರಕದಿದ್ದರೂ, ಪರಮಾತ್ಮನು ನಿಮಗೆ ಯಾವಾಗ, ಏನು ಕೊಡಬೇಕು ಎಂದು ತಿಳಿದಿರುತ್ತಾನೆ. ಒಳ್ಳೆಯ ಕಾಲಕ್ಕೆ ಕಾಯಬೇಕಾಗುತ್ತದೆ. ಬಂದದ್ದನ್ನು ಸದ್ವಿನಿಯೋಗ ಮಾಡಿ. ಋಣಮುಕ್ತರಾಗಿ ಬಾಳನ್ನು ದೈವಭಕ್ತಿಯಲ್ಲಿ ಸಾಗಿಸಿ. ದೇವರು ಫಲವನ್ನು ಕೊಟ್ಟೇ ಕೊಡುತ್ತಾನೆ. ಅನುಮಾನ ಬೇಡ. ಪ್ರಯತ್ನಗಳು ಮುಂದುವರಿಯಲಿ. ರಾಹು-ಕೇತುಗಳಿಗೆ ಸುಬ್ರಹ್ಮಣ್ಯನನ್ನು-ಗಣಪತಿಯನ್ನು ಅರ್ಚಿಸಿ. ಒಳ್ಳೆಯ ದಿನಗಳು ಬರಲಿವೆ.

ಧನುಸ್ಸು: ಕತ್ತಲೆಯ ನಂತರ ಬೆಳಕು. ಬೆಳಕಲ್ಲಿ ಮಾಡುವ ಕೆಲಸ ಶಾಶ್ವತ. ನಿಮಗೆ ಜನ್ಮಕೊಟ್ಟವರ ಪುಣ್ಯವು ಹರಿದುಬಂದು, ಅವರ ಅನುಗ್ರಹದಿಂದಲೇ ನಿಮ್ಮ ಕಾರ್ಯಚಟುವಟಿಕೆ ಸುಗಮವಾಗಿ ಸಾಗುತ್ತದೆ. ಅಲ್ಲದೆ, ನಿಮಗೆ ಇಷ್ಟಪೂರ್ವಕ ಸ್ಥಾನಮಾನ, ಕೀರ್ತಿ, ಒದಗಿ ಬರುವ ಕಾಲವಿದು. ನಿಮ್ಮ ಆಶೋತ್ತರ ಈಡೇರುತ್ತದೆ. ನಿಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿ, ಆನಂದವಿರುತ್ತದೆ. ಶ್ರೀರಾಮಚಂದ್ರನನ್ನು ಪೂಜಿಸಿ, ಗುರುಚರಿತ್ರೆಯ 5ನೇ ಅಧ್ಯಾಯವನ್ನು ಪಾರಾಯಣ ಮಾಡಿ.

ಮಕರ: ಜನ್ಮಶನಿಯು ದ್ವಿತೀಯಕ್ಕೆ ಬಂದು ನಿಮ್ಮ ಕಾರ್ಯಾಚರಣೆಯ ವೇಗವು ಉಂಟಾಗಿ, ಮನೋಧೈರ್ಯ ಪರಿಪೂರ್ಣವಾಗಿರುತ್ತದೆ. ಈ ಸಮಯದಲ್ಲಿ ಶನಿಯು ಕುಂಭಕ್ಕೆ ಬಂದರೂ ವಿಷಯಗಳನ್ನು ರ್ಚಚಿಸಿ, ನಿರ್ಧಾರ ಕೈಗೊಳ್ಳುವುದರಿಂದ ಕೆಲಸಗಳಲ್ಲಿ ಯಶಸ್ಸನ್ನು ಕಾಣುತ್ತೀರಿ. ಶನಿಯ ಪ್ರಾರ್ಥನೆ ಇರಲಿ. ಅಧ್ಯಾತ್ಮ ರಾಮಾಯಣದ ಸುಂದರಕಾಂಡ ಪಾರಾಯಣ ಮಾಡಿದರೆ ಜೀವನ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ. ಶ್ರೀರಾಮನ ಸ್ಮರಣೆ ಸದಾ ಇರಲಿ. ಗುರು ದತ್ತಾತ್ರೇಯನನ್ನು ಪೂಜಿಸಿ.

ಕುಂಭ: ದ್ವಾದಶ ಶನಿಯು ಜನ್ಮಕ್ಕೆ ಬಂದು ನಿಮ್ಮನ್ನು ಶೋಧಿಸಿ ಫಲವನ್ನು ನೀಡುತ್ತಾನೆ. ಆಗುಹೋಗುಗಳನ್ನು, ತಪ್ಪುಗಳನ್ನು, ಕ್ರೌರ್ಯವನ್ನು, ಸ್ವಾರ್ಥವನ್ನು ಬಿಟ್ಟು ಮನುಷ್ಯನ ದುರ್ನಡತೆಗಳನ್ನು ಸಂಹಾರ ಮಾಡುವ ಲಕ್ಷ್ಮೀನರಸಿಂಹನನ್ನು ಧ್ಯಾನಿಸಿ. ಇತರರ ಅಭಿಪ್ರಾಯವನ್ನು ಗೌರವಿಸಿ. ಉತ್ತಮ ಸಲಹೆಗಳನ್ನು ಅನುಷ್ಠಾನಕ್ಕೆ ತನ್ನಿ. ಸಾಲಿಗ್ರಾಮದ ಗುರು ನರಸಿಂಹನನ್ನು ಪೂಜಿಸಿ. ಜೀವನದ ಮಾರ್ಗವನ್ನು ಬದಲಿಸಿ, ಅವನೇ ನಿಮ್ಮನ್ನು ಮುನ್ನಡೆಸುತ್ತಾನೆ.

ಮೀನ: ಶನಿ ಶಂಚಾರ ಆರಂಭವಾಗಿದ್ದು, ಬಂದದ್ದನ್ನೆಲ್ಲ ಅನುಭವಿಸಿ. ತಾಳ್ಮೆಯೇ ನಿಮಗೆ ಈ ಸಂದರ್ಭದಲ್ಲಿ ದಿವ್ಯ ಔಷಧ. ಜೀವನದಲ್ಲಿ ಸುಖ-ದುಃಖವನ್ನು ಸಮವಾಗಿ ಅರಿತು ಬಾಳಬೇಕು. ಅತಿಯಾದ ಧನ ಬಂದರೂ ದುಃಖವನ್ನು ತರುತ್ತದೆ. ನಿಮಗೆ ನೀವೇ ತೊಂದರೆ ತಂದುಕೊಳ್ಳದೆ, ಗುರು ಕೊಟ್ಟಿದ್ದನ್ನು ತೃಪ್ತಿಯಿಂದ ಬಳಸಿರಿ. ನಿಮ್ಮನ್ನು ನೀವು ಸ್ವಯಂ ಅರಿತು ಕುಲಗುರುಗಳ ಆಶೀರ್ವಾದ ಪಡೆದರೆ ಜೀವನವು ಶುಭವಾಗಿ ಸಾಗುತ್ತದೆ.

Leave a Comment

Your email address will not be published. Required fields are marked *