ವಿಜಯಪುರದಲ್ಲಿ ನಡೆಯಿತು ವಿಚಿತ್ರ ಆತ್ಮಹತ್ಯೆ| ಶಾಸ್ತ್ರೋಕ್ತವಾಗಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ..?

ಸಮಗ್ರ ನ್ಯೂಸ್: ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕೇಳಿದ್ದೇವೆ. ಆದರೆ, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ವಿಚಿತ್ರ ಆತ್ಮಹತ್ಯೆ ನಡೆದಿದೆ.
‘ಕಂಬಳಿ ಮೇಲೆ ಅಕ್ಕಿಯಿಂದ ಮಂಡಲ ಹಾಕಿ, ಕೊರಳಲ್ಲಿ ಮೆಣಸಿಕನಾಯಿ ಹಾಗೂ ಲಿಂಬೆಕಾಯಿ ಕಟ್ಟಿಕೊಂಡು ವಿಚಿತ್ರ ರೀತಿಯಲ್ಲಿ ವ್ಯಕ್ಯಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಡಿವೆಪ್ಪ (43) ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

Ad Widget ... ..

ಇತ ಪಿತ್ರಾರ್ಜಿತವಾಗಿ ಬಂದಿದ್ದ 35 ಎಕರೆಗೂ ಆಧಿಕ ಜಮೀನು ಮಾರಾಟ ಮಾಡಿದ್ದ. ಮಧ್ಯ ಸೇವನೆ ಹಾಗೂ ಇತರೆ ಚಟಗಳ ದಾಸನಾಗಿದ್ದ ಅಡಿವೆಪ್ಪ, ಆಸ್ತಿ ಮಾರಾಟ ಮಾಡಿದ ಬಳಿಕ ಮಾನಸಿಕವಾಗಿ ಆಘಾತಗೊಂಡಿದ್ದನಂತೆ. ಈ ಹಿನ್ನಲೆ ತನ್ನ ಎರಡೂ ಕೈಗಳಲ್ಲಿ ಕೆಂಪು ಬಟ್ಟೆಯಲ್ಲಿ ನಿಂಬೆ ಹಣ್ಣು ಕಟ್ಟಿಕೊಂಡು ಇಂದು ಮುಂಜಾನೆ ಬೇವಿನ ಮರಕ್ಕೆ ನೇಣು ಹಾಕಿಕೊಂಡು ವಿಚಿತ್ರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಝಳಕಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ

Ad Widget

Leave a Comment

Your email address will not be published. Required fields are marked *