Ad Widget .

ಬೆಳ್ಳಾರೆ: ಪವರ್ ಟಿವಿ ಎಂ.ಡಿ ರಾಕೇಶ್ ಶೆಟ್ಟಿ ಮೇಲಿನ ಕೇಸು ವಾಪಸ್ ತೆಗೆಯುವಂತೆ ಮಹಿಳೆಗೆ ಜೀವ ಬೆದರಿಕೆ| 11 ಮಂದಿ ವಿರುದ್ಧ ದೂರು ದಾಖಲು

ಸಮಗ್ರ ನ್ಯೂಸ್: ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ವಿರುದ್ದ ನೀಡಲಾದ ಕೇಸು ವಾಪಾಸು ಪಡೆಯುವಂತೆ ಒತ್ತಾಯಿಸಿ ಮಹಿಳೆಯೋರ್ವರಿಗೆ ಜೀವ ಬೆದರಿಕೆ ಒಡ್ಡಿದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯ ಕೊಳ್ತಿಗೆಯಿಂದ ವರದಿಯಾಗಿದೆ.

Ad Widget . Ad Widget .

ಕೊಳ್ತಿಗೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಒಡ್ಡಿರುವುದಾಗಿ ಮಹಿಳೆಯೋರ್ವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ‌ ಜ.05ರಂದು ದೂರು ನೀಡಿದ್ದು, 11 ಮಂದಿ ವಿರುದ್ದ‌ ಕೇಸು ದಾಖಲಾಗಿದೆ.

Ad Widget . Ad Widget .

ಚಿತ್ರಪ್ರಭಾ ರೈ ಎಂಬವರು ಪೊಲೀಸ್ ದೂರು ನೀಡಿದ್ದು ದೂರಿನಲ್ಲಿ,
05-01-2024 ರಂದು ಸಂಜೆ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಕೊಳಿಗೆ ಸ್ಥಳ ಮನೆ ಎಂಬಲ್ಲಿ ನಾನು ಮನೆಗೆ ಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ಆರೋಪಿಗಳಾದ 1) ಪ್ರದೀಶ್ ಶೆಟ್ಟಿ 2) ಭಾಸ್ಕರ ರೈ ಧರ್ಮಸ್ಥಳ 3)ರವೀಂದ್ರ ಶೆಟ್ಟಿ. 4) ಬಾಲಕೃಷ್ಣ ಶೆಟ್ಟಿ 5) ಸರಳ ರೈ. 6) ಜಯಶ್ರೀ ಶೆಟ್ಟಿ 7 ) ಕನ್ಯಾಕುಮಾರಿ ರೈ 8) ಕಾವ್ಯಾ ರೈ 9) ಅಮಿತಾ ರೈ 10) ವಾರಿಜಾ ರೈ 11) ಯತೀಂದ್ರನಾಥ ಶೆಟ್ಟಿ ಹಾಗೂ ಇತರ ಅಪರಿಚಿತ ಇಬ್ಬರು ಮಹಿಳೆಯರು ಹಾಗೂ 6 ಪುರುಷರು ಗುಂಪು ಸೇರಿ ನನ್ನನ್ನು ತಡೆದು ನಿಲ್ಲಿಸಿ ಪವರ್ ಟಿವಿಯ ರಾಕೇಶ್ ಶೆಟ್ಟಿ ಮತ್ತು ಪ್ರಶಾಂತ ಎಂಬವರ ವಿರುದ್ಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ದಾಖಲಾದ ಪ್ರಕರಣವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ನಿಮಗೆ ಆಸಿಡ್ ಎರಚುತ್ತೇನೆ. ಹಾಗೂ ಕುಟುಂಬದವರ ಪ್ರಾಣ ತೆಗೆಯುತ್ತೇವೆ. ಮನೆಗೆ ಬೆಂಕಿ ಇಡುತ್ತೇವೆ ಎಂಬಿತ್ಯಾದಿ ಬೆದರಿಕೆ ಒಡ್ಡಿ ಹಲ್ಲೆ ನಡೆಸಲು ಯತ್ನಿಸಿದ್ದು ಹಾಗೂ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ.

ಆರೋಪಿಗಳು ವಾಹನ ನಂ KA19MH5201 KA2005373 & KA2102728 ನೇಯದ್ದರಲ್ಲಿ ಸ್ಥಳಕ್ಕೆಬಂದಿರುತ್ತಾರೆ. ಪವರ್ ಟಿವಿಯ ರಾಕೇಶ್ ಶೆಟ್ಟಿ ಹಾಗೂ ಪ್ರಶಾಂತ್ ಎಂಬವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ದ್ವೇಷದಿಂದ ಆರೋಪಿಗಳು ಈ ಕೃತ್ಯ ಎಸಗಿರುವುದಾಗಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *