Ad Widget .

ಶೃಂಗೇರಿಯ ಈ ಕಾಲೇಜಿನಲ್ಲಿ ಕ್ಯಾಂಪಸ್ ಪ್ಲೇಸ್​​ಮೆಂಟ್, ನಾಳೆಯೆ ಇಂಟರ್ವ್ಯೂ!

ಸಮಗ್ರ ಉದ್ಯೋಗ: ಡಿಗ್ರಿ ಮುಗಿಸಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ನೋಡಿ ಬಂಪರ್ ಅವಕಾಶ. ಶೃಂಗೇರಿಯ ಶ್ರೀ ಜೆಸಿಬಿಎಂ ಕಾಲೇಜಿನಲ್ಲಿ ಖಾಸಗಿ ಕಂಪನಿಯೊಂದು ಪ್ಲೇಸ್​​ಮೆಂಟ್ ಡ್ರೈವ್ ನಡೆಸುತ್ತಿದೆ. ಜೆಸಿಬಿಎಂಸಿ ಕ್ಯಾಂಪಸ್​​​ನಲ್ಲಿ ನಾಳೆ ಕ್ಯಾಂಪಸ್ ಪ್ಲೇಸ್​​ಮೆಂಟ್ ಡ್ರೈವ್​ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದಾಗಿದೆ.

Ad Widget . Ad Widget .

VFS ಗ್ಲೋಬಲ್ ಸರ್ವೀಸಸ್ ಲಿಮಿಟೆಡ್ ಕಂಪನಿಯು ಉದ್ಯೋಗದಾತ ಸಂಸ್ಥೆಯಾಗಿ ಈ ಪ್ಲೇಸ್​​ಮೆಂಟ್​ನಲ್ಲಿ ಭಾಗಿಯಾಗಲಿದೆ. ಆಸಕ್ತರು ಜನವರಿ 8, 2024 ಅಂದರೆ ನಾಳೆ ಶೃಂಗೇರಿಯ ಜೆಸಿಬಿಎಂಸಿ ಕ್ಯಾಂಪಸ್​​​ನಲ್ಲಿ ನಡೆಯಲಿರುವ ಕ್ಯಾಂಪಸ್ ಪ್ಲೇಸ್​ಮೆಂಟ್ ಡ್ರೈವ್​​ನಲ್ಲಿ ಪಾಲ್ಗೊಳ್ಳಿ.

Ad Widget . Ad Widget .

ಹುದ್ದೆಯ ಮಾಹಿತಿ:
ಅಫೀಸರ್​​ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ಲೇಸ್​ಮೆಂಟ್ ನಡೆಸಲಾಗುತ್ತಿದೆ.

ಉದ್ಯೋಗದ ಸ್ಥಳ:
ಬೆಂಗಳೂರು

ವೇತನ:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 23,200 ರೂ. ಸಂಬಳ ಕೊಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು.

ಪ್ಲೇಸ್​ಮೆಂಟ್ ನಡೆಯುವ ಸ್ಥಳ & ಸಮಯ
JCBMC ಕ್ಯಾಂಪಸ್
ಶೃಂಗೇರಿ

ಸಮಯ ಬೆಳಗ್ಗೆ 9.30ಕ್ಕೆ

ಸೂಚನೆ: ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್​ ಹಾಗೂ ಇತರೆ ಅಗತ್ಯ ದಾಖಲಾತಿಗಳೊಂದಿಗೆ ನಿಗದಿಪಡಿಸಿರುವ ಸಮಯಕ್ಕೆ ಸರಿಯಾಗಿ ಸ್ಥಳದಲ್ಲಿ ಹಾಜರಿರಬೇಕು.

Leave a Comment

Your email address will not be published. Required fields are marked *