Ad Widget .

ಬೆಳಗಾವಿ:ಪ್ರೇಮಿಗಳೆಂದು ಭಾವಿಸಿ ಸಹೋದರ-ಸಹೋದರಿ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಸಮಗ್ರ ನ್ಯೂಸ್: ಪ್ರೇಮಿಗಳೆಂದು ಭಾವಿಸಿ ಸಹೋದರ ಮತ್ತು ಸಹೋದರಿ ಮೇಲೆ ಅನ್ಯಕೋಮಿನ ಯುವಕರು ನೈತಿಕ ಪೊಲೀಸಗಿರಿ ನಡೆಸಿರುವ ಘಟನೆ ಬೆಳಗಾವಿಯ ಕೋಟೆ ಕರೆ ಆವರಣದಲ್ಲಿ ನಡೆದಿದೆ.

Ad Widget . Ad Widget .

ಬೆಳಗಾವಿ ತಾಲೂಕಿನ ನಿವಾಸಿಗಳಾದ 24 ವರ್ಷದ ಯುವತಿ, 21 ವರ್ಷದ ಯುವಕ ಯುವನಿಧಿ ಅರ್ಜಿ ಸಲ್ಲಿಸಲು ಬಂದಿದ್ದರು. ಯುವತಿ ಮುಖಕ್ಕೆ ಬಟ್ಟೆ ಕಟ್ಟಿದ್ದಳು, ಯುವಕ ಹಣೆಗೆ ತಿಲಕ ಇಟ್ಟುಕೊಂಡಿದ್ದನು. ಇವರನ್ನು ಕಂಡ ಅನ್ಯಕೋಮಿನ 16ಜನ ಯುವಕರ ಗ್ಯಾಂಗ್​ ಹಿಂದೂ‌ ಯುವಕ, ಮುಸ್ಲಿಂ ಯುವತಿ ಪ್ರೇಮಿಗಳೆಂದು ಥಳಿಸಿದ್ದಾರೆ. ನಂತರ ಹತ್ತಿರವೊಂದರ ಕೊಠಡಿಯಲ್ಲಿ 2-3 ಗಂಟೆಗಳ ಕಾಲ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದಾರೆ. ಬಳಿಕ ಯುವತಿ ಮೊಬೈಲ್ ನಿಂದ ಕುಟುಂಬಸ್ಥರಿಗೆ ಕರೆ‌‌ ಮಾಡಿದ್ದಾರೆ. ಆಗ ಕುಟುಂಬಸ್ಥರು ಅವರಿಬ್ಬರು ಸಹೋದರಿ, ಸಹೋದರರು ಎಂದು ಹೇಳಿದರೂ ನಂಬದೆ, ಮೊಬೈಲ್ ಸ್ವೀಚ್ ಆಫ್ ಮಾಡಿ ಮತ್ತೆ ಚಿತ್ರಹಿಂಸೆ ಕೊಟ್ಟಿದ್ದಾರೆ.

Ad Widget . Ad Widget .

ಕೂಡಲೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೊಬೈಲ್​ ಲೊಕೇಶನ್ ಆಧರಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ. 16 ಜನರಲ್ಲಿ ಓರ್ವ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಂಭೀರ ಗಾಯಗೊಂಡ ಯುವಕ ಮತ್ತು ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು ಯುವತಿಯ ತಾಯಿ ಹಿಂದೂ, ತಂದೆ ಮುಸ್ಲಿಂ ಆಗಿದ್ದು, ಪ್ರೀತಿಸಿ ಮದುವೆ ಆಗಿದ್ದಾರೆ. ಯುವತಿ ತನ್ನ ಚಿಕ್ಕಮ್ಮನ ಮಗನ ಜತೆಗೆ ಅರ್ಜಿ ಹಾಕಲು ಹೋದಾಗ ಘಟನೆ ನಡೆದಿದೆ.

Leave a Comment

Your email address will not be published. Required fields are marked *